ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥಾಪಕರ ದಿನಾಚರಣೆ ; ಮಕ್ಕಳಲ್ಲಿ ಶಿಸ್ತು ಮೂಡಿಸಲು ಸ್ಕೌಟ್ಸ್ & ಗೈಡ್ಸ್ ಸಹಕಾರಿ- ಡಾ. ರಮೇಶ್ ಶೆಟ್ಟಿ
ಕುಂದಾಪುರ: " ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷ್ ನಿವೃತ್ತ ಅಧಿಕಾರಿ ಪೋವೆಲ್ ರಿಂದ ಸ್ಥಾಪಿತವಾದ ಸ್ಕೌಟ್ಸ್ ಅಂಡ್ ಗೈಡ್ಸ್ ಆಂದೋಲನ ಇಂದು ಜಗತ್ತಿನಾದ್ಯಂತ ಪಸರಿಸಿ ಯುವ ಸಮುದಾಯವನ್ನು ಅದರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ದೈಹಿಕವಾಗಿ ಬೌದ್ಧಿಕವಾಗಿ ಸದೃಢವಾಗಿಸಿ ಉತ್ತಮ ಪ್ರಜೆಗಳಾಗಿ ರೂಪಿಸಲು ಸಹಕಾರಿಯಾಗಿದೆ. ಇಂದು ಭಾರತದ ಬಹುಪಾಲು ರಾಜ್ಯಗಳಲ್ಲಿ ತರಬೇತಿ ನಡೆಯುತ್ತಿದ್ದು ಬಹುಪಾಲು ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸುಕತೆಯಿಂದ ಪಾಲ್ಗೊಂಡು ಉತ್ತಮ ಶಿಸ್ತು ನಡತೆಗಳನ್ನು ಕಲಿತು ಪಠ್ಯ ಮತ್ತು ಪಠ್ಯೇತರ ವಿಭಾಗದಲ್ಲೂ...







