Recent Posts

Sunday, April 26, 2026

ದಕ್ಷಿಣ ಕನ್ನಡ

ಉಡುಪಿದಕ್ಷಿಣ ಕನ್ನಡಸುದ್ದಿ

ಪಡುಕರೆ ಕಡಲ ಕಿನಾರೆಯಲ್ಲಿ ಭಾರಿ ಗಾತ್ರದ ಕಡಲಾಮೆ ರಕ್ಷಣೆ – ಕಹಳೆ ನ್ಯೂಸ್

ಕೋಟ ಮಣೂರು ಪಡುಕರೆ ಕಡಲ ಕಿನಾರೆಯಲ್ಲಿ, ಶುಕ್ರವಾರ ಹಳೇ ಬಲೆಗೆ ಸಿಕ್ಕಿಹಾಕಿಕೊಂಡು ದಡ ಸೇರಿದ ಎರಡು ಭಾರಿ ಗಾತ್ರದ ಕಡಲಾಮೆಗಳನ್ನು ಮಣೂರು ಪಡುಕರೆ ಶ್ರೀರಾಮ್ ಫ್ರೆಂಡ್ಸ್ ಯುವಕರು ರಕ್ಷಿಸಿ ಮರಳಿ ಕಡಲಿಗೆ ಬಿಟ್ಟಿದ್ದಾರೆ. ಸಮುದ್ರದಲ್ಲಿ ಬೋಟ್‌ಗಳ ಕಡಿದು ಹೋದ ಬಲೆಗಳಿಗೆ ಸಿಲುಕಿ ಈ ಕಡಲಾಮೆಗಳು ಶುಕ್ರವಾರ ದಡ ಸೇರಿದ್ದು, ಸ್ಥಳೀಯರು ಶ್ರೀರಾಮ್ ಫ್ರೆಂಡ್ಸ್ ಸದಸ್ಯರ ಗಮನಕ್ಕೆ ತಂದಿದ್ದರು. ಯುವಕರು ಶೀಘ್ರ ಅದನ್ನು ತೆರವುಗೊಳಿಸಿ ಸಮುದ್ರಕ್ಕೆ ಮರಳಿಸಿದ್ದಾರೆ. ಶ್ರೀರಾಮ್ ಫ್ರೆಂಡ್ಸ್ನ ಕಾರ್ತಿಕ್...
ದಕ್ಷಿಣ ಕನ್ನಡಸುದ್ದಿ

ಮಂಗಳೂರು ವಕೀಲರ ಸಂಘದಿಂದ ಬೃಹತ್ ಲಸಿಕಾ ಅಭಿಯಾನ ; 500ಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನ್ – ಕಹಳೆ ನ್ಯೂಸ್

ಮಂಗಳೂರು: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಮಂಗಳೂರು ವಕೀಲರ ಸಂಘದಿಂದ ಇಂದು ಬೃಹತ್ ಲಸಿಕಾ ಅಭಿಯಾನ ನಡೆಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಅವರ ಮಾರ್ಗದರ್ಶನದಲ್ಲಿ ಬೃಹತ್ ಲಸಿಕಾ ಅಭಿಯಾನ ನಡೆಸಲಾಯಿತು.   ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ನಾಲ್ಕನೇ ಅಭಿಯಾನ ಇದಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಫಲಾನುಭವಿಗಳು ಲಸಿಕೆ ಪಡೆದರು. 18 ವಯಸ್ಸಿನ ಮೇಲ್ಪಟ್ಟ ವಕೀಲರಿಗೆ, 45 ವರ್ಷ ಮೇಲ್ಪಟ್ಟ ವಕೀಲರಿಗೆ ಇದುವರೆಗೆ ಲಸಿಕಾ...
ಉಡುಪಿದಕ್ಷಿಣ ಕನ್ನಡಸಿನಿಮಾಸುದ್ದಿ

ತೆರೆ ಕಾಣಲು ಸಜ್ಜಾಗಿದೆ ‘ಕಲ್ಜಿಗಡೊಂಜಿ ಬಿನ್ನಯ’ – ಸತ್ಯದ ತುಳುವೆರ್(ರಿ.) ಉಡುಪಿ ಮಂಗಳೂರು ಅರ್ಪಿಸುವ ತುಳು ಗೀತೆ – ಕಹಳೆ ನ್ಯೂಸ್

ಸತ್ಯದ ತುಳುವೆರ್(ರಿ.) ಉಡುಪಿ ಮಂಗಳೂರು ಅರ್ಪಿಸುವ, ‘ಕಲ್ಜಿಗಡೊಂಜಿ ಬಿನ್ನಯ’ ತುಳು ಗೀತೆ ವಿಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕೊರೋನಾ ಕಷ್ಟದ ಸಮಯದಲ್ಲಿ ಕಾಲದ ಜೊತೆ ಮಾಡುವ ವಿನಂತಿ ಎಂಬ, ‘ಕಲ್ಜಿಗಡೊಂಜಿ ಬಿನ್ನಯ’ ತುಳು ಗೀತೆ ಇದೆ ಬರುವ ತಾರೀಕು ೦೫-೦೭-೨೦೨೧ಕ್ಕೆ ಸತ್ಯದ ತುಳುವೆರ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಶಿವಪ್ರಕಾಶ್.ಎಸ್, ಪ್ರವೀಣ್ ಕುರ್ಕಾಲ್, ಜಗನ್ ಕೋಟ್ಯಾನ್, ಪ್ರಸಾದ್ ಪೂಜಾರಿ ಬಂಟ್ವಾಳ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಗೀತೆಗೆ ಅಮರ್‌ನಾಥ್ ಪೂಪಾಡಿಕಲ್ಲು ಇವರ...
ದಕ್ಷಿಣ ಕನ್ನಡಸುದ್ದಿ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ 1 ರಿಂದ ಸಿಟಿಬಸ್ ಸಂಚಾರ ಆರಂಭ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ ೧ ರಿಂದ ಸಿಟಿಬಸ್ ಸಂಚಾರ ಆರಂಭಿಸಲಿದೆ ಎಂದು ಕೆನರಾ ಬಸ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದ ಲಾಕ್ ಡೌನ್ ನ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದ್ದು, ಶೇಕಡ ೫೦ ರಷ್ಟು ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಬಸ್ ರಸ್ತೆಗಿಳಿದಿರಲಿಲ್ಲ....
ದಕ್ಷಿಣ ಕನ್ನಡಪುತ್ತೂರುವಾಣಿಜ್ಯಸುದ್ದಿಸುಳ್ಯ

ಇಂದಿನಿಂದ ” ತಿರುಮಲ ಹೋಂಡಾ”ದ ಎಲ್ಲಾ ಶೋರೂಂಗಳು ಓಪನ್ ; ಎಲ್ಲಾ ಸಿಬ್ಬಂದಿಗಳಿಗೂ ವ್ಯಾಕ್ಸಿನೇಷನ್‌, ಕೋವಿಡ್ ಟೆಸ್ಟ್..! – ಸಂಪೂರ್ಣ ಸುರಕ್ಷಿತೆಯೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಿದೆ ಪರಿಸರದ ನಂ.1 ಗ್ರಾಹಕರ ಸ್ನೇಹಿ ಸಂಸ್ಥೆ – ಕಹಳೆ ನ್ಯೂಸ್

ಪುತ್ತೂರು: ಕೊರೋನಾ ಸಂಕಷ್ಟದಿಂದ ನಲುಗುತ್ತಿದ್ದ ಉದ್ಯಮ ಕ್ಷೇತ್ರಗಳು‌ ಇಂದಿನಿಂದ ಚೇತರಿಕೆ ಕಂಡಿದ್ದು, ಕರಾವಳಿಯಲ್ಲಿ ಇಂದಿನಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಸೀಮಿತ ಅವಧಿಯಲ್ಲಿ ತೆರೆದಿದ್ದು, ವ್ಯಾಪರ ವೈವಾಟುಗಳಿಗೆ ಅನುಮತಿಯನ್ನು ಜಿಲ್ಲಾಡಳಿತ ನೀಡಿದೆ. ಜಿಲ್ಲೆಯ ನಂ.೧ ದ್ವಿಚಕ್ರ ವಾಹನಗಳ ಶೋರೂಂ ತಿರುಮಲ ಹೋಂಡಾ ಸಂಸ್ಥೆ ಇಂದಿನಿಂದ ಕಾರ್ಯಾಚರಣೆಯನ್ನು, ತನ್ನ ಎಲ್ಲಾ ಗ್ರಾಹಕರಿಗೆ ಸೇವೆಯನ್ನು ನೀಡಲಿದ್ದು, ಸಂಪೂರ್ಣ ಕೋವಿಡ್ ನಿಯಮಾವಳಿಗಳ ಪಾಲನೆಯನ್ನು ಮಾಡಿಕೊಂಡು ಸನ್ನಧವಾಗಿದೆ. ಎಲ್ಲಾ ಸಿಬ್ಬಂದಿಗಳು ವ್ಯಾಕ್ಸಿನೇಷನ್‌ : ತಿರುಮಲ ಹೊಂಡಾ ಸಂಸ್ಥೆಯ...
ದಕ್ಷಿಣ ಕನ್ನಡಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ಅಖಿಲ ಭಾರತ ಹಿಂದೂ ಯುವ ಮಹಿಳಾ ಮೋರ್ಛಾದ ಕರ್ನಾಟಕ ಪ್ರದೇಶ್ ಅಧ್ಯಕ್ಷೆಯಾಗಿ ದಿಶಾ ಸಿ ಶೆಟ್ಟಿ – ಕಹಳೆ ನ್ಯೂಸ್

ಬೆಂಗಳೂರು : ಅಖಿಲ ಭಾರತ ಹಿಂದೂ ಯುವ ಮಹಿಳಾ ಮೋರ್ಛಾದ ಕರ್ನಾಟಕ ಪ್ರದೇಶ್ ಅಧ್ಯಕ್ಷೆಯಾಗಿ ಮಂಗಳೂರಿನ ಸುರತ್ಕಲ್ ಮೂಲದ ಕು.ದಿಶಾ ಸಿ ಶೆಟ್ಟಿಯವರನ್ನು ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಮೋರ್ಛಾದ ಅಧ್ಯಕ್ಷೆ ಜಯ ಮಂಜರಿಯವರು ಆದೇಶ ಹೊರಡಿಸಿದ್ದು, ದಿಶಾ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಕು. ದಿಶಾ ಸಿ. ಶೆಟ್ಟಿಯವರು ಪ್ರಸಿದ್ಧ ಯಕ್ಷಗಾನ ಕಲಾವಿದೆಯಾಗಿದ್ದು, ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದಾರೆ. ಸಣ್ಣ ವಯಸ್ಸಿನಿಂದಲೇ ಹಿಂದುತ್ವದ ಬಗ್ಗೆ ಒಲವು ಹೊಂದಿದ ದಿಶಾ ಅವರು,...
ದಕ್ಷಿಣ ಕನ್ನಡಸಂತಾಪಸುದ್ದಿ

ನಿಯಂತ್ರಣ ತಪ್ಪಿ ನವಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ ; ಓರ್ವ ಸಾವು – ಕಹಳೆ ನ್ಯೂಸ್

ಮಂಗಳೂರು, ಜೂ 21 : ನವಮಂಗಳೂರು ಬಂದರಿನ 14ನೇ ಬರ್ತ್‌ನಲ್ಲಿ 10 ಚಕ್ರದ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ ಮತ್ತೋರ್ವ ಕಾಣೆಯಾದ ಘಟನೆ ಭಾನುವಾರ ರಾತ್ರಿ 10.30 ಕ್ಕೆ ನಡೆದಿದೆ. ಮೃತರನ್ನು ಕಂಟೈನರ್ ಲಾರಿ ಚಾಲಕ ಉತ್ತರ ಕರ್ನಾಟಕ ಮೂಲದ ರಾಜೇಸಾಬ (26) ಎಂದು ಗುರುತಿಸಲಾಗಿದ್ದು, ಲಾರಿ ಕ್ಲೀನರ್ ಭೀಮಪ್ಪ(22) ನಾಪತ್ತೆಯಾಗಿದ್ದಾರೆ. ಡೆಲ್ಟಾ ಕಂಪನಿಯ ಕೆಎ 22 ಸಿ 8257 ನೋಂದಣಿಯ ಟ್ರಕ್ , ಕಬ್ಬಿಣದ...
ದಕ್ಷಿಣ ಕನ್ನಡಸುದ್ದಿ

ಮಂಗಳೂರಿನ ಕುಪ್ಪೆಪದವಿನಲ್ಲಿ ರಸ್ತೆ ಬದಿಯಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ – ಕಹಳೆ ನ್ಯೂಸ್

ಮಂಗಳೂರು: ರಸ್ತೆ ಬದಿಯಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ಗುಡ್ಡ ಕುಸಿದು ಮಣ್ಣಿನೊಳಗೆ ಸಿಲುಕಿದ ವ್ಯಕ್ತಿಯನ್ನು ಸ್ಥಳೀಯರು ಹರಸಾಹಸ ಪಟ್ಟು ರಕ್ಷಿಸಿದ ಘಟನೆ ಮಂಗಳೂರು ತಾಲೂಕಿನ ಕುಪ್ಪೆಪದವು ಬಳಿಯ ನೊನಾಲು ಎಂಬಲ್ಲಿ ನಡೆದಿದೆ. ಮಣ್ಣಿನಡಿ ಸಿಲುಕಿದ್ದ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿ ರಾಜೇಶ್ ಪೂಜಾರಿ (28)ಯನ್ನು ರಕ್ಷಿಸಲಾಗಿದ್ದು, ಕುಪ್ಪೆಪದವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನೊನಾಲು-ಕುಕ್ಕಟ್ಟೆ-ಗಂಜಿಮಠ ರಸ್ತೆಯಲ್ಲಿ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ರಾಜೇಶ್ ಮತ್ತು...
1 687 688 689 690 691 724
Page 689 of 724