ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಿಂಡರ್ ಗಾರ್ಟನ್ ಪದವಿ ಪ್ರಧಾನ ಕಾರ್ಯಕ್ರಮ – ಕಹಳೆ ನ್ಯೂಸ್
ಕಲ್ಲಡ್ಕ : ಶಿಕ್ಷಣದ ಬೆಲೆ, ಶಿಕ್ಷಕನಿಗೆ ಇರುವ ಮಹತ್ವ, ಶಿಕ್ಷಣದ ಆದರ್ಶತೆಯು ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮೂಡಿ ಬಂದಾಗ ಶಿಕ್ಷಣದ ಮೇಲೆ ಒಲವು ಮೂಡುತ್ತದೆ ಹಾಗೂ ಕಲಿಕೆಯ ಕಡೆಗೆ ಗಮನವನ್ನು ಹರಿಸಲು ಬೇಕಾದ ಮಾನಸಿಕ ತಯಾರಿಯನ್ನು ಮಾಡಲು ಸಹಾಯವಾಗುತ್ತದೆ. ತನ್ನ ಗೆಳೆಯರ ಜೊತೆ ಸಂತಸದಿAದ ಕಲಿತಾಗ ಶಿಕ್ಷಣವು ಆನಂದದಾಯಕವಾಗಿರುತ್ತದೆ ಅದಕ್ಕೆ ಬೇಕಾದ ಪೂರಕ ಸನ್ನಿವೇಶಗಳನ್ನು ಶಾಲಾ ಮಟ್ಟದಲ್ಲಿ ಒದಗಿಸಿದಾಗ ಶಿಕ್ಷಣವು ಗಟ್ಟಿಯಾಗುತ್ತದೆ ಎಂದು ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ...







