ಉಡುಪಿ : ಶಾಲಾ ವಿದ್ಯಾರ್ಥಿಗಳ ಜೊತೆ ನಿಂತು ನಾಡಗೀತೆಗೆ ಗೌರವ ಸಲ್ಲಿಸಿದ ಹಸು- ಕಹಳೆ ನ್ಯೂಸ್
ಉಡುಪಿ : ರಾಷ್ಟ್ರಗೀತೆ, ನಾಡಗೀತೆಗೆ ಗೌರವ ಕೊಡಬೇಕು ಎಂಬುದು ನಿಯಮ. ಬುದ್ಧಿ ತಿಳಿದ ಮನುಷ್ಯರೇ ಕೆಲವೊಮ್ಮೆ ನಿಯಮ ಉಲ್ಲಂಘನೆ ಮಾಡಿ ಉಡಾಫೆ ತೋರಿಸುತ್ತಾರೆ. ಆದರೆ ಉಡುಪಿಯ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡುತ್ತಿದ್ದಂತೆ ನಾಡಗೀತೆ ಕೇಳಿದ ತಕ್ಷಣ ನಿಯಮ ಗೊತ್ತಿಲ್ಲದ ಹಸುವೊಂದು ಕೊಂಚವೂ ಅಲುಗಾಡದೆ ನಿಂತು ಗೌರವ ಸಲ್ಲಿಸಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬೈಂದೂರು ವಲಯದ ಮಾವಿನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದೃಶ್ಯ ಕಂಡುಬಂದಿದ್ದು, ಶಾಲಾ ವಿದ್ಯಾರ್ಥಿಗಳು...







