Monday, June 15, 2026

ಪ್ರಾದೇಶಿಕ

ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮ –ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ವಿಟ್ಲದ ಮೈತ್ರೇಯಿ ಗುರುಕುಲದ ಆಚಾರ್ಯ ರಾಹುಲ್ ಭಟ್ ವಿವೇಕಾನಂದ ಎನ್ನುವ ಹೆಸರೇ ಒಂದು ರೋಮಾಂಚನ, ಪ್ರೇರಣೆ, ಹುಮ್ಮಸ್ಸು, ಧೀರತನ. ಅವರು ಯುವ ಜನಾಂಗಕ್ಕೆ ಬೋಧಿಸಿದ ವಿವೇಕ ಮಾರ್ಗ ಅತ್ಯಂತ ಮೌಲ್ಯಯುತವಾದದ್ದು. ವಿವೇಕಾನಂದರ ವೈಚಾರಿಕತೆ ಮತ್ತು ಆಧ್ಯಾತ್ಮ ಅರಿವು ಎಂದೆಂದಿಗೂ ಅರ್ಥಪೂರ್ಣವಾಗಿದೆ. ಅವರ ಸಾಮಾಜಿಕ ನಿಲುವು, ವಿವೇಕ ಚಿಂತನೆ ಪೂರ್ಣವಾಗಿ ಅರ್ಥೈಸಿಕೊಂಡು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕಾನಂದರ 159ನೇ ಜಯಂತಿ ಆಚರಣೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕಾನಂದರ 159ನೇ ಜನ್ಮದಿನವನ್ನು ಆಚರಿಸಲಾಯಿತು. “ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರೂ. ಧರ್ಮ, ತತ್ವಶಾಸ್ರ್ತ, ಇತಿಹಾಸ, ಕಲೆ, ಸಮಾಜ, ವಿಜ್ಞಾನ, ಸಾಹಿತ್ಯ ಬಲ್ಲವರಾಗಿದ್ದರು. ಶಿಕ್ಷಣದ ಜೊತೆಗೆ ಭಾರತೀಯ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಹೊಂದಿದ್ದರು. ನಿಜವಾದ ಭಾರತೀಯತೆಯ ಹುಡುಕಾಟದಲ್ಲಿರುವಾಗ ಇಲ್ಲಿನ ಶ್ರೇಷ್ಟತೆಯನ್ನು ಜಗತ್ತಿನಾದ್ಯಂತ ಎತ್ತಿಹಿಡಿದ ಧೀಮಂತ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದು. ನಿರ್ಭಯ, ಆಶಾವಾದ ಮತ್ತು ಸಾಮಾಜಿಕ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಾಲೆತ್ತೂರುನಲ್ಲಿ ನಡೆದ ಸ್ವಾಮೀ ಕೊರಗಜ್ಜ ದೈವದ ಅವಹೇಳನ ಪ್ರಕರಣದ ಪ್ರಮುಖ ಆರೋಪಿ ಹಾಗೂ ಇನ್ನಿತರ ಅರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮನವಿ- ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ವಿಟ್ಲ ಕೊಳ್ನಾಡು ಸಾಲೆತ್ತೂರುನಲ್ಲಿ ಮುಸ್ಲಿಂ ಸಮುದಾಯದ ಮದುವೆ ಕಾರ್ಯಕ್ರಮದಲ್ಲಿ ನಡೆದ ತುಳುನಾಡಿನ ಕಾರಣಿಕ ದೈವ ಸ್ವಾಮೀ ಕೊರಗಜ್ಜ ದೈವದ ಅವಹೇಳನ ಖಂಡಿಸಿ ಪ್ರಕರಣದ ಪ್ರಮುಖ ಆರೋಪಿಯಾದ ಮದುಮಗ ಕೇರಳದ ಮಂಜೇಶ್ವರ ತಾಲೂಕಿನ ಉಪ್ಪಳದ ನಿವಾಸಿ ಉಮರುಲ್ ಬಾಶಿತ್ ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದೆಲ್ಲ ಆರೋಪಿಗಳನ್ನು ಶ್ರೀಘ್ರದಲ್ಲಿ ಬಂಧಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಿಗಲ್ಲಿ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಜರಂಗದಳ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ನೆಲ್ಯಾಡಿಯಲ್ಲಿ ಮುಳಿಯ ಜ್ಯುವೆಲ್ಸ್ “ಸಿಲ್ವರಿಯಾ” ಫ್ರಾಂಚೈಸಿ ಶಾಪ್‍ನ ನೂತನ ಮಳಿಗೆಯ ಕೆಲಸ ಆರಂಭ- ಕಹಳೆ ನ್ಯೂಸ್

ಪುತ್ತೂರಿನ ಪ್ರತಿಷ್ಠಿತ 75 ವರ್ಷಗಳ ಪರಂಪರೆಯ ಮುಳಿಯ ಜ್ಯುವೆಲ್ಸ್ ಉಪ್ಪಿನಂಗಡಿಯ ನೆಲ್ಯಾಡಿಯಲ್ಲಿ ತನ್ನ ಬೆಳ್ಳಿ ಆಭರಣಗಳ “ಸಿಲ್ವರಿಯಾ” ಶೋರೂಂನ್ನ ಆರಂಭಿಸಲಿದೆ. ಆರ್ಕಿಟೆಕ್ ಹಾಗೂ ಇಂಟೀರಿಯರ್ ಡಿಸೈನರ್ ರವೀಶ್ ಅವರಿಗೆ ಮುಳಿಯ ಸಹೋದರರಾದ ಕೇಶವ ಪ್ರಸಾದ್ ಮುಳಿಯ ಕೃಷ್ಣ ನಾರಾಯಣ ಮುಳಿಯ ನಕ್ಷೆಯನ್ನು ನೀಡುವ ಮೂಲಕ ಕೆಲಸವನ್ನು ಆರಂಭಿಸಲಾಯಿತು. ಈ ಸಿಲ್ವರಿಯಾ ಫ್ರಾಂಚೈಸಿ ಶಾಪ್‍ನಲ್ಲಿ ಮಾಸಿಕ ಕಂತುಗಳನ್ನು ಸ್ವೀಕರಿಸಲಾಗಿದ್ದು, ಮುಂದೆ 2-3 ತಿಂಗಳಲ್ಲಿ ಈ ಶೋರೂಂ ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜ.12 ರಂದು AU ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅಚಲ್ ಉಬರಡ್ಕ ನಿರ್ದೇಶಿಸಿರುವ ‘ಸಂಘಧ್ಯೇಯ’ ಕಿರುಚಿತ್ರ ಬಿಡುಗಡೆ- ಕಹಳೆ ನ್ಯೂಸ್

ಪುತ್ತೂರು: ಎಯು ಕ್ರಿಯೇಷನ್ಸ್ ಅರ್ಪಿಸುವ, ಅಚಲ್ ಉಬರಡ್ಕ ನಿರ್ದೇಶಿಸಿರುವ 'ಸಂಘಧ್ಯೇಯ' ಕಿರುಚಿತ್ರವು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಜ.12ರಂದು AU Creationsನ ಯೂಟ್ಯೂಬ್ ಚಾನೆಲ್ ನಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಬಿಡುಗಡೆಗೊಳ್ಳಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯೊಂದಿಗೆ ರಕ್ತದಾನದ ಮಹತ್ವವನ್ನು ತಿಳಿಸುವ ಕಥಾಹಂದರವನ್ನು ಹೊಂದಿರುವ ಈ ಕಿರುಚಿತ್ರದಲ್ಲಿ ನವನೀತ ಕೃಷ್ಣ ಜೋಗಿಯಡ್ಕ, ಶ್ರೀವತ್ಸ ಭಾರದ್ವಾಜ್, ಕಿರಣ್ ಕುಮಾರ್ ಶಾಂತಿನಗರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ ವಾರ್ಷಿಕ ಕ್ರೀಡಾಕೂಟ – ಕಹಳೆ ನ್ಯೂಸ್

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ ವಾರ್ಷಿಕ ಕ್ರೀಡಾಕೂಟವನ್ನು ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಜಯಾನಂದ ಆಚಾರ್ಯ ಕ್ರೀಡಾ ಜ್ಯೋತಿಯ ಮೂಲಕ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋಳ್ತಮಜಲು ಗ್ರಾಮ ಪಂಚಾಯತ್‍ನ ಸದಸ್ಯರು ಅಮ್ಟೂರು ನಿವಾಸಿ ಎಲ್ಯಾಸ್ ಡಿ.ಸೋಜ, ಧ್ವಜಾರೋಹಣಗೈದರು. ಅಧ್ಯಕ್ಷತೆಯ ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ವಿದ್ಯಾರ್ಥಿ ಸಮುದಾಯ ಶಾರೀರಿಕ ದೃಢತೆಯನ್ನು ಗಳಿಸಬೇಕೆಂದರು...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಪುಂಜಾಲಕಟ್ಟೆ ಪೊಲೀಸ್ ಸ್ಟೇಷನ್‌ಗೆ ನೂತನ ಠಾಣಾಧಿಕಾರಿಯಾಗಿ ಆಯ್ಕೆಯಾದ ಸುತೇಶ್ ಕೆ.ಪಿ: ಒಂದೇ ವಾರದಲ್ಲಿ ಭರ್ಜರಿ ಕಾರ್ಯಾಚರಣೆ…!- ಕಹಳೆ ನ್ಯೂಸ್

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ನಡೆದ ಗಲಭೆಗೆ ಸಂಬ0ಧಿಸಿದ0ತೆ, ಉಪ್ಪಿನಂಗಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸ್ ಸ್ಟೇಷನ್‌ನ ನೂತನ ಠಾಣಾಧಿಕಾರಿ ಸುತೇಶ್ ಕೆ.ಪಿ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಉಪ್ಪಿನಂಗಡಿಯಲ್ಲಿ ಗಲಭೆ ನಡೆದ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಗಲಭೆಯಲ್ಲಿ ಮುಖ್ಯ ಪಾತ್ರದಾರಿಯಾಗಿದ್ದ ಪುಂಜಾಲಕಟ್ಟೆ ಎಸ್.ಡಿ.ಪಿ.ಐ ಸದಸ್ಯ ಮತ್ತು ಬೆಳ್ತಂಗಡಿ ಎಸ್.ಡಿ.ಪಿ.ಐನ ಉಪಾಧ್ಯಕ್ಷ ಹನೀಫ್‌ನನ್ನು ಪುಂಜಾಲಕಟ್ಟೆ ಪೊಲೀಸ್ ಸ್ಟೇಷನ್‌ಗೆ ನೂತನ ಠಾಣಾಧಿಕಾರಿಯಾಗಿ ಆಯ್ಕೆಯಾದ...
ದಕ್ಷಿಣ ಕನ್ನಡಪುತ್ತೂರುಸುದ್ದಿಸುಳ್ಯ

ಬೆಳ್ಳಾರೆಯಲ್ಲಿ `ತಿರುಮಲ ಹೋಂಡಾ`ದ 6ನೇ ಅಧಿಕೃತ ಸರ್ವೀಸ್ ಸೆಂಟರ್ ಉದ್ಘಾಟನೆ- ಕಹಳೆ ನ್ಯೂಸ್

ಪುತ್ತೂರು: ಬೆಳ್ಳಾರೆ ಆಸುಪಾಸಿನ ಜನತೆಗೆ ಉತ್ತಮ ಸೇವೆಯನ್ನು ಒದಗಿಸಬೇಕೆನ್ನುವ ನಿಟ್ಟಿನಲ್ಲಿ, ಹೋಂಡಾ ದ್ವಿಚಕ್ರವಾಹನಗಳ ಹೆಸರಾಂತ ಡೀಲರ್ `ತಿರುಮಲ ಹೋಂಡಾ' ಇದೀಗ ಬೆಳ್ಳಾರೆಯಲ್ಲಿ ಲೋಕಾರ್ಪಣೆಗೊಂಡಿದೆ. ಪುತ್ತೂರು, ಕಡಬ, ಸುಳ್ಯ ತಾಲೂಕಿನಾದ್ಯಂತ ಶಾಖೆಗಳನ್ನು ಹೊಂದಿರುವ `ತಿರುಮಲ ಹೋಂಡಾ'ದ 6ನೇ ಶಾಖೆಯು ಬೆಳ್ಳಾರೆಯ ಪೋಸ್ಟ್ ಆಫೀಸ್ ಮುಂಭಾಗದಲ್ಲಿ ಶುಭಾರಂಭಗೊ0ಡಿದೆ. ಸವಿಸ್ತಾರವಾಗಿ, ಸುಸಜ್ಜಿತವಾಗಿ ನಿರ್ಮಾಣಗೊಂಡ `ಹೋಂಡಾ'ದ ಅಧಿಕೃತ ಸರ್ವೀಸ್ ಸೆಂಟರ್‌ನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಪನ್ನೆಯವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನಿವೃತ್ತ...
1 670 671 672 673 674 887
Page 672 of 887