
ಕೋಲ್ಕತ್ತ: ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಗೆದ್ದ ಅಭ್ಯರ್ಥಿಗಳಿಗೆ ಶುಭಾಶಯ ಕೋರಿದ್ದಾರೆ. ಗೆದ್ದ ಅಭ್ಯರ್ಥಿಗಳು ಶುಭ ಹಾರೈಸುತ್ತೇನೆ. ಆದ್ರೆ ಸೋತವರು ಸೋತವರಲ್ಲ. ಫಲಿತಾಂಶದ ಬಗ್ಗೆ ಸಂಪೂರ್ಣ ವಿಮರ್ಶೆ ಮಾಡಬೇಕು ಮತ್ತು ನಂತರ ನಾವು ನಿಮ್ಮೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ. ಎಣಿಕೆಯ ಪ್ರಕ್ರಿಯೆಯು ಪೂರ್ಣವಾಗಿ ಪೂರ್ಣಗೊಳ್ಳಲಿ ಮತ್ತು ವಿ.ವಿ.ಪಿ.ಟಿಗಳು ಹೊಂದಾಣಿಕೆಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.









