ಮೆಡಿಕಲ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್. ಶಿಕ್ಷಣ ಪ್ರವೇಶ ಶುಲ್ಕ ಏರಿಕೆ!? – ಕಹಳೆ ನ್ಯೂಸ್
ಬೆಂಗಳೂರು:- ಮೆಡಿಕಲ್ ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದ್ದು, ವೈದ್ಯಕೀಯ ಶಿಕ್ಷಣ ಪ್ರವೇಶ ಶುಲ್ಕ ಏರಿಕೆ ಸಾಧ್ಯತೆ ಇದೆ. ಎಂಜನಿಯರಿಂಗ್ ಶುಲ್ಕ ಏರಿಕೆ ಬಳಿಕ ಈಗ ಮೆಡಿಕಲ್ ಸೀಟ್ ಶುಲ್ಕ ಏರಿಕೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮನಸ್ಸು ಮಾಡಿದೆ. ವೈದ್ಯಕೀಯ, ದಂತ ವೈದ್ಯಕೀಯ ಸೇರಿದ್ದಂತೆ ವೈದ್ಯಕೀಯ ಶಿಕ್ಷಣದ ಕಾಲೇಜುಗಳಲ್ಲಿನ ಖಾಸಗಿ ಕೋಟಾದ ಸೀಟುಗಳ ಶುಲ್ಕವನ್ನು ಶೇ15 ರಷ್ಟು ಹೆಚ್ಚಳ ಮಾಡಲು ವೈದ್ಯಕೀಯ ಕಾಲೇಜುಗಳು ಬೇಡಿಕೆ ಇಟ್ಟಿವೆ. ಕಳೆದ ಎರಡು ವರ್ಷಗಳಿಂದ ವೈದ್ಯಕೀಯ ಶುಲ್ಕ...







