ಯಶಸ್ವಿಯಾಗಿ ನಡೆದ ಶಿವಪ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ-ಬಂದಾರು 5ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ : ಪ್ರಥಮ ಬಹುಮಾನ ಬಾಚಿಕೊಂಡ ಯಜಮಾನ ಪ್ರೆಂಡ್ಸ್ – ಕಹಳೆ ನ್ಯೂಸ್
ಬಂದಾರು : ಶಿವಪ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ-ಬಂದಾರು ಇದರ ಆಶ್ರಯದಲ್ಲಿ 5ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ-2021 ಖಂಡಿಗ ಶಿವಪ್ರೆಂಡ್ಸ್ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಶ್ರೀ ರಘುಪತಿ ಭಟ್.ಸಿ.ಎ.ಬ್ಯಾಂಕ್ ಪದ್ಮುಂಜ ಇವರು ದೀಪ ಬೆಳಗಿಸುವುರ ಮೂಲಕ ಚಾಲನೆ ನೀಡಿದರು. ಸಭಾಧ್ಯಕ್ಷರಾಗಿ ಪ್ರಗತಿಪರ ಕೃಷಿಕರಾದ ಶ್ರೀ ಸುಂದರ ಗೌಡ ಖಂಡಿಗ, ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈರೋಳ್ತಡ್ಕ ಇಲ್ಲಿನ ಶಿಕ್ಷಕರಾದ ಶ್ರೀ ಮಾಧವ ಗೌಡ, ವಾಣಿ ಪದವಿ...







