Monday, April 27, 2026

ರಾಜಕೀಯ

ರಾಜಕೀಯಸುದ್ದಿ

ಶಿರಾಡಿ ಘಾಟಿ ರಸ್ತೆ ಶೀಘ್ರ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಪುತ್ತೂರು : ಶಿರಾಡಿ ಘಾಟಿ ರಸ್ತೆ ಶೀಘ್ರ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಆಗ್ರಹಿಸಿ ಗುಂಡ್ಯದಲ್ಲಿ  ಇಂದು ಪ್ರತಿಭಟನೆ ನಡೆಯಿತು. ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಮಾತನಾಡಿ, ವಾರದೊಳಗೆ ಲಘು ವಾಹನ ಸಂಚಾರಕ್ಕೆ ಅನುವು ಮಾಡಬೇಕೆಂದು ಮನವಿ ಮಾಡಿದರು....
ರಾಜಕೀಯ

ಜೆಡಿ‌ಎಸ್ ಮತ್ತು ಕಾಂಗ್ರೆಸ್ಸಿನ ಮೈತ್ರಿ ಸರಕಾರ ದಿನಕೂಲಿ ನೌಕರರಂತೆ ಎಂದು ಟೀಕಿಸಿದ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಮಂಗಳೂರು, ಅ 7: ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿ‌ಎಸ್ ಮತ್ತು ಕಾಂಗ್ರೆಸ್ಸಿನ ಮೈತ್ರಿ ಸರಕಾರ ದಿನಕೂಲಿ ನೌಕರನಂತಿದೆ. ಈ ಸರಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್‌ಕುಮಾರ್ ಕಟೀಲು ನಂಬರ್ ಸಂಸದ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಇವರ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನಾಲ್ಕು ವರ್ಷಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಮುದ್ರಾ ಯೋಜನೆಯ...
ರಾಜಕೀಯ

ಕರುಣಾನಿಧಿ ನೋಡಲು ದೇವೇಗೌಡರು ಚೆನ್ನೈಗೆ – ಕಹಳೆ ನ್ಯೂಸ್

ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆವು ದಿವಸಗಳಿಂದ ಚೆನ್ನೈಯ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ಮುಖ್ಯಸ್ಥ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಭೇಟಿಯಾಗಲಿದ್ದಾರೆ....
ರಾಜಕೀಯ

ಮೋದಿ ತಿರುಗೇಟಿಗೆ ಹೈರಾಣಾದ ವಿಪಕ್ಷಗಳು ; ಪ್ರಧಾನಿಯಿಂದ ಐತಿಹಾಸಿಕ ಭಾಷಣ – ಕಹಳೆ ನ್ಯೂಸ್

ನವದೆಹಲಿ: ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ, ಚೌಧರಿ ಚರಣ್ ಸಿಂಗ್, ಚಂದ್ರಶೇಖರ್ ಅವರಿಗೆ ಮೊದಲು ಬೆಂಬಲ ನೀಡಿ ಅನಂತರ ಅಪಮಾನ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷವಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ವಾಗ್ದಾಳಿ ನಡೆಸಿದರು. ಅವಿಶ್ವಾಸ ನಿರ್ಣಯ ಮಂಡನೆ ಮೇಲೆ ಸಂಸತ್ ನಲ್ಲಿ ಮಾತನಾಡಿದ ಅವರು, 1979ರಲ್ಲಿ ಚೌಧರಿ ಚರಣ್ ಸಿಂಗ್ ಗೆ ಮೊದಲು ಬೆಂಬಲ ನೀಡಿ ಆಮೇಲೆ ವಾಪಸ್ ಪಡೆದರು. 1997ರಲ್ಲೂ ಹಾಗೇ ಮೊದಲು ದೇವೇಗೌಡರಿಗೆ ಕಾಂಗ್ರೆಸ್ ನಿಂದ...
ರಾಜಕೀಯ

‘ ಪಪ್ಪು ಪರದಾಟ ‘ Exclusive ಲೋಕಸಭೆಯಲ್ಲಿ ರಾಹುಲ್ ಭೂಕಂಪ! ಬಿದ್ದು ಬಿದ್ದು ನಕ್ಕ ಪ್ರಧಾನಿ ಮೋದಿ – ಕಹಳೆ ನ್ಯೂಸ್

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಗ್ನಿಪರೀಕ್ಷೆಯ ದಿನ. ಟಿಡಿಪಿ ಹಾಗೂ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆ ನಡೆಯಲಿದೆ. ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ಅವಿಶ್ವಾಸ ಗೊತ್ತುವಳಿ ಪರೀಕ್ಷೆಗೆ ಸಜ್ಜುಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತಿಪಕ್ಷಗಳಿಗೆ ಸಂಸತ್ತಿನಲ್ಲಿ ಸೋಲುಣಿಸುವ ಮೂಲಕ ಮುಂದಿನ ವರ್ಷದ ಪ್ರತಿಷ್ಠಿತ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲು ಸಜ್ಜಾಗಿದೆ. ಮೊದಲಿಗೆ ಅವಿಶ್ವಾಸ ನಿರ್ಣಯದ ಹಕ್ಕು...
ರಾಜಕೀಯ

ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದಕ್ಕೆ ಚನ್ನರಾಯಪಟ್ಟಣ ಇನ್ಸ್ ಪೆಕ್ಟರ್ ಗೆ ಕಿರುಕುಳ ? – ಕಹಳೆ ನ್ಯೂಸ್

ಬೆಂಗಳೂರು: ಚುನಾವಣಾ ಸಮಯದಲ್ಲಿ ಸಚಿವ ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿಕೊಂಡಿದ್ದಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಗೆ ಕಿರುಕುಳ ನೀಡಿದಲ್ಲದೇ, ಠಾಣೆಗೆ ಬಾರದಂತೆ ಆದೇಶ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಚುನಾವಣಾ ಸಮಯದಲ್ಲಿ ರೇವಣ್ಣ ಪುತ್ರ ಸೂರಜ್ ರೇವಣ್ಣ ವಿರುದ್ಧ ಕೇಸ್ ದಾಖಲಿಸಿದ್ದ ಚನ್ನರಾಯಪಟ್ಟಣ ಇನ್ಸ್ ಪೆಕ್ಟರ್ ಹರೀಶ್ ಬಾಬುರವರಿಗೆ ಕಿರುಕುಳ ನೀಡುತ್ತಿದ್ದಲ್ಲದೇ ಠಾಣೆಗೆ ಬಾರದಂತೆ ಮೌಖಿಕ ಆದೇಶ ನೀಡಿದ್ದಾರೆ ಎಂದು ದೂರುದಾರ ಶ್ರೇಯಸ್ ಆರೋಪಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ...
ರಾಜಕೀಯಸುದ್ದಿ

Exclusive : ಶನಿವಾರದಿಂದಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ ಜಾರಿ ; ಜನಸಾಮಾನ್ಯರ ಜೇಬು ಮತ್ತಷ್ಟು ಖಾಲಿ ಯಾವುದು ಎಷ್ಟೆಷ್ಟು ಏರಿಕೆಯಾಗುತ್ತೆ ? – ಕಹಳೆ ನ್ಯೂಸ್

ಬೆಂಗಳೂರು: ಶನಿವಾರದಿಂದಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ ಜಾರಿಯಾಗಲಿದ್ದು, ಜನಸಾಮಾನ್ಯರ ಜೇಬು ಮತ್ತಷ್ಟು ಖಾಲಿಯಾಗಲಿದೆ. ಪೆಟ್ರೋಲ್- ಡೀಸೆಲ್: ಬಜೆಟ್‍ನಲ್ಲಿ ತೈಲ ದರದ ಮೇಲೆ ವಿಧಿಸಲಾಗುತ್ತಿದ್ದ ಸೆಸ್ ದರವನ್ನು 30% ದಿಂದ 32%ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಶನಿವಾರದಿಂದ ಪೆಟ್ರೋಲ್ ಪ್ರತಿ ಲೀಟರ್ ಗೆ 1.14 ರೂ. ಮತ್ತು ಡೀಸೆಲ್ ಲೀಟರ್ ಗೆ 1.12 ರೂ. ದುಬಾರಿಯಾಗಲಿದೆ. ಪ್ರತಿ ತಿಂಗಳು ನೀವು 100 ಲೀಟರ್ ಪೆಟ್ರೋಲ್ ಬಳಸಿದರೆ ಈಗ ಪಾವತಿ ಮಾಡುತ್ತಿದ್ದ ದರಕ್ಕಿಂತ ಹೆಚ್ಚುವರಿಯಾಗಿ...
ರಾಜಕೀಯ

ಇಂದು ಬಿಎಸ್‍ವೈಗಾಗಿ ಊಟಕ್ಕೆ ಕುಳಿತಿದ್ದ ಕುರ್ಚಿ ಬಿಟ್ಟು ಕೊಟ್ರು ಎಚ್‍ಡಿಕೆ ಇನ್ನು ನಾಳೆ ಸಿಎಂ ಕುರ್ಚಿನೂ..? – ಕಹಳೆ ನ್ಯೂಸ್

ಬೆಂಗಳೂರು: ಸದನದಲ್ಲಿ ಭಾರೀ ಚಕಮುಕಿ ನಡೆಸುವ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮುಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ಮರೆತು ಔತಣಕೂಟದಲ್ಲಿ ಭಾಗವಹಸಿ, ಸಹಕಾರದಿಂದ ನಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ಸಿಎಂ ಕುಮಾರಸ್ವಾಮಿ ಅವರು ಭೋಜನ ಕೂಟ ಆಯೋಜಿಸಿದ್ದರು. ಔತಣಕೂಟಕ್ಕೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಆಗಮಿಸುತ್ತಿದಂತೆ ಅವರನ್ನು ಕುಮಾರಸ್ವಾಮಿ ಕೈ ಕುಲುಕಿ ಆಹ್ವಾನಿಸಿ, ತಾವು ಕುಳಿತಿದ್ದ ಕುರ್ಚಿಯನ್ನು ಬಿಟ್ಟುಕೊಟ್ಟರು. ಕುಮಾರಸ್ವಾಮಿ ಅವರ...
1 206 207 208 209 210 232
Page 208 of 232