Saturday, June 13, 2026

ಪ್ರಾದೇಶಿಕ

ಮಡಿಕೇರಿ

ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ – ಕಹಳೆ ನ್ಯೂಸ್

ಕೊಡಗು: ಪ್ರತಿ ವರ್ಷದಂತೆ, ಈ ವರ್ಷವೂ ಜೀವನದಿ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಆಗಿದೆ. ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಆಗಿದ್ದು, ಜೀವನದಿ ಕಾವೇರಿ ತೀರ್ಥೋದ್ಭವವನ್ನು ನೂರಾರು ಜನರು ಕಣ್ತುಂಬಿಕೊಂಡಿದ್ದಾರೆ. ಮಕರ ಲಗ್ನದಲ್ಲಿ ಸರಿಯಾಗಿ 1 ಗಂಟೆ 11 ನಿಮಿಷಕ್ಕೆ ತೀರ್ಥೋದ್ಭವ ಆಗಿದ್ದು, ಸಾವಿರಾರು ಭಕ್ತರು ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮದಿಂದಾಗಿ ಕೆಲವರಿಗೆ ಮಾತ್ರ ತೀರ್ಥೋದ್ಭವದಲ್ಲಿ ಭಾಗವಹಿಸೋದಕ್ಕೆ ಅವಕಾಶ ನೀಡಲಾಗಿತ್ತು....
ಪುತ್ತೂರು

ಪುತ್ತೂರು : ತಾ| ಖಾಝಿ ನೇಮಕ ವಿಚಾರದಲ್ಲಿ ತಕರಾರು: ಸಾಮಾಜಿಕ ಜಾಲತಾಣದಲ್ಲಿ ಹೊಯಿಕೈ ವಿಡಿಯೋ ವೈರಲ್– ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ತಾಲೂಕಿನ ಸಂಯುಕ್ತ ಖಾಝಿ ನೇಮಕದ ಕುರಿತು ಚರ್ಚಿಸುವ ಉದ್ದೇಶದಿಂದ ಅ.15ರಂದು ಇಲ್ಲಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಸಂಯುಕ್ತ ಖಾಝಿ ನೇಮಕ ವಿಚಾರದಲ್ಲಿ ಮಸೀದಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಹೊಯಿಕೈ ನೂಕುನುಗ್ಗಲು ನಡೆದಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ನಡೆದ ಸಭೆ...
ಪುತ್ತೂರು

ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ – ಪುತ್ತೂರು ವಿಧಾನಸಭಾ ಕ್ಷೇತ್ರದ ಅಮೃತ ಗ್ರಾಮಪಂಚಾಯತ್ ಮತ್ತು ಅಮೃತ ವಸತಿ ಯೋಜನೆಯ ಕಾರ್ಯಕ್ರಮ – ಶಾಸಕರಿಂದ ದೀಪ ಬೆಳಗಿಸಿ ಉಧ್ಘಾಟನೆ – ಕಹಳೆ ನ್ಯೂಸ್

ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಮೃತ ಗ್ರಾಮಪಂಚಾಯತ್ ಮತ್ತು ಅಮೃತ ವಸತಿ ಯೋಜನೆಯ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಸಂಜೀವ ಮಠಂದೂರುರವರು ದೀಪ ಬೆಳಗಿಸಿ ಉಧ್ಘಾಟಿಸಿದರು. ಅಜಾದಿ ಕಾ ಅಮೃತ ಮಹೋತ್ಸವ್ ಅಂಗವಾಗಿ ಪ್ರದಾನಮಂತ್ರಿಗಳಾದ ನರೇಂದ್ರ ಮೋದಿಯವರು, ಗ್ರಾಮಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು ಆಯ್ಕೆಗೊಂಡ ಪಂಚಾಯತ್‍ಗಳು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ತಮ್ಮ ವ್ಯಾಪ್ತಿಯ ಶಾಲೆ, ರಸ್ತೆ, ಸಮುದಾಯ ಕೇಂದ್ರ ಗಳನ್ನು...
ಪುತ್ತೂರು

ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಚನಾಲಕ್ಷ್ಮಿ 106 ನೇ ರ‍್ಯಾಂಕ್- ಕಹಳೆ ನ್ಯೂಸ್

ಪುತ್ತೂರು: ಐಐಟಿ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಚನಾಲಕ್ಷ್ಮಿ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 106ನೇ ರ‍್ಯಾಂಕ್ ಗಳಿಸುವುದರ ಮೂಲಕ ಪುತ್ತೂರು ತಾಲೂಕಿನಲ್ಲಿ ಅಮೋಘ ಸಾಧನೆಗೈದ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ 96.16 ಪರ್ಸಂಟೈಲ್ ಅಂಕ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 530 ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 1582ನೇ ರ‍್ಯಾಂಕ್ ಗಳಿಸಿದ್ದಳು. ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ...
ಬಂಟ್ವಾಳ

ಶ್ರೀರಾಮ ಶಿಶುಮಂದಿರದ ವತಿಯಿಂದ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರಂಭ ಕಾರ್ಯಕ್ರಮ- ಕಹಳೆ ನ್ಯೂಸ್

ಕಲ್ಲಡ್ಕ : ನವರಾತ್ರಿಯ ವಿಜಯದಶಮಿ ದಿನದಂದು ಶ್ರೀರಾಮ ಶಿಶುಮಂದಿರದ ವತಿಯಿಂದ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸರಸ್ವತಿ ಹೋಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಪರಮ ಪೂಜನೀಯ ಸಾಧ್ವಿ ಮಾತನಂದಮಯಿಯವರು ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ನಡೆಯುವಂತಹ 5 ಶಿಶುಮಂದಿರಗಳ ಒಟ್ಟು 52 ಮಕ್ಕಳಿಗೆ ಮಗುವಿನ ಕೈಯಲ್ಲಿ ಅರಶಿನ ಕೊಂಬನ್ನು ಹಿಡಿದು ಹರಿವಾಣದಲ್ಲಿ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಸುವುದರ ಮೂಲಕ ಅಕ್ಷರಾಭ್ಯಾಸ ಮಾಡಿಸಿ ಶುಭ ಹಾರೈಸಿ ಆಶೀರ್ವಚನ ಮಾಡಿದರು. ಕಾರ್ಯಕ್ರಮದಲ್ಲಿ...
ಮೂಡಬಿದಿರೆ

ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೆಇಇ ಅಡ್ವಾನ್ಸ್ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ- ಕಹಳೆ ನ್ಯೂಸ್

ಮೂಡಬಿದಿರೆ : ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ ಪ್ರವೇಶ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ವಿಘ್ನೇಶ್ ಹರೀಶ್ ನಾಯಕ್ ರಾಷ್ಟ್ರಮಟ್ಟದಲ್ಲಿ 574ನೇ ರ‍್ಯಾಂಕ್ ಹಾಗೂ ಸುಮುಕ್.ಎಸ್.ಕೆ 2376ನೇ ರ‍್ಯಾಂಕ್ (ಇ.ಡಬ್ಲ್ಯು.ಎಸ್) ಪಡೆದಿರುತ್ತಾರೆ. ಉತ್ತಮ ಸಾಧನೆಯನ್ನು ಮಾಡಿರುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಜೆ.ಇ.ಇ ಸಂಯೋಜಕರಾದ ರಾಮಮೂರ್ತಿ, ಡಾ....
ಸುಬ್ರಹ್ಮಣ್ಯ

ಚಲಿಸುತ್ತಿದ್ದ ಬೈಕ್‌ ಮೇಲೆ ಜಿಗಿದ ಕಡವೆ : ಬೈಕ್ ಸವಾರ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ರಸ್ತೆ ದಾಟುತ್ತಿದ್ದ ಕಡವೆಗೆ ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ನಡೆದಿದೆ. ಕುಮಾರಸ್ವಾಮಿ ಶಾಲೆಯ ಹೆಡ್ ಕ್ಲರ್ಕ್ ರಾಮಚಂದ್ರ ಅರ್ಬಿತಾಯ ಅವರು ರಾಜ್ಯಮಟ್ಟದ ಶಟಲ್ ಆಟಗಾರರಾಗಿದ್ದ, ಗಾಂಗೇಯ ಕ್ರಿಕೆಟ್ ತಂಡ ಸುಬ್ರಹ್ಮಣ್ಯದ ಆಟಗಾರರಾಗಿದ್ದ  ಅವರು ಪ್ರತಿನಿತ್ಯದಂತೆ ಕುಲ್ಕುಂದದ ಸೋಮಶೇಖರ್ ಅವರ ಮನೆಗೆ ಶಟಲ್ ಆಡಲು ಬೆಳಿಗ್ಗೆ 5:45ರ ಸಮಯ ತನ್ನ ತಮ್ಮನೊಂದಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ , ರಸ್ತೆ ದಾಟುತ್ತಿದ್ದ ಕಡವೆಗೆ ಢಿಕ್ಕಿಯಾಗಿ ಸ್ಥಳದಲ್ಲೇ...
ಪುತ್ತೂರು

ಪುತ್ತೂರಿನಲ್ಲಿ ನಾಳೆ FaGoಆ್ಯಪ್ ಲೋಕಾರ್ಪಣೆ- ಕಹಳೆ ನ್ಯೂಸ್

ಪುತ್ತೂರು: ನೆಹರು ನಗರದ ದೇವಿ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ FaGo ಆ್ಯಪ್ ನಾಳೆ ಬೆಳಗ್ಗೆ 8:30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ನಗರ ಸಭಾ ಅಧ್ಯಕ್ಷಜೀವಂಧರ್ ಜೈನ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುತೇಶ್ ಕೆ.ಪಿ, ಕಹಳೆ ವಾಹಿನಿಯ ಪ್ರಧಾನ ಸಂಪಾದಕರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಸುದ್ದಿ ಬಿಡುಗಡೆ ಸಿಇಒ ಸೃಜನ್ ಉರುಬೈಲ್ ಭಾಗಿಯಾಗಲಿದ್ದಾರೆ...
1 711 712 713 714 715 887
Page 713 of 887