ಆಳ್ವಾಸ್‍ನಿಂದ ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಉಚಿತ ನೇತ್ರ ತಪಾಸಣಾ ಶಿಬಿರ- ಕಹಳೆ ನ್ಯೂಸ್
ಮೂಡುಬಿದಿರೆ : ನಮ್ಮ ದೇಹದ ಎಲ್ಲಾ ಅಂಗಗಳು ಪ್ರಾಮುಖ್ಯತೆಯನ್ನು ಹೊಂದಿದ್ದು ಅದರಲ್ಲೂ ಕಣ್ಣು ಎಲ್ಲದಕ್ಕಿಂತಲೂ ಬಹಳ ಮುಖ್ಯ ವಾದುದು. ಕಣ್ಣಿನ ಸಮಸ್ಯೆಗೆ ಶೇ 90ರಷ್ಟು ಪರಿಹಾರ ಕಲ್ಪಿಸಲು ನಮ್ಮ ದೇಶ ಹಾಗೂ ತಜ್ಞ ವೈದ್ಯರು ಶಕ್ತರಾಗಿದ್ದಾರೆ. ಆದರೆ ಮೂಢನಂಬಿಕೆಗಳಿಂದ ಹೊರಬಂದು ಸೂಕ್ತ ಕಾಲದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಈ ಚಿಕಿತ್ಸಾ ಶಿಬಿರದ ರೂವಾರಿ ಡಾ.ಎಂ.ಮೋಹನ ಆಳ್ವ ಸಲಹೆ ನೀಡಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್...







