Tuesday, May 21, 2024
ರಾಜಕೀಯರಾಜ್ಯಸುದ್ದಿಹುಬ್ಬಳ್ಳಿ

ಹುಬ್ಬಳ್ಳಿ ಗಲಭೆ | ತಲೆಮರೆಸಿಕೊಂಡಿದ್ದ ಮಾಸ್ಟರ್ ಮೈಂಡ್ ಆರೋಪಿ, ಮೌಲ್ವಿ ವಸೀಂ ಮುಂಬೈಯಲ್ಲಿ ಪೊಲೀಸ್ ವಶಕ್ಕೆ – ಕಹಳೆ ನ್ಯೂಸ್

ಹುಬ್ಬಳ್ಳಿ, ಏ 21 : ಹಳೆ ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿ ಮಂಟೂರ ರಸ್ತೆ ಮಿಲ್ಲತ್ ನಗರದ ವಸೀಂ ಪಠಾಣ್‌ನನ್ನು ಮುಂಬೈನಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿ ಗುರುವಾರ ನಗರಕ್ಕೆ ಕರೆ ತಂದಿದ್ದಾರೆ.

ಜಾಹೀರಾತು
ಜಾಹೀರಾತು

ಗಲಭೆ ವೇಳೆ ಆರೋಪಿಯು ಪೊಲೀಸ್ ವಾಹನ ಏರಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾದ ವೀಡಿಯೋ ವೈರಲ್ ಆಗಿತ್ತು. ಆತನ ಮೇಲೆ ಆರೋಪ ಬರುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ನಡುವೆ ವಸೀಂ ವೀಡಿಯೋವೊಂದನ್ನು ಹರಿಬಿಟ್ಟು ಹುಬ್ಬಳ್ಳಿ ಗಲಭೆಯ ಮಾಸ್ಟರ್‌ಮೈಂಡ್ ಎಂಬುದಾಗಿ ನನ್ನನ್ನು ಬಿಂಬಿಸಲಾಗುತ್ತಿದೆ. ಆದರೆ ನಾನು ಗಲಭೆಕೋರರನ್ನು ಸಮಾಧಾನ ಪಡಿಸುತ್ತಿದ್ದೆನೇ ಹೊರತು ಪ್ರಚೋದನೆ ನೀಡಿಲ್ಲ ಎಂದು ಹೇಳಿಕೆ ನೀಡಿದ್ದ. ಈ ವೀಡಿಯೋ ಜಾಡು ಹಿಡಿದು ಹೊರಟ ಪೊಲೀಸರಿಗೆ ಆತ ಕುಟುಂಬ ಸಮೇತ ಹೈದರಾಬಾದ್‌ನಲ್ಲಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಅಲ್ತಾಫ್ ಮುಲ್ಲಾ ನೇತೃತ್ವದ ತಂಡ ಹೈದರಾಬಾದ್‌ಗೆ ತೆರಳಿ ಆತನ ಹುಡುಕಾಟ ನಡೆಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಬಳಿಕ ಆತ ಮುಂಬೈಯಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ್ದ ತಂಡ ಬುಧವಾರ ಆತನನ್ನು ಬಂಧಿಸಿದೆ. ಮುಂಬೈಯಿಂದ ವಿಮಾನದ ಮೂಲಕ ಬೆಳಗಾವಿಗೆ ಕರೆ ತಂದು ಅಲ್ಲಿಂದ ಹುಬ್ಬಳ್ಳಿಗೆ ಕರೆ ತರಲಾಗಿದೆ.

ಜಾಹೀರಾತು
ಜಾಹೀರಾತು

ಇದಲ್ಲದೆ ಇಬ್ಬರು ರೌಡಿಶೀಟರ್‌ಗಳಾದ ಮುಲ್ಲಾ ಓಣಿಯ ತುಫೆಲಾ ಮುಲ್ಲಾ ಮತ್ತು ಮಂಟೂರು ರಸ್ತೆಯ ಹರಿಶ್ಚಂದ್ರ ಕಾಲೊನಿಯ ಅಬ್ದುಲ ಮಲ್ಲಿಕ ಬೇಪಾರಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ತಲೆಮರೆಸಿಕೊಂಡ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜಾಹೀರಾತು