ಬಂಟ್ವಾಳ ಪುರಸಭಾ ವ್ಯಾಪ್ತಿಯ ಕ್ಯಾಂಟೀನ್ ನಲ್ಲಿ ಪ್ರಥಮವಾಗಿ ತುಳು ಲಿಪಿಯ ನಾಮಫಲಕ ಅನಾವರಣ-ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳ ಮೂಡಬಿದಿರೆ ರಸ್ತೆಯ ಎಸ್.ವಿ.ಎಸ್.ಕಾಲೇಜು ಸಮೀಪದಲ್ಲಿರುವ ಶ್ರೀ ದುರ್ಗಾ ಕ್ಯಾಂಟೀನ್ ಗೆ ತುಳುನಾಡ ಯುವ ಸೇನೆ ವತಿಯಿಂದ ಪ್ರಥಮವಾಗಿ ತುಳು ಲಿಪಿಯಲ್ಲಿ ಬರೆದ ನಾಮಫಲಕವನ್ನು ಅಳವಡಿಸಿಲಾಗಿದೆ. ಜೈ ತುಳುನಾಡು ಇದರ ಸದಸ್ಯೆ ಪೂರ್ಣಿಮಾ ಅವರು ಇಂದು ನಾಮಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತುಳುನಾಡ ಯುವ ಸೇನೆಯ ಉಪಾಧ್ಯಕ್ಷ ಪ್ರತೀಕ್ ತುಲುವೆ, ಸಂಚಾಲಕ ಮಹೇಶ್, ಕಾರ್ಯದರ್ಶಿ ಚಿಂತನ್, ಸಹಕಾರ್ಯದರ್ಶಿ ಲಿಖಿತ್ ರಾಜ್ ಸೆರ್ಕಳ, ಸದಸ್ಯ ಅರುಣ್ ಕುಮಾರ್...







