ಜ್ಞಾನಸುಧಾದ 47 ಜೆ.ಇ.ಇ ಮೈನ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ 3.075ಲಕ್ಷ ರೂಪಾಯಿ ಪ್ರೋತ್ಸಾಹ ಧನ ವಿತರಣೆ; ನಾಲ್ವರು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂಪಾಯಿ ನಗದು ಪುರಸ್ಕಾರ -ಕಹಳೆ ನ್ಯೂಸ್
ಕಾರ್ಕಳ: ತಂದೆ-ತಾಯಿ-ಗುರುಗಳಿಗೆ ವಂದಿಸಿ ಪಡೆದ ವಿದ್ಯೆಯು ವಿದ್ಯಾರ್ಥಿಯ ಸಾಧನೆಗೆ ಕಾರಣವಾಗುತ್ತದೆ. ಸಂಕಲ್ಪ ಶುದ್ಧದಿಂದ ಇಟ್ಟಹೆಜ್ಜೆಯು ಯಶಸ್ಸನ್ನೇ ತಂದುಕೊಡುತ್ತದೆ. ಯಶಸ್ವಿ ಬದುಕಿನ ಸಾರ್ಥಕತೆ ಪೋಷಕರದಾಗುತ್ತದೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹೇಳಿದರು. ಅವರು ರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕೆ ಎನ್.ಟಿ.ಎ ನಡೆಸಿದ ಪ್ರಥಮ ಹಂತದ ಜೆ.ಇ.ಇ ಮೈನ್ ಫಲಿತಾಂಶದಲ್ಲಿ 97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 47 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು....







