Recent Posts

Saturday, May 9, 2026

ಉಡುಪಿ

ಉಡುಪಿಕಾಪುಸುದ್ದಿ

ಸನ್ ಫ್ಲವರ್ ಆಯಿಲ್ ಮತ್ತು ಬಯೋಡೇಸಲ್ ಉತ್ಪಾದನಾ ಘಟಕಕ್ಕೆ ಶಾಂಭವಿ ನದಿಯಿಂದ ನೀರನ್ನು ಉಪಯೋಗಿಸುದನ್ನು ವಿರೋಧಿಸಿ ಇಂದು ಪಲಿಮಾರು ಗ್ರಾಮ ಪಂಚಾಯತ್ ಬಳಿ ನಡೆದ ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್

ಕಾಪು : M11 ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ಪಾಮ್ ಆಯಿಲ್, ಸನ್ ಫ್ಲವರ್ ಆಯಿಲ್ ಮತ್ತು ಬಯೋಡೇಸಲ್ ಉತ್ಪಾದನಾ ಘಟಕಕ್ಕೆ ಶಾಂಭವಿ ನದಿಯಿಂದ ನೀರನ್ನು ಉಪಯೋಗಿಸುದನ್ನು ವಿರೋಧಿಸಿ ಇಂದು ಪಲಿಮಾರು ಗ್ರಾಮ ಪಂಚಾಯತ್ ಬಳಿ ನಡೆದ ಸಾರ್ವಜನಿಕರ ಬೃಹತ್ ಪ್ರತಿಭಟನೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು. ಸರಕಾರದ ಶರತ್ತುಗಳು ನಿಬಂಧನೆಗಳಿಗೆ ಬದ್ಧರಾಗಿದ್ದುಕೊಂಡು ಸ್ಥಳೀಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ...
ಉಡುಪಿಸುದ್ದಿ

ಕೋಟತಟ್ಟು ಗ್ರಾ. ಪಂ: ದಾನಿಗಳ ನೆರವಿನಿಂದ ಕೊರಗರ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ – ಕಹಳೆ ನ್ಯೂಸ್

ಉಡುಪಿ: ಕೋಟತಟ್ಟು ಗ್ರಾ. ಪಂ. ವ್ಯಾಪ್ತಿಯ ಚಿಟ್ಟಿಬೆಟ್ಟು ಕೊರಗ ಕಾಲೋನಿಯ ಎಂಟು ಕುಟುಂಬಗಳಿಗೆ ಹೊಸ ಮನೆ ನಿರ್ಮಿಸಲು ಸರಕಾರವು ಸರಾಸರಿ ತಲಾ 3.5 ಲಕ್ಷ ಮಂಜೂರುಗೊಳಿಸಿದ್ದು, ದಾನಿಗಳ ಸಹಕಾರದೊಂದಿಗೆ ಏಳು ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಪೂಜಾ ವಿಧಿವಿಧಾನಗಳನ್ನು ಅರ್ಚಕ ಸಾಲಿಗ್ರಾಮ ಜನಾರ್ಧನ ಅಡಿಗರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ಕೋಟತಟ್ಟು ಗ್ರಾಮದಲ್ಲಿ ಕೊರಗ ಜನಾಂಗದವರಿಗೆ ದಾನಿಗಳ ನೆರವಿನಿಂದ ಮನೆ ಕಟ್ಟಿಕೊಡುವಂತಹದ್ದು...
ಉಡುಪಿಕಾಪುಜಿಲ್ಲೆರಾಜಕೀಯಸುದ್ದಿ

ಪಾಂಗಳ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಗೋಪುರ ಕಟ್ಟಡ ಮತ್ತು ಅಡುಗೆ ಕೋಣೆಯ ಭೂಮಿ ಪೂಜೆ – ಕಹಳೆ ನ್ಯೂಸ್

ಉಡುಪಿ: ಪಾಂಗಳ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಗೋಪುರ ಕಟ್ಟಡ ಮತ್ತು ಅಡುಗೆ ಕೋಣೆಯ ಭೂಮಿ ಪೂಜೆ ಕಾರ್ಯಕ್ರಮ ಪಾಂಗಳ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ನಡೆಯಿತು. ಭೂಮಿ ಪೂಜೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಪು ಸುರೇಶ ಶೆಟ್ಟಿ ಗುರ್ಮೆ ನಿತ್ಯ ದೇವರ ನಂಬಿಕೆಯಿAದಲೇ ಬದುಕು ನಡೆಯುವುದು ಎಂದರು. ದೇವಸ್ಥಾನಗಳು ಪ್ರಾರಂಭವಾದ ಕಾರಣ ಮಾನವ ಜೀವನದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸುಭದ್ರ ಬದುಕಿನ ಆದಾರವಾಗಿದೆ. ಪುರಾತನ ಕಾಲದಲ್ಲಿ ರಾಜ...
ಉಡುಪಿಕ್ರೈಮ್ಸುದ್ದಿ

ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು- ಕಹಳೆ ನ್ಯೂಸ್

ಉಡುಪಿ : ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಎಂಬಲ್ಲಿ ನಡೆದಿದೆ. ಕೊಲೆಗೀಡಾದ ಯುವಕನನ್ನು ಕೃಷ್ಣ (36) ಎಂದು ಗುರುತಿಸಲಾಗಿದೆ. ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ, ಕಳೆದ ರಾತ್ರಿ ಮನೆಯಲ್ಲಿ ಏಕಾಂಗಿಯಾಗಿ ಊಟ ಮಾಡುತ್ತಿದ್ದ ವೇಳೆ ಆಗಮಿಸಿದ ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡಿಕ್ಕಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಕೃಷ್ಣ ಸ್ಥಳದಲ್ಲಿ ಮೃತಪಟ್ಟಿದ್ದಾರೆಂದು ಪೆÇಲೀಸ್ ಮೂಲಗಳು ತಿಳಿಸಿವೆ. ಫೈರಿಂಗ್ ಶಬ್ದ...
ಉಡುಪಿಕಾಪುಭಟ್ಕಳಸುದ್ದಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ) ಕಾಪು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬೆಳ್ಮಣ್ ವಲಯದ ಸೂಡ ಕಾರ್ಯಕ್ಷೇತ್ರದಲ್ಲಿ ನಡೆದ ಟೈಲರಿಂಗ್ ಸಮಾರೋಪ ಕಾರ್ಯಕ್ರಮ – ಕಹಳೆ ನ್ಯೂಸ್

ಕಾಪು: ಪದ್ಮಶ್ರೀ ಡಾ. ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ನಿರಂತರ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಅವಶ್ಯಕ ಅಂಶಗಳನ್ನು ಸಮಾಜದ ಎಲ್ಲಾ ನಾಗರೀಕರಿಗೂ ಮುಟ್ಟಿಸುವಲ್ಲಿ ನಿರಂತರ ಚಟುವಟಿಕೆಗಳನ್ನು ಹಾಕಿಕೊಳ್ಳುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ) ಕಾಪು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬೆಳ್ಮಣ್ ವಲಯದ ಸೂಡ ಕಾರ್ಯಕ್ಷೇತ್ರದಲ್ಲಿ ಟೈಲರಿಂಗ್ ಸಮಾರೋಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಜನಜಾಗೃತಿ ವಲಯಾಧ್ಯಕ್ಷ ಶ್ರೀಶಂಕರ್ ಕುಂದರ್ ಉದ್ಘಾಟಿಸಿ ಜ್ಞಾನ ವಿಕಾಸ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಟೈಲರಿಂಗ್...
ಉಡುಪಿಕಾಪುರಾಜಕೀಯಸುದ್ದಿ

ಪಾಂಗಳ ಆರ್ಯಡಿ ಶ್ರೀ ಸರಳ ಧೂಮಮತಿ ಸಾನಿಧ್ಯದಲ್ಲಿ ನಡೆದ “ಯುವಚೌಪಾಲ್” ಕಾರ್ಯಕ್ರಮ – ಕಹಳೆ ನ್ಯೂಸ್

ಪಾಂಗಳ ಆರ್ಯಡಿ ಗ್ರಾಮದ ಶ್ರೀ ಸರಳ ಧೂಮವತಿ ದೈವ್ವದ ಸಾನಿಧ್ಯದಲ್ಲೇ ನನ್ನ ವಿಧಾನಸಭಾ ಮತಯಾಚನೆ ಪ್ರಾರಂಭ ಮಾಡಿದ್ದು, ಮುಂಬರುವ ಲೋಕ ಸಭೆಯ ಫಲಿತಾಂಶ ಜವಾಬ್ದಾರಿಯನ್ನು ಸರಳ ಧೂಮವತಿ ನೆರವೇರಿಸಿ ಕೊಡುತ್ತಾರೆ. ನಾವೆಲ್ಲರೂ ಕಮಲದ ಪಕ್ಷ ಏನು ಕೊಟ್ಟಿದೆ ಎಂಬುದನ್ನು ಎಲ್ಲರಿಗೂ ತಿಳಿಸಿ ಕೊಡಬೇಕು. ಮೋದಿಜಿಯವರ ನೇತೃತ್ವವನ್ನು ಜಗತ್ತು ಒಪ್ಪಿದೆ. ಪ್ರತಿಯೊಬ್ಬ ನಾಗರೀಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಪಕ್ಷ ದುಡಿಯಬೇಕು ಯಾವುದೇ ಅಧಿಕಾರದ ಅಪೇಕ್ಷೆ ಮಾಡದೇ ಸೇವೆ ಮಾಡಿ ದೇಶ ಕಟ್ಟುವ ಕೆಲಸ...
ಉಡುಪಿದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡುಬಿದಿರೆಯ ಕಾಲೇಜೊಂದರ ಪ್ರಥಮ ವರ್ಷದ ಬಿಪಿಟಿ ವಿದ್ಯಾರ್ಥಿನಿ ನಾಪತ್ತೆ – ಕಹಳೆ ನ್ಯೂಸ್

ಮೂಡುಬಿದಿರೆ, ಫೆ 26 : ಇಲ್ಲಿನ ಕಾಲೇಜೊಂದರ ಪ್ರಥಮ ವರ್ಷದ ಬಿಪಿಟಿ ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬೈಂದೂರು ತಾಲೂಕಿನ ಕೊಲ್ಲೂರಿನ ಆದಿರ (19) ಕಾಣೆಯಾದ ವಿದ್ಯಾರ್ಥಿನಿ. ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಈಕೆ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಹಪಾಠಿಗಳ ಜತೆ ಸ್ವರಾಜ್ಯ ಮೈದಾನದಲ್ಲಿರುವ ಕಾಲೇಜಿಗೆ ವಿದ್ಯಾಸಂಸ್ಥೆಯ ಬಸ್ಸಿನಲ್ಲಿ ಬಂದು ಕನ್ನಡ ಭವನದ ಬಳಿ ಇಳಿದಿರುವ ಮಾಹಿತಿ ಇದ್ದು ಅನಂತರ ಅಲ್ಲಿಂದ ಕಾಲೇಜಿಗೆ ಹೋಗದೆ ಕಾಣೆಯಾಗಿರುವುದಾಗಿ ತಿಳಿದುಬಂದಿದೆ. ಬಿಳಿ...
ಉಡುಪಿ

ಸಮಾಜದ ಶೋಷಿತರ ದನಿಯಾಗಿರುವ ತಹಶಿಲ್ದಾರ್ ಕಾರ್ಯಕ್ಕೆ ಊರವರ ಸಲಾಂ- ಕಹಳೆ ನ್ಯೂಸ್

ಉಡುಪಿ: ಹಲವು ವರ್ಷಗಳಿಂದ ಕರೆಂಟು, ನೀರು ಇಲ್ಲದೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪರಿಶಿಷ್ಟ ವರ್ಗದ ಕುಟುಂಬ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ತಾಲೂಕಿನ ತಹಶಿಲ್ದಾರ್ ಅವರ ಪ್ರಾಮಾಣಿಕ ಪ್ರಯತ್ನದಿಂದ ಇಂದು ಮನೆ ಬೆಳಕು ಕಾಣುವಂತಾಗಿದೆ. ಈ ಮೊದಲು ಜನವರಿ 20 ರಂದು ತಹಶಿಲ್ದಾರ್ ಕಚೇರಿಯಲ್ಲಿ ನಡೆದ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ತಾಲೂಕಿನ ಸುಪ್ರೀತಾ ಬಂದು ಕಣ್ಣೀರಿಡುತ್ತಾ "ಹಲವು ವರ್ಷಗಳಿಂದ ಮನೆಯಲ್ಲಿ ಕರೆಂಟ್, ನೀರಿನ...
1 76 77 78 79 80 121
Page 78 of 121