ಶಾಸಕ ಗುರುರಾಜ ಗಂಟಿಹೊಳೆ ಅವರ ಮನವಿಗೆ ಸ್ಪಂದಿಸಿದ ಖಾಸಗಿ ಬಸ್ ಮಾಲಕರು : ಎಸ್.ವಿ.ಎಂ.ಎಸ್. ಬಸ್ ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೈಂದೂರು-ಕೊಲ್ಲೂರು ರೂಟ್ ನಲ್ಲಿ ಉಚಿತ ಪ್ರಯಾಣ: ಬಸ್ ಮಾಲಕರ ನಿರ್ಧಾರಕ್ಕೆ ಶಾಸಕರ ಅಭಿನಂದನೆ- ಕಹಳೆ ನ್ಯೂಸ್
ಬೈಂದೂರು : ಹಲವೆಡೆ ಶಾಲಾ ಮಕ್ಕಳಿಗೆ ಬಸ್ ಸೇವೆ ಅಲಭ್ಯವಾಗುತ್ತಿರುವುದನ್ನು ಮನಗಂಡು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆಯವರು ಖಾಸಗಿ ಬಸ್ ಮಾಲಕರೊಂದಿಗೆ ಹೆಚ್ಚುವರಿ ಬಸ್ ಸೇವೆಗೂ ಮಾತುಕತೆ ನಡೆಸಿದ್ದರು ಮತ್ತು ಸರ್ಕಾರಿ ಬಸ್ ಸೇವೆ ಎಲ್ಲ ಕಡೆಗಳಿಗೂ ಒದಗಿಸುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೂ ಸೂಚಿಸಿದ್ದರು. ಈ ಮಧ್ಯೆ ಶಾಸಕರ ಮನವಿಗೆ ಸ್ಪಂದಿಸಿ ಎಸ್.ವಿ.ಎಂ.ಎಸ್. ಬಸ್ ಮಾಲಕರು ಬೈಂದೂರಿನಿಂದ ಕೊಲ್ಲೂರು ಕಡೆಗೆ ಹೋಗುವ ಎಲ್ಲ ರೂಟ್ ಗಳಲ್ಲೂ ಸರ್ಕಾರಿ ಪ್ರಾಥಮಿಕ ಶಾಲೆ...







