Monday, June 15, 2026

ರಾಜಕೀಯ

ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

Shivadhwaj Shetty ನಿರ್ದೇಶನದ ‘ಕೊರಮ್ಮ’ ತುಳು ಚಲನಚಿತ್ರ ಆಗಸ್ಟ್ 11ಕ್ಕೆ ಬಿಡುಗಡೆ – ಕಹಳೆ ನ್ಯೂಸ್

  ಮಂಗಳೂರು: ತುಳುನಾಡ ಸಂಸ್ಕೃತಿ, ಆಚಾರ- ವಿಚಾರ, ನಡೆ-ನುಡಿ, ಜೀವನ ಪದ್ಧತಿ, ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರಸಿಕೊಂಡು ಕುತೂಹಲ ಹುಟ್ಟಿಸುವ ಕಥೆ ಹೆಣೆದು ಸುಂದರವಾಗಿ ಮೂಡಿಬಂದಿರುವ ತುಳು ಸಿನೆಮಾ 'ಕೊರಮ್ಮ', ಇದೇ ಆಗಸ್ಟ್ 11 ರ ಶುಕ್ರವಾರದಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶಿವಧ್ವಜ್ ಶೆಟ್ಟಿ ಪತ್ರಿಕಾಗೋಷ್ಢಿಯಲ್ಲಿ ತಿಳಿಸಿದರು.   ಚಿತ್ರವು ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ ಮುಂತಾದ ಕಡೆಗಳಲ್ಲಿ ಬಿಡುಗಡೆಯಾಗಲಿದೆ ಎಂದರು. ಸಫೈರ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ...
ಮೂಡಬಿದಿರೆರಾಜಕೀಯಸುದ್ದಿ

ವಿಪಕ್ಷೀಯರ ವಿರೋಧದ ಮಧ್ಯೆಯೇ ಉದ್ಘಾಟನೆಗೊಂಡ ಇರುವೈಲು ಗ್ರಾಮ ಪಂಚಾಯತ್ ನ ನೂತನ ಕಟ್ಟಡ – ಕಹಳೆ ನ್ಯೂಸ್

ಮೂಡುಬಿದಿರೆ: ಪ್ರೊಟೋಕಾಲನ್ನು ಪಾಲಿಸಿಲ್ಲ, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ವಿರೋಧ ಪಕ್ಷದ ಸದಸ್ಯರು ಮತ್ತು ಕೆಲ ಬೆಂಬಲಿತರ ವಿರೋಧದ ಮಧ್ಯೆ ಪೆÇಲೀಸರ ಬಂದೋಬಸ್ತಿನೊಂದಿಗೆ ಇರುವೈಲು ಗ್ರಾ.ಪಂ.ನ ಮತ್ತು ತೋಡಾರು ನೂತನ ಕಟ್ಟಡವು ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು. ನಂತರ ಮಾತನಾಡಿದ ಶಾಸಕರು ಈ ಹಿಂದೆ ಪ್ರೊಟೋಕಾಲನ್ನು ಪ್ರಕಾರವೇ ಆಮಂತ್ರಣ ಪತ್ರಿಕೆಯಲ್ಲಿ ಸಂಬಂಧಪಟ್ಟವರ ಹೆಸರುಗಳನ್ನು ಪ್ರಕಟಿಸಲಾಗಿತ್ತು. ಆದರೆ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ದಯಾವತಿ...
ರಾಜಕೀಯಸುದ್ದಿ

ಮಂಗಳೂರಿಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ : ಬರಮಾಡಿಕೊಂಡ ಕೈ ನಾಯಕರು -ಕಹಳೆ ನ್ಯೂಸ್

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದು ಇಂದು ಬೆಳಿಗ್ಗೆ ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸ್ವಾಗತ ಕೋರಲಾಯಿತು. ಸಿಎಂ ಜೊತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಆಗಮಿಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್ ದೀಪ್ ಕುಮಾರ್ ಜೈನ್,...
ರಾಜಕೀಯಸುದ್ದಿ

ಮಣಿಪುರ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ವಿವಿಧ ಸವಲತ್ತು ವಿತರಣೆ ಮಾಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ –ಕಹಳೆ ನ್ಯೂಸ್

ಕಾಪು ಕ್ಷೇತ್ರದ ಶಾಸಕಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಣಿಪುರ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದರು. ಶಾಸಕರು ಪಂಚಾಯತ್ ನ 25 ಶೇಕಡಾ ನಿಧಿಯಿಂದ ಕೊರಗ ಸಮುದಾಯದ 13 ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನದ ಆದೇಶ ಪತ್ರವನ್ನು ವಿತರಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಮಣಿಪುರ ಗ್ರಾಮ ಪಂಚಾಯತ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಶೆಟ್ಟಿ...
ಪುತ್ತೂರುರಾಜಕೀಯಸುದ್ದಿ

ಆರ್ಯಾಪು: ಗ್ರಾಮ ಪಂಚಾಯತ್ ಉಪಚುನಾವಣೆ; ಮತ್ತೇ ಬಿಜೆಪಿ ಗೆ ಸಡ್ಡು ಹೊಡೆದ ಪುತ್ತಿಲ ಪರಿವಾರ; ಬ್ಯಾಟ್ ಬೀಸಿ ಜಯಭೇರಿ ಬಾರಿಸಿದ ಸುಬ್ರಮಣ್ಯ ಬಲ್ಯಾಯ – ಕಹಳೆ ನ್ಯೂಸ್

ಪುತ್ತೂರು : ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಇಬ್ಬರು ಸದಸ್ಯರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ಜು.23 ರಂದು ಉಪಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ. ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆದ ಮತ ಎಣಿಕೆ ಮುಕ್ತಾಯಗೊಂಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಜಯಗಳಿಸಿದ್ದಾರೆ. ಆರ್ಯಾಪು ಗ್ರಾಮ ಪಂಚಾಯತ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಗದೀಶ್...
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಮಂಗಳೂರಲ್ಲಿ ಭಜರಂಗದಳದ ಮೂವರಿಗೆ ಗಡಿಪಾರು ನೋಟಿಸ್ ; ಸಿಡಿದೆದ್ದ ಹಿಂದೂ ಸಂಘಟನೆಗಳು – ಕಹಳೆ ನ್ಯೂಸ್

ಮಂಗಳೂರು: ಇಲ್ಲಿನ ಮೂವರು ಭಜರಂಗದಳದ (Bajrang Dal) ಕಾರ್ಯಕರ್ತರ ಗಡಿಪಾರು ವಿಚಾರ ಇದೀಗ ರಾಜ್ಯಾದ್ಯಂತ ಚರ್ಚೆಯಾಗ್ತಿದೆ. ಇದೊಂದು ಕಾಂಗ್ರೆಸ್ (Congress) ಸರ್ಕಾರದ ಹಿಂದೂ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಈ ನಡೆಗೆ ಹಿಂದೂ ಸಂಘಟನೆಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಮಂಗಳೂರಲ್ಲಿ (Mangaluru) ನೈತಿಕ ಪೊಲೀಸ್‍ಗಿರಿ ನಡೆಸಿದ್ದ ಭಜರಂಗದಳದ ಮೂವರು ಕಾರ್ಯಕರ್ತರನ್ನು ಗಡಿಪಾರು ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುಲ್ತಾನ್ ಜ್ಯುವೆಲ್ಲರಿಯ ಕಾರ್ಯಕ್ರಮ ಹಾಗೂ ಮರೋಳಿ ಹೋಳಿ ಆಚರಣೆ...
ರಾಜಕೀಯಸುದ್ದಿ

ರಾಜ್ಯ ಬಜೆಟ್‍ನಲ್ಲಿ ಮದ್ಯದ ದರ ಪರಿಷ್ಕರಣೆ : ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟು ಏರಿಕೆ – ಕಹಳೆ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‍ನಲ್ಲಿ ಘೋಷಿಸಿದ ಪ್ರಕಾರ, ಮದ್ಯದ ಬೆಲೆ ಇಂದಿನಿಂದ ಅನ್ವಯವಾಗುವಂತೆ ಹೆಚ್ಚಳವಾಗಿದೆ. ಸರ್ಕಾರ ಅಬಕಾರಿ ಸುಂಕವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಗರಿಷ್ಠ ಶೇ.20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದ, ಇನ್ನು ಜಾರಿಗೆ ತರಬೇಕಾದ ವಿವಿಧ ಯೋಜನೆಗಳ, ಗ್ಯಾರೆಂಟಿ ಯೋಜನೆಗಳಿಗೆ ಸಂಪನ್ಮೂಕ ಕ್ರೋಢೀಕರಣ ದೃಷ್ಟಿಯಿಂದ ಮದ್ಯದ ಬೆಲೆಯನ್ನು ಹೆಚ್ಚಿಸಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳ ರಿಟೇಲ್ ಮದ್ಯ ಮಾರಾಟದ...
ಉಡುಪಿರಾಜಕೀಯರಾಜ್ಯಸುದ್ದಿ

ಬಿಜೆಪಿ ಶಾಸಕರ ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ : ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ – ಕಹಳೆ ನ್ಯೂಸ್

ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಿರುವ ಸ್ಪೀಕರ್ ರವರ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಗೂಂಡಾರಾಜ್ ಆಡಳಿತ ಚಾಲ್ತಿಯಲ್ಲಿದೆ. ವಿಧಾನಸಭೆಯ ಸ್ಪೀಕರ್ ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಶಾಸಕರು ಸದನದಲ್ಲಿ ಗೂಂಡಾಗಿರಿ ನಡೆಸಿರುವುದನ್ನು ರಾಜ್ಯದ ಜನತೆ ಮರೆತಿಲ್ಲ. ಆಗ ಯಾವುದೇ ಅವಸರದ ಕ್ರಮ ಕೈಗೊಂಡಿರುವುದಿಲ್ಲ. ಪ್ರಜಾಪ್ರಭುತ್ವ...
1 43 44 45 46 47 232
Page 45 of 232