ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆಯಿಂದ ಗೊಂಬೆ ಕುಣಿತದ ಗೋಪಾಲಕೃಷ್ಣ ಬಂಗೇರ-ಕಹಳೆ ನ್ಯೂಸ್
ಬಂಟ್ವಾಳ: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿಯ ನಿವಾಸಿ, ಗೊಂಬೆ ಕುಣಿತದ ಮೂಲಕ ಪ್ರಸಿದ್ಧರಾಗಿರುವ ಗೋಪಾಲಕೃಷ್ಣ ಬಂಗೇರ ಅವರು ಭಾಜನರಾಗಿದ್ದಾರೆ. ಇವರು ಬಾಲ್ಯದಲ್ಲೇ ಸೈಕಲ್ ಬ್ಯಾಲೆನ್ಸ್ ಕಲಿತು ಕೇರಳದ ಕೆ.ಆರ್.ಮಣಿ ತಂಡದಲ್ಲಿ ಸೈಕಲ್ ಬ್ಯಾಲೆನ್ಸರ್ ಆಗಿ ಕಲಾ ಬದುಕು ಆರಂಭಿಸಿದ ಬಂಗೇರ, ಬಳಿಕ ಗೊಂಬೆ ಕುಣಿತಕ್ಕೆ ಆಕರ್ಷಿತರಾಗಿ ಬೆಳ್ತಂಗಡಿಯ ಶೆಟ್ಟಿ ಆಟ್ರ್ಸ್ ಗೊಂಬೆ ಬಳಗದಲ್ಲಿ ಕಲಾವಿದರಾಗಿ ಸೇರಿದರು. 8...







