ಪಡುಮಾರ್ನಾಡಿನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ, ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು- ಕಹಳೆ ನ್ಯೂಸ್
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್, ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಇವುಗಳ ವತಿಯಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನಾಲ್ಕು ದಿನಗಳ ಕಾಲ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಪಂಚಾಯತ್ ವತಿಯಿಂದ ಹಲವು ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ಈಗಾಗಲೇ ಹಮ್ಮಿಕೊಂಡಿದ್ದು ಮುಂದುವರೆದ ಭಾಗವಾಗಿ ಈ ಶಿಬಿರವನ್ನು ಆಯೋಜಿಸಲಾಗಿದ್ದು ಗ್ರಂಥಾಲಯ ಮೇಲ್ವೀಚಾರಕಿ ವನಿತಾ ಅವರು ಮಕ್ಕಳಿಗೆ ಪೇಪರ್ ಬಳಸಿ ಹೂಗಳನ್ನು ರಚಿಸುವುದು, ಪೇಪರ್ ಲೋಟಗಳನ್ನು ಬಳಸಿ ಆಟದ ವಸ್ತುಗಳ ರಚನೆ, ಡ್ರಾಯಿಂಗ್, ಪ್ರಬಂಧ...







