Sunday, April 26, 2026

ರಾಜಕೀಯ

ರಾಜಕೀಯ

Big Breaking : ಮುಸ್ಲಿಮರು ಜೆಡಿಎಸ್ ಗೆ ಓಟ್ ಹಾಕಿಲ್ಲ ; ನವ್ಯಾಕೆ ಅವರನ್ನು ಮಂತ್ರಿ ಮಾಡಬೇಕು ?ಮುಸ್ಲಿಂ ಸಮುದಾಯದ ವಿರುದ್ಧ ದೇವೇಗೌಡ ಗರಂ – ಕಹಳೆ ನ್ಯೂಸ್

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ವೋಟ್ ಹಾಕಿಲ್ಲ ಅಂತ ಮಾಜಿ ಪ್ರಧಾನಿ ದೇವೇ ಗೌಡ ಅವರು ದ್ವೇಷ ಸಾಧಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ. ಹೌದು. ಜೆಡಿಎಸ್ ಕೋಟಾದಲ್ಲಿ ಮುಸ್ಲಿಮರಿಗೆ ಸಚಿವ ಸ್ಥಾನವಿಲ್ಲ. ಮುಸ್ಲಿಮರು ನಮಗೆ ವೋಟ್ ಹಾಕಿಲ್ಲ. ಅವರ ಸಮುದಾಯಕ್ಕೆ ನಾವ್ಯಾಕೆ ಸಚಿವ ಸ್ಥಾನ ಕೊಡಬೇಕು ಅಂತ ತಮ್ಮನ್ನು ಭೇಟಿಯಾದ ಮುಸ್ಲಿಂ ನಾಯಕರ ಮುಂದೆ ದೇವೇಗೌಡರು ಗರಂ ಆಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಹಾಗಿದ್ರೆ ಉದ್ಯಮಿ,...
ರಾಜಕೀಯ

Exclusive : ವಿಜಯೋತ್ಸವದ ಹಾರದ ಬದಲು ಕಾರ್ಯಕರ್ತರಿಂದ ಪುಸ್ತಕ ಕೇಳಿ ಪಡೆದು ಬಡ ಮಕ್ಕಳಿಗೆ ವಿತರಿಸೂದರ ಮೂಲಕ ವಿಭಿನ್ನವಾಗಿ ವಿಜಯೋತ್ಸವ ಆಚರಿಸಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ – ಕಹಳೆ ನ್ಯೂಸ್

ಕಾರ್ಕಳ :ನೂತನವಾಗಿ ವಿಧಾನಸಭೆಗೆ ಆಯ್ಕೆಯಾದ ಕಾರ್ಕಳ ಬಿಜೆಪಿ ಶಾಸಕ ಒಂದು ವಿಭಿನ್ನ ಅಭಿಯಾನವೊಂದನ್ನು ಹಮ್ಮಿಕೊಂಡಿದ್ದಾರೆ. ಈ ಬಾರಿ ವಿಜಯೋತ್ಸವ ಆಚರಿಸುವಾಗ ನನಗೆ ಹಾರ ಹಾಕುವುದು ಬೇಡ ಹಾರ ಹಾಕುವ ಬದಲು ನನಗೆ ಪುಸ್ತಕ ನೀಡಿ ಎಂದು ಮನವಿ ಮಾಡಿದ್ದಾರೆ.ಸುನೀಲ್ ಕುಮಾರ್ ಅವರು ಮಾಡಿದ ಮನವಿಗೆ ಓಗೊಟ್ಟ ಸಾರ್ವಜನಿಕರು ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕರಿಗೆ ಹಾರ ಹಾಕುವ ಬದಲು ಪುಸ್ತಕ ನೀಡಿ ಅಭಿನಂದಿಸುತ್ತಿದ್ದಾರೆ. ಇದೀಗಲೇ ಭಾರಿ ಪ್ರಮಾಣದಲ್ಲಿ ಪುಸ್ತಕ ಸಂಗ್ರಹಣೆಯಾಗಿದ್ದು ಸಂಗ್ರಹಣೆಯಾದ...
ರಾಜಕೀಯ

ರಾಜ್ಯದ ಮೂವರು ಸಂಸದರ ರಾಜೀನಾಮೆ ಅಂಗೀಕಾರ – ಕಹಳೆ ನ್ಯೂಸ್

ಮೇ ,29 : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಶಿವಮೊಗ್ಗ ಸಂಸದ ಬಿ.ಎಸ್.​ ಯಡಿಯೂರಪ್ಪ, ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಮಂಡ್ಯ ಸಂಸದ ಪುಟ್ಟರಾಜು ಅವರ ರಾಜೀನಾಮೆ ಅಂಗೀಕಾರವಾಗಿದೆ. ಲೋಕಸಭೆ ಸ್ಪೀಕರ್​ ಸುಮಿತ್ರಾ ಮಹಾಜನ್​ ಅವರಿಗೆ ಈ ಮೂವರು ಸಲ್ಲಿಸಿದ್ದ ರಾಜೀನಾಮೆ ಅಂಗೀಕಾರವಾಗಿದ್ದು, ಈ ಬಗ್ಗೆ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಶಿವಮೊಗ್ಗ ಸಂಸದರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರ...
ರಾಜಕೀಯ

Breaking News : ಕೈ ಜೊತೆ ಸೇರಿ ರೈತರಿಗೆ ಕೈ ಕೊಟ್ಟ ಕುಮಾರಸ್ವಾಮಿ ; ರೈತ ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್

ಬೆಳಗಾವಿ : ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿ, ಬಹುಮತ ಸಾಬೀತುಪಡಿಸಿ 24 ಗಂಟೆ ಕಳೆಯುವುದರೊಳಗೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ವರದಿಯಾಗಿದೆ. ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಉದ್ದಗಲಕ್ಕೂ ತಾನು ಮುಖ್ಯಮಂತ್ರಿಯಾದ ಇಪ್ಪತ್ತ್ನಾಲ್ಕು ಗಂಟೆ ಒಳಗಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು ಇತ್ತ ಬಿಎಸ್ ಯಡಿಯೂರಪ್ಪನವರು ಕೂಡ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ಇಪ್ಪತ್ತ್ನಾಲ್ಕು...
ರಾಜಕೀಯ

ರೈತರಿಗಾಗಿ ಸೋಮವಾರ ಕರ್ನಾಟಕ ಬಂದ್ ಎಂದ ಬಿ.ಎಸ್. ಯಡಿಯೂರಪ್ಪ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಕೆಸರಿ ಪಡೆ ಸಜ್ಜು – ಕಹಳೆ ನ್ಯೂಸ್

ಬೆಂಗಳೂರು : ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಂಮಿಶ್ರ ಸರ್ಕಾರ  ಸಾಲಮನ್ನಾ ಘೋಷಣೆಯನ್ನು 24 ಗಂಟೆಯೊಳಗೆ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ  ಎಚ್ಚರಿಕೆ ನೀಡಿದ್ದಾರೆ. ವಿಶ್ವಾಸಮತ ಯಾಚನೆ ಪ್ರಸ್ತಾಪ ಕುರಿತು ಮಾತನಾಡಿದ ಬಿ.ಎಸ್. ಯಡಿಯೂರಪ್ಪ , ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವಂತೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿನ  ರೈತರ ಸಾಲಮನ್ನಾ ಮಾಡದಿದ್ದರೆ  ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಹೇಳಿದರು....
ರಾಜಕೀಯ

Breaking News : ಶಾಸಕಾಂಗ ಪಕ್ಷದ ಸಭೆಗೆ ಡಿ.ಕೆ. ಶಿವಕುಮಾರ್ ಗೈರು ! – ಕಹಳೆ ನ್ಯೂಸ್

ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಗೈರು. ಕಾಂಗ್ರೆಸ್ ನ ನಡೆಯಿಂದ ತೀವ್ರವಾಗಿ ಮನನೊಂದಿದ್ದಾರೆ. ಇದೇ ಕಾರಣಕ್ಕಾಗಿಯೆರ ಗೈರಾಗಿದ್ದಾರೆಯೇ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಸಿದ್ಧರಾಮಯ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಮುಖ ಸಭೆಗೆ ಡಿಕೆಶಿ ಗೈರು....
ರಾಜಕೀಯ

Big News : ಜೆಡಿಎಸ್ ಶಾಸಕರಿಗೆ ಎರಡು ಪ್ರತ್ಯೇಕ ವಿಪ್ ಜಾರಿ – ಕಹಳೆ ನ್ಯೂಸ್

ಬೆಂಗಳೂರು, ಮೇ 25- ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ಜೆಡಿಎಸ್ ಎರಡು ಪ್ರತ್ಯೇಕ ವಿಪ್‍ಗಳನ್ನು ತನ್ನ ಶಾಸಕರಿಗೆ ನೀಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಯೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ನೀಡಿದ್ದಾರೆ. ವಿಧಾನಸಭಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿರುವ. ಕೆ.ಆರ್.ರಮೇಶ್‍ಕುಮಾರ್ ಪರವಾಗಿ ಮತ ನೀಡುವಂತೆ ವಿಪ್ ನೀಡಿದ್ದಾರೆ....
ರಾಜಕೀಯ

Big News : ಕುಮಾರ ಪಟ್ಟಾಭಿಷೇಕಕ್ಕೆ ಪಟ್ಟದರಸಿ ರಾಧಿಕಾ ಕುಮಾರಸ್ವಾಮಿ ಗೈರು! – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಇಂದು ಸಂಜೆ 4.30ಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ರಾಜ್ಯದ ಹಾಗೂ ರಾಷ್ಟ್ರದ ತೃತೀಯ ರಂಗದ ಎಲ್ಲಾ ನಾಯಕರು ಸೋನಿಯಾ, ರಾಹುಲ್ ಸೇರಿ ಅನೇಕ ಕಾಂಗ್ರೆಸ್ ಹಿರಿಯ ಮುಖಂಡರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು ,ಸಚಿವರು ಭಾಗಿಯಾಗಿದ್ದರು. ಕುಮಾರಸ್ವಾಮಿ ಕುಟುಂಬದ ಎಲ್ಲಾ ಸದಸ್ಯರು ಭಾಗಿಗಳಾಗಿದ್ದರು ಆದರೆ, ಕುಮಾರಸ್ವಾಮಿಯರ ಪ್ರೀತಿಯ ಪತ್ನಿ ರಾಧಿಕಾ ಮಾತ್ರ ಗೈರಾಗಿದ್ದರು. ಇದು ಕುಮಾರಸ್ವಾಮಿಯವರಿಗೂ ಬೇಸರತಂದಿದೆ ಎಂಬ...
1 209 210 211 212 213 232
Page 211 of 232