ಸುರಕ್ಷಿತವಾಗಿ ಕಡಲು ಸೇರಿದ ಕಡಲಾಮೆ ಮರಿಗಳು- ಕಹಳೆ ನ್ಯೂಸ್
ಉಡುಪಿ : ಕಳೆದ 40 ದಿನಗಳ ಹಿಂದೆ ಮರವಂತೆ ಸಮುದ್ರ ತೀರ ಹಾಗೂ ಬೈಂದೂರಿನ ತಾರಾಪತಿ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಣೆ ಮಾಡಿದ್ದು ಅದರಲ್ಲಿ ಮರವಂತೆ 'ಹ್ಯಾಚರಿ'ಯಲ್ಲಿ ಮೊಟ್ಟೆಗಳು ಒಡೆದು ಸುಮಾರು 115 ಮರಿಗಳು ಹೊರಬಂದು ಕಡಲು ಸೇರಿವೆ. ಜನವರಿ ತಿಂಗಳ ಅಂತ್ಯದಲ್ಲಿ ಮರವಂತೆ ಹಾಗೂ ತಾರಾಪತಿ ಕಡಲ ತೀರದಲ್ಲಿ ಕಡಲಾಮೆಗಳು ಮೊಟ್ಟೆಗಳನ್ನಿಟ್ಟಿದ್ದವು. ಅದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಹಿತ ಈ ಬಗ್ಗೆ ಮುತುವರ್ಜಿ ವಹಿಸಲು ಆಸಕ್ತ...







