ಸತೀಶ್ ರವರ ವಾರದ ಮೂರು ಬಾರಿಯ ಡಯಾಲೀಸ್ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ನೆರವು – ಕಹಳೆ ನ್ಯೂಸ್
ಬಂಟ್ವಾಳ: ಪಾಣೆಮಂಗಳೂರಿನ ಮೊಗರ್ನಾಡು ನಿವಾಸಿ 47 ವರ್ಷದ ಸತೀಶ್ ಅವರ ಕುಟುಂಬವು ಚಿಂತಾಜನಕ ಸ್ಥಿತಿಯಲ್ಲಿದೆ. ಮೆಲ್ಕಾರಿನ ಹೋಟೆಲೊಂದರಲ್ಲಿ ದುಡಿಯುತ್ತಿದ್ದ ಇವರು ಸುಖೀ ಜೀವನ ನಡೆಸುತ್ತಿದ್ದರು. ವಿಧಿಯಾಟವೋ ಏನೋ ಎಂಬ೦ತೆ ಏಕಾಏಕಿ ಇವರ ಎರಡು ಕಿಡ್ನಿ ವೈಫಲ್ಯದಿಂದ ಖಾಯಿಲೆಗೆ ತುತ್ತಾಗಿ ಇಡೀ ಕುಟುಂಬದ ಆಧಾರವೇ ನೆಲಕ್ಕುರುಳಿದಂತಾಗಿದೆ. ವಾರಕ್ಕೆ ಮೂರು ಬಾರಿ ಡಯಾಲಿಸೀಸ್ ಚಿಕಿತ್ಸೆ ಮಾಡಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಇವರ ಕುಂಟು೦ಬ, ದುಬಾರಿ ಖರ್ಚಿನ ಈ ಡಯಾಲಿಸೀಸ್...







