Recent Posts

Monday, June 8, 2026
ಕಡಬ

ಕಡಬ: ರೇಬಿಸ್‍ಗೆ ಬಲಿಯಾದ ಕಾಲೇಜ್ ವಿದ್ಯಾರ್ಥಿನಿ – ಕಹಳೆ ನ್ಯೂಸ್

ಕಡಬ : ಕಾಲೇಜ್ ವಿದ್ಯಾರ್ಥಿನಿಯೊಬ್ಬಳು ರೇಬಿಸ್ ವೈರಸ್‍ಗೆ ತುತ್ತಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ನಡೆದಿದೆ. ಆಲಂಕಾರು ಗ್ರಾಮದ ಕೆದಿಲ ವರ್ಗಿಸ್ ಅವರ ಪುತ್ರಿ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿನ್ಸಿ ಸಾರಮ್ಮ (17) ಮೃತ ದುರ್ದೈವಿ.
ಗುರುವಾರ ಬೆಳಿಗ್ಗೆ ವಿನ್ಸಿಗೆ ತಲೆ ನೋವು ಕಾಣಿಸಿಕೊಂಡಿತ್ತು. ನೋವು ಶಮನಕ್ಕಾಗಿ ಸ್ಥಳೀಯ ಆಸ್ಫತ್ರೆಯಿಂದ ಮದ್ದು ತರಲಾಗಿತ್ತು. ಸಂಜೆಯ ವೇಳೆಗೆ ರೋಗ ಮತ್ತಷ್ಟು ಉಲ್ಭಣಿಸಿತ್ತು. ಹೀಗಾಗಿ ಆಕೆಯನ್ನು ಪುತ್ತೂರು ಖಾಸಗಿ ಆಸ್ಫತ್ರೆಗೆ ಕರೆದುಕೊಂಡು ಹೋಗಿ ಬಳಿಕ ಮಂಗಳೂರಿನ ಜಿಲ್ಲಾಸ್ಫತ್ರೆಗೆ ದಾಖಲಿಸಲಾಗಿತ್ತು. ಆದರೇ ಗುರುವಾರ ತಡ ರಾತ್ರಿ ಆಕೆ ನಿಧನ ಹೊಂದಿದ್ದಾರೆ.

ಜಾಹೀರಾತು

ನಾಲ್ಕು ತಿಂಗಳ ಹಿಂದೆ ಅಲಂಕಾರು ಪೇಟೆ ಹಾಗೂ ಇವರ ಮನೆಯ ಸುತ್ತಮುತ್ತ ಹುಚ್ಚುನಾಯಿ ಹಾವಳಿ ಇಟ್ಟಿತ್ತು ಹಾಗೂ ಇಬ್ಬರ ಮೇಲೆ ದಾಳಿ ಕೂಡ ಮಾಡಿತ್ತು. ಅಲ್ಲದೇ, ಈ ಪರಿಸರದ ಹಲವು ನಾಯಿಗಳಿಗೆ ಈ ಹುಚ್ಚು ನಾಯಿ ಕಚ್ಚಿತ್ತು ಎನ್ನಲಾಗಿದೆ. ಮೃತ ವಿನ್ಸಿ ಮನೆಯ ನಾಯಿಯು ಕೆಲವು ತಿಂಗಳುಗಳ ಹಿಂದೆ ರೇಬಿಸ್‍ಗೆ ಒಳಗಾಗಿ ಸಾವನ್ನಪ್ಪಿತ್ತು. ಅದೇ ನಾಯಿಯ ವೈರಸ್ ವಿದ್ಯಾರ್ಥಿನಿಗೂ ತಗಲಿರಬಹುದೆಂದು ಈಗ ಶಂಕೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು