Saturday, June 13, 2026

ಪ್ರಾದೇಶಿಕ

ಪುತ್ತೂರು

ಅ.12ರಂದು ಅಂಬಿಕಾ ವಿದ್ಯಾಲಯದಲ್ಲಿ ವಿವಿಧ ಬಗೆಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೋರ್ಸ್‍ಗಳ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಆಶ್ರಯದಲ್ಲಿ ಎಂಟು, ಒಂಬತ್ತು ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ಎನ್‍ಟಿಎಸ್‍ಇ, ಎನ್‍ಡಿಎ, ಕೆವಿಪಿವೈ, ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಫೌಂಡೇಶನ್ ಕೋರ್ಸ್‍ನ ಉದ್ಘಾಟನಾ ಸಮಾರಂಭ ಅಕ್ಟೋಬರ್ 12ರಂದು ಬೆಳಗ್ಗೆ ಹತ್ತು ಗಂಟೆಯಿಂದ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ನಡೆಯಲಿದೆ. ವಾರದ ಪ್ರತಿ ಶನಿವಾರ ಹಾಗೂ ಭಾನುವಾರದಂದು ನಡೆಯಲಿರುವ ತರಬೇತಿಯಲ್ಲಿ...
ಮೂಡಬಿದಿರೆ

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಜೆಇಇ/ನೀಟ್ ವಿಭಾಗದ ಅಧ್ಯಾಪಕ ದಯಾನಂದ ಪಿ. ಯವರಿಗೆ ಡಾಕ್ಟರೇಟ್ ಪದವಿ – ಕಹಳೆ ನ್ಯೂಸ್

ಮೂಡಬಿದಿರೆ : ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಜೆಇಇ/ನೀಟ್ ವಿಭಾಗದ ಅಧ್ಯಾಪಕಾರಾದ ಡಾ. ದಯಾನಂದ ಪಿ ಇವರು NMAMIT , ನಿಟ್ಟೆಯ ರಸಾಯನ ಶಾಸ್ತ್ರ ವಿಭಾಗದ ಪ್ರೊ ಡಾ. ಜನಾರ್ಧನ್ ನಾಯಕ್ ಇವರ ಮಾರ್ಗದರ್ಶನದಲ್ಲಿ ತಯಾರಿಸಿದ ‘ಸಿಂಥೆಟಿಕ್ ಆಂಡ್ ಆ್ಯಂಟಿ ಮೈಕ್ರೋಬಿಯಲ್ ಸ್ಟಡೀಸ್ ಆಫ್ ಹೆಟಿರೋಸೈಕ್ಲಿಕ್ ಸಿಸ್ಟಮ್ಸ್ ಕಂಟೈನಿಂಗ್ ಬ್ರಿಡ್ಜ್‍ಡ್ ನೈಟೋಜನ್ ಆಟಮ್’ ಎಂಬ ಸಂಶೋದನಾ ಪ್ರಬಂದಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು, ಇವರ...
ಬಂಟ್ವಾಳ

ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡದ ಮಂಗಳೂರು ವಲಯ ಪ್ರಧಾನ ವ್ಯವಸ್ಥಾಪಕಿ ಭೇಟಿ- ಕಹಳೆ ನ್ಯೂಸ್

ಬಂಟ್ವಾಳ: ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯ ಪ್ರಧಾನ ವ್ಯವಸ್ಥಾಪಕಿ ಗಾಯತ್ರಿ ರವಿಚಂದ್ರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಗ್ರಾಹಕರು ಮತ್ತು ಬ್ಯಾಂಕಿನ ನಡುವೆ ಉತ್ತಮ ಬಾಂಧವ್ಯ ವೃದ್ಧಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್ ಪುನೀತ್ ಶೆಟ್ಟಿ, ಅಸಿಸ್ಟೆಂಟ್ ಮ್ಯಾನೇಜರ್ ಸಂತೋμï ಕುಮಾರ್ ಚೌಟ, ದೇವಳದ ಅರ್ಚಕ ಪರಮೇಶ್ವರ ಭಟ್ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ ಮಾಡುವಂತೆ ವಿಶ್ವ ಹಿಂದೂ ಪರಿಷದ್ ವತಿಯಿಂದ ಮನವಿ – ಕಹಳೆ ನ್ಯೂಸ್

ಅನೇಕ ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಅಂತೆಯೇ ಇದೀಗ ಬಂಟ್ವಾಳ ತಾಲೂಕಿನ ಪಾಣೆಮಗಳೂರು ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿಗೆ ಹಾಗೂ ದೇವಸ್ಥಾನದ ಮ್ಯಾನೇಜರ್ ಆನಂದ್ ಕೆಯವರಿಗೆ ವಿಶೇಷ ಮನವಿ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಿಂದೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ದೇವಸ್ಥಾನ ಪ್ರವೇಶ ಮಾಡಬೇಕೆಂದು ವಿಶ್ವ ಹಿಂದೂ ಪರಿಷದ್ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ...
ದಕ್ಷಿಣ ಕನ್ನಡಪುತ್ತೂರುಸಿನಿಮಾ

ಅಜ್ಜನ ಮಾಯೆ’ ತುಳು ಕಿರುಚಿತ್ರಕ್ಕೆ ಲಕ್ಷಕ್ಕೂ ಅಧಿಕ ವೀಕ್ಷಣೆ, ಪ್ರಜ್ಞಾ ಆಶ್ರಮದಲ್ಲಿ ಕಿರುಚಿತ್ರ ತಂಡದ ಸಂಭ್ರಮ- ಕಹಳೆ ನ್ಯೂಸ್

ಪುತ್ತೂರು :  ಕರಾವಳಿಯಾದ್ಯಂತ ಭಾರಿ ಸದ್ದು ಮಾಡಿದ ಅಜ್ಜನ ಮಾಯೆ ತುಳು ಕಿರುಚಿತ್ರ 1 ಲಕ್ಷ ವೀಕ್ಷಣೆಯನ್ನು ಪಡೆದಿದ್ದು, ಈ ಸಂಭ್ರಮವನ್ನು ಪ್ರಜ್ಞಾ ಆಶ್ರಮದಲ್ಲಿ ಕಿರುಚಿತ್ರದ ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಯು ಟ್ಯೂಬಿನಲ್ಲಿ ಭರ್ಜರಿ ಯಶಸ್ವಿ ಪಡೆದ ಅಜ್ಜನ ಮಾಯೆ ಕಿರುಚಿತ್ರ, ನಾಡಿನಾದ್ಯಂತ ಸಂಚಲನ ಮೂಡಿಸಿ ಜನಮನ್ನಣೆಯನ್ನು ಗಳಿಸಿದೆ. ಈ ಗೆಲುವನ್ನು ಕಿರುಚಿತ್ರ ತಂಡ ಪ್ರಜ್ಞಾ ಆಶ್ರಮದ ದೇವರ ಮಕ್ಕಳ ಜೊತೆ ಸೇರಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದೆ. ಈ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಆದಿಶಕ್ತಿ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ಹರಕೆ ಅಗೇಲು ಸೇವೆಯ ದಿನ ಬದಲು- ಕಹಳೆ ನ್ಯೂಸ್

ಕಾವಳಮೂಡುರು :   ಶ್ರೀ ಆದಿಶಕ್ತಿ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ಪ್ರತೀ ಆದಿತ್ಯವಾರ ನಡೆಯುತ್ತಿದ್ದ ಅಗೆಲು ಸೇವೆ ಅಕ್ಟೋಬರ್ 16ರಿಂದ ಶನಿವಾರ ಮಧ್ಯಾಹ್ನ ನಡೆಯಲಿದೆ. ಸಂಕ್ರಮಣದಂದು ಮಾತ್ರ ರಾತ್ರಿ ಅಗೇಲು ಸೇವೆ ನಡೆಯಲಿದ್ದು, ಭಕ್ತರ ಹಿತಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಕ್ತಾಧಿಗಳು ಸಹಕರಿಸಬೇಕಾಗಿ ಕ್ಷೇತ್ರದ ಧರ್ಮದರ್ಶಿ ವಿಜಯ್ ಸಾಲ್ಯಾನ್‍ರವರು ವಿನಂತಿಸಿಕೊಂಡಿದ್ದಾರೆ. ಕಾರ್ಣಿಕಕ್ಕೆ ಹೆಸರುವಾಸಿಯಾಗಿರುವ ಶ್ರೀ ಆದಿಶಕ್ತಿ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ದಿನ ಕಳೆದಂತೆ ಭಕ್ತಾಧಿಗಳು ಹೆಚ್ಚಾಗುತ್ತಿದ್ದು,...
ಪುತ್ತೂರು

ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯಿಂದ ಸ್ವಾಯತ್ತತೆಯನ್ನು ಕೋರಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮನವಿ- ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ರಿ. ಇದರ ವಿದ್ಯಾಸಂಸ್ಥೆ ವಿವೇಕಾನಂದ ಮಹಾವಿದ್ಯಾಲಯವು ಈವರೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುತ್ತಾ ಬಂದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಕಾಲೇಜುಗಳ ಸ್ವಾಯತ್ತತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದೆ. ಇದರ ಅನ್ವಯ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ಧಾರದ ಮೇರೆಗೆ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯು ಸ್ವಾಯತ್ತತೆಯನ್ನು ಕೋರಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮನವಿಯನ್ನು ಸಲ್ಲಿಸಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ರಿಜಿಸ್ಟರ್...
ಬಂಟ್ವಾಳ

ಬಂಟ್ವಾಳದಲ್ಲಿ ಪರಿಚಿತರಿಂದಲೆ ಬಾಲಕಿಯ ಕಿಡ್ನಾಪ್, ಮತ್ತು ಬರಿಸುವ ಔಷಧಿ ನೀಡಿ ಗ್ಯಾಂಗ್ ರೇಪ್ – ಕಹಳೆ ನ್ಯೂಸ್

ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ, ಆಕೆಗೆ ಚಾಕಲೇಟಿನಲ್ಲಿ ಮತ್ತು ಬರಿಸುವ ಔಷಧಿ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆಯಲ್ಲಿ ನಡೆದಿದೆ. ಬಸ್ ಸ್ಟಾಂಡ್ ಬಳಿ ನಿಂತಿದ್ದ ಶಾಲಾ ಬಾಲಕಿಯನ್ನು ಪರಿಚಿತರೇ ಚಾಕಲೇಟಿನಲ್ಲಿ ಮತ್ತು ಬರಿಸುವ ಔಷಧಿ ನೀಡಿ, ಬಂಟ್ವಾಳದ ಅಮ್ಟಾಡಿಯ ಮನೆಯೊಂದಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾರೆ. ಬಳಿಕ ಆರೋಪಿಗಳು ಬಾಲಕಿಯನ್ನು ಬ್ರಹ್ಮರಕೂಟ್ಲು ಬಳಿ ಬಿಟ್ಟು ಹೋಗಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರದಲ್ಲಿ...
1 713 714 715 716 717 887
Page 715 of 887