‘ನುಡಿದಂತೆ ನಡೆಯಲು ರೇವಣ್ಣ ರಾಜೀನಾಮೆ ನೀಡಲಿ’ – ಕಹಳೆ ನ್ಯೂಸ್
ಬಳ್ಳಾರಿ: ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, 23 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರುತ್ತಿದ್ದಾರೆ. ರಾಜ್ಯದಲ್ಲಿ ಕಮಲ ಅರಳುತ್ತಿದ್ದು ಇದೇ ವೇಳೆ ಬಳ್ಳಾರಿಯಲ್ಲಿ ಮಾತನಾಡಿದ ಶ್ರೀ ರಾಮುಲು, ಬಿಜೆಪಿ ಗೆಲುವಿಗೆ ಹರ್ಷಿಸಿದ್ದು, ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಂಬೇಕಾಯಿ ರೇವಣ್ಣ ಮಠ ಕಟ್ಟುತ್ತಿದ್ದಾರೆ. ರಾಜ್ಯದ ಜೋಡೆತ್ತುಗಳಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ ಮಠ ಸೇರಿಕೊಳ್ಳಲಿ. ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ನೀಡುವುದಾಗಿ ಹೇಳಿದ್ದು, ಹಿಂದೆ...







