Monday, April 27, 2026

ಜಿಲ್ಲೆ

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕದ್ರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ -2026: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ವೈಭವ – ಕಹಳೆ ನ್ಯೂಸ್

ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಲ್ಲಿಕಾ ಕಲಾವೃಂದ ಮಂಗಳೂರು ಆಶ್ರಯದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಮಂಗಳವಾರ (20-1-2026) ವೈವಿಧ್ಯಮಯ ಸಾಂಸ್ಕ್ರತಿಕ ವೈಭವ ಕಾರ್ಯಕ್ರಮ ಜರಗಿತು. ಎಲ್ಲರ ಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನ ಮಂಗಳೂರು ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ, ಭಾರತೀಯ ಜೈನ್ ಮಿಲನ್ ಮಂಗಳೂರು ಅಧ್ಯಕ್ಷ ರತ್ನಾಕರ್ ಜೈನ್ , ಮಲ್ಲಿಕಾ ಕಲಾವೃಂದ ಮಂಗಳೂರು...
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ನುಡಿದಂತೆ ಅತೀ ಅಗತ್ಯತೆಯ ಸಂಪರ್ಕ ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಅನುದಾನ ಪೂರೈಸಿದ ಶಾಸಕ ಹರೀಶ್ ಪೂಂಜ – ಕಹಳೆ ನ್ಯೂಸ್

ಧರ್ಮಸ್ಥಳ-ಮುಂಡಾಜೆ-ದಿಡುಪೆ ರಾಜ್ಯ ಹೆದ್ದಾರಿ 276ರ ಕಲ್ಮಂಜ ಗ್ರಾಮದ ಕೊತ್ತಲಿಗೆ, ವಂಜರೆಬೈಲ್ ಮತ್ತು ಪಿಲತಡ್ಕ ಭಾಗಗಳಲ್ಲಿನ ಹಳೆಯ ಸೇತುವೆಗಳು ಕಿರಿದಾಗಿದ್ದು, ಕುಸಿತಕೊಳಗಾಗಿ ನಾದುರಸ್ತಿಯಲ್ಲಿದ್ದು ಅಪಾಯದ ಮಟ್ಟವನ್ನು ಮೀರಿತ್ತು ಇದರಿಂದಾಗಿ ದಿನನಿತ್ಯ ವಾಹನ ಸವಾರರ ಹಾಗೂ ಪಾದಚಾರಿಗಳ ಸಂಚಾರಕ್ಕೆತೀರಾ ಅಡಚಣೆಯಾಗುತ್ತಿರುವುದನ್ನು ಆ ಭಾಗದ ಗ್ರಾಮಸ್ಥರು ಮಾನ್ಯ ಶಾಸಕರ ಗಮನಕ್ಕೆ ತಂದ ತತ್ಪರಿಣಾಮವಾಗಿ ಪ್ರಮುಖ ಜಿಲ್ಲಾ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ ಲೆಕ್ಕಶೀರ್ಷಿಕೆಯಡಿ ಅನುದಾನವನ್ನು ಬಿಡುಗಡೆಗೊಳಿಸಲು ಮಾನ್ಯ ಶಾಸಕರು ವಿಶೇಷವಾಗಿ ಶ್ರಮವಹಿಸಿದರು .  ...
ಜಿಲ್ಲೆದೆಹಲಿರಾಜ್ಯಸುದ್ದಿ

ನಾನು ಬಿಜೆಪಿ ಕಾರ್ಯಕರ್ತ, ನಿತಿನ್ ನನ್ನ ಬಾಸ್: ನರೇಂದ್ರ ಮೋದಿ – ಕಹಳೆ ನ್ಯೂಸ್

ನವದೆಹಲಿ: ನಿತಿನ್‌ ನಬಿನ್‌ ನನ್ನ ಬಾಸ್‌, ನಾನು ಬಿಜೆಪಿಯ ಕಾರ್ಯಕರ್ತ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ ಪ್ರಧಾನಿ, ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್ ಎಂದರು. ಮುಂದುವರಿದು.. ಬಿಜೆಪಿ ಹೊಸಬರಿಗೆ ವೇದಿಕೆ ಒದಗಿಸುತ್ತದೆ. ಬಿಜೆಪಿ ಅಧ್ಯಕ್ಷರ ಜವಾಬ್ದಾರಿ ಕೇವಲ ಪಕ್ಷಕ್ಕೆ ಸೀಮಿತವಾಗಿಲ್ಲ, ಎನ್‌ಡಿಎ ಒಕ್ಕೂಟದಲ್ಲಿ ಸಮನ್ವಯ ಸಾಧಿಸುವುದೂ ಅವರ ಕರ್ತವ್ಯವಾಗಿದೆ. ಪಕ್ಷದ ವಿಚಾರ ಬಂದ್ರೆ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ಜನಪ್ರತಿನಿಧಿಗೆ ಜನ ಗೌರವ ಕೊಡುವುದಿಲ್ಲ : ಶಾಸಕ ಅಶೋಕ್ ರೈ – ಕಹಳೆ ನ್ಯೂಸ್

ಪುತ್ತೂರು: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜನರಿಗೆ ನಾನಾ ಭರವಸೆಗಳನ್ನು ನೀಡುತ್ತಾರೆ, ಆದರೆ ಚುನಾವಣೆಯ ಬಳಿಕ ಅದನ್ನು ಪೂರ್ಣವಾಗಿ ಮರೆತುಬಿಡುತ್ತಾರೆ,ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಲ್ಲಿ ಜನ ಗೌರವ ಕೊಡುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪಾಣಾಜೆ ಸೇವಾ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಕಳೆದ ಚುನಾವಣಾ ಸಮಯದಲ್ಲಿ ಪಂಚ ಗ್ಯಾರಂಟಿ ಭರವಸೆ ನೀಡಿತ್ತು ಅಧಿಕಾರವಹಿಸಿದ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನ ಹಾಗೂ ಮಾಸಿಕ ಸಭೆ -ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನ ಹಾಗೂ ಮಾಸಿಕ ಸಭೆ ಜನವರಿ 18 ರವಿವಾರ ಜರಗಿತು. ಶೌರ್ಯ ತಂಡದ ಸದಸ್ಯರು ಶಿವರಾತ್ರಿಯ ಜಾತ್ರೋತ್ಸವದ ಪ್ರಯುಕ್ತ ಕಾರಿಂಜೇಶ್ವರ ದೇವಸ್ಥಾನದ ಬೀದಿಯಲ್ಲಿ ತುಂಬಿಕೊಂಡಿದ್ದ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಕಾರಿಂಜಿೇಶ್ವರ ದೇವಸ್ಥಾನದ ಸಮಿತಿ...
ಜಿಲ್ಲೆಸುದ್ದಿ

ಲಕ್ಕುಂಡಿ ನಿಧಿ ಸಿಕ್ಕ ಗ್ರಾಮದಲ್ಲಿ ಮನೆಯೊಳಗೆ ದೇವಸ್ಥಾನ -ಕಹಳೆ ನ್ಯೂಸ್

ಗದಗ: ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಗ್ರಾಮದಲ್ಲಿ ಕುಟುಂಬವೊಂದು ನಾಲ್ಕು ಶತಮಾನಗಳಷ್ಟು ಹಳೆಯದಾದ ಈಶ್ವರನ ದೇವಾಲಯದೊಳಗೆ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದೆ. ಹೌದು, ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಶಿವಯ್ಯ ಹಾಗೂ ಶೇಖರಯ್ಯ ಚೌಕಿಮಠ ಎಂಬವರ ಕುಟುಂಬ ದೇವಸ್ಥಾನದೊಳಗೆ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದೆ. ಈ ಮನೆಯಲ್ಲಿ ಸುಮಾರು 5-6 ಮಂದಿ ವಾಸ ಮಾಡುತ್ತಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಮನೆಯಿದೆ. ಅದರೊಳಗೆ ಈ ಐತಿಹಾಸಿಕ ದೇವಾಲಯವಿದೆ. ಈ ದೇವಾಲಯದೊಳಗೆ ನಾಲ್ಕನೇ ಶತಮಾತನದ ಶಿವನ...
ಜಿಲ್ಲೆರಾಜ್ಯಸುದ್ದಿ

ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಲೀಪರ್ ಬಸ್ ಬೈಕ್‌ ಸಾಗಿಸುತ್ತಿದ್ದ ಕಂಟೇನರ್‌ಗೆ ಡಿಕ್ಕಿ ; ಓರ್ವ ಸಾವು, 11 ಮಂದಿಗೆ ಗಾಯ – ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ: ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಸಂಭವಿಸಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಹಾರ ಮೂಲಕ 20 ವರ್ಷದ ಸುಹಾಸ್ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಕಂಟೇನರ್ ವಾಹನದಲ್ಲಿ ತನ್ನ ಸ್ನೇಹಿತರೊಂದಿಗೆ ಬಿಹಾರಕ್ಕೆ ಸುಹಾಸ್ ತೆರಳುತ್ತಿದ್ದ ಎನ್ನಲಾಗಿದೆ. ಇನ್ನು ಹೊಸ ಬೈಕುಗಳನ್ನ ಹೊತ್ತು ಹೈದರಾಬಾದ್ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ...
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಧರ್ಮಸ್ಥಳದಲ್ಲಿ ಸಂಪನ್ನಗೊಂಡ ಉಚಿತ ಟೈಲರಿಂಗ್ ತರಬೇತಿ ಶಿಬಿರ–ಕಹಳೆ ನ್ಯೂಸ್

ಧರ್ಮಸ್ಥಳ : ಗ್ರಾಮ ಪಂಚಾಯತ್ ಧರ್ಮಸ್ಥಳ ಮಾನ್ವಿಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ(ರಿ.), ಕನ್ಯಾಡಿ ಸೇವಾಭಾರತಿ ಹಾಗೂ ಶ್ರೀ ದುರ್ಗಾ ಮಾತೃ ಮಂಡಳಿ ಇದರ ಸಹಭಾಗಿತ್ವದಲ್ಲಿ ಸ್ವ- ಸಹಾಯ ಸಂಘದ ಮಹಿಳೆಯರಿಗಾಗಿ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಜನವರಿ 19 ರಂದು ಧರ್ಮಸ್ಥಳ ಗ್ರಾಮ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಮಾನ್ವಿಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮೀ ಮಾತನಾಡಿ, ಟೈಲರಿಂಗ್ ಕಲಿಯುವುದರಿಂದ ಬೇರೆ...
1 34 35 36 37 38 956
Page 36 of 956