ದೃಢ ನಿರ್ಧಾರ ಮತ್ತು ಸ್ವಪ್ರೇರಣೆಯಿಂದ ಯೋಜಿತ ಗುರಿ ಸಾಧಿಸಲು ಸಾಧ್ಯ- ಡಾ. ಶೋಭಿತಾ ಸತೀಶ್ : ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಗುರಿ ನಿರ್ಧಾರ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ –ಕಹಳೆ ನ್ಯೂಸ್
ಪುತ್ತೂರು : ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ, ಪುತ್ತೂರಿನ ವಿವೇಕಾನಂದ ಬಿ.ಎಡ್ ಕಾಲೇಜು ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಗುರಿ ನಿರ್ಧಾರ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ನಡೆದಿದೆ. ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನದ ಸಂಯೋಜಕಿ ಡಾ. ಶೋಭಿತಾ ಸತೀಶ್ ಅವರು ಆತ್ಮ ವಿಶ್ವಾಸ ಮತ್ತು ದೃಢವಾದ ನಿರ್ಧಾರ ಕೈಗೊಳ್ಳುವುದು ಒಂದಕ್ಕೊದು ಪೂರಕವಾಗಿರುತ್ತದೆ. ಯಾರಲ್ಲಿ ಹೆಚ್ಚು ಆತ್ಮವಿಶ್ವಾಸ ಇರುತ್ತದೆಯೋ...







