ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊಟ್ಟಮೊದಲ ಬಾರಿಗೆ ನಾಳೆ ಪುತ್ತೂರಿಗೆ ಪವರ್’ಫುಲ್ ಮಿನಿಸ್ಟರ್ ವಿ. ಸುನಿಲ್ ಕುಮಾರ್ | ಮೇ 16 ರಂದು ” InstaBasket ” ಮಳಿಗೆ ಉದ್ಘಾಟನಾ ಸಮಾರಂಭ – ಹತ್ತೂರಿಗೂ ಮಾದರಿಯಾಗಲಿದೆಯಾ ಪುತ್ತೂರಿನ ಮಾಡೆಲ್..!? ಏನ್ ಇದೆ ಇಲ್ಲಿ..! ಯಾಕೆ ಇಲ್ಲಿಗೆ ಹೋಗ್ಬೇಕು ನಾವುಗೊತ್ತಾ..!? – ಕಹಳೆ ನ್ಯೂಸ್
ಪುತ್ತೂರು : ಪುತ್ತೂರು ಎರಡೆರಡು ಪ್ರಥಮಗಳಿಗೆ ಮೇ 16 ರಂದು ಸಾಕ್ಷಿಯಾಗಲಿದೆ. ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿಯಲ್ಲಿ ತಾಜಾ ತರಕಾರಿ, ಹಣ್ಣುಗಳು, ಜ್ಯೂಸ್ ಹಾಗೂ ಸಾಂಪ್ರದಾಯಿಕ ತಿಂಡಿಗಳ ಅಂಗಡಿ, ಜೊತೆಗೆ ವಿನೂತನ ಶೈಲಿಯ ಹತ್ತು ಹಲವು ವಿಷಯಗಳು ಹಾಗೂ ವಿಶೇಷತೆಗಳು ಪುತ್ತೂರಿಗರನ್ನು ಆಕರ್ಷಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಇದೇ ಮೊದಲಬಾರಿಗೆ ಪುತ್ತೂರಿಗೆ ಜಿಲ್ಲಾ ಉಸ್ತುವಾರಿ ಮಂತ್ರಿ, ಕರ್ನಾಟಕ ಸರಕಾರದ ಪವರ್ ಮಿನಿಸ್ಟರ್ ವಿ. ಸುನಿಲ್ ಕುಮಾರ್ ಉದ್ಘಾಟನಾ ಸಮಾರಂಭಕ್ಕೆ...






