ಬಿಜೆಪಿ ದಕ್ಷಿಣ ಕನ್ನಡ ವತಿಯಿಂದ ನಾಳೆ (ಜೂ.17) ಬೃಹತ್ ವಾಹನ ಜಾಥಾ ಹಾಗೂ ವಿಜಯೋತ್ಸವ ಕಾರ್ಯಕ್ರಮ ; ಅಭೂತಪೂರ್ವ ವಿಜಯ ದಾಖಲಿಸಿ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಅಭಿನಂದನಾ ಕಾರ್ಯಕ್ರಮ..!!- ಕಹಳೆ ನ್ಯೂಸ್
ದಕ್ಷಿಣ ಕನ್ನಡದ ಸಂಸದರಾಗಿ ಅಭೂತಪೂರ್ವಜಯ ದಾಖಲಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಭಿನಂದನೆ ಹಾಗೂ ಕಾರ್ಯಕರ್ತರ ವಿಜಯೋತ್ಸವ ಕಾರ್ಯಕ್ರಮ ನಾಳೆ ಸಂಜೆ 4.30ಕ್ಕೆ ನಗರದ ಕುದ್ಮಲ್ ರಂಗರಾವ್ ಪುರ ಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ...







