Sunday, April 26, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡರಾಜ್ಯಸುದ್ದಿ

ಮಂಗಳೂರು ವಿವಿ ಪದವಿ ಪರೀಕ್ಷಾಂಗದ ನಿಯಮಗಳನ್ನು ಗಾಳಿಗೆ ತೂರಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ; ಹರೀಶ್ ಆಚಾರ್ಯ ಆಗ್ರಹ – ಕಹಳೆ ನ್ಯೂಸ್

ಮಂಗಳೂರು : ವಿಶ್ವವಿದ್ಯಾನಿಲಯವು ಈ ಬಾರಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಪರೀಕ್ಷಾಂಗದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅತ್ಯಂತ ಬೇಜಾವಾಬ್ದಾರಿಯಿಂದ ನಡೆಸಿದೆ. ತನ್ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವನ್ನು ನಡೆಸಿದೆ. ಈ ಬಗ್ಗೆ ವಿವಿಯ ಆಡಳಿತವು ಉನ್ನತ ಮಟ್ಟದ ತನಿಖೆಯನ್ನು ನಡೆಸಿ ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಹರೀಶ್ ಆಚಾರ್ಯ ಒತ್ತಾಯಿಸಿದ್ದಾರೆ. ಪದವಿ ಪರೀಕ್ಷೆಯ ಯಾವುದೇ ವಿಭಾಗಗಳಲ್ಲಿ ಪರೀಕ್ಷಾ...
ದಕ್ಷಿಣ ಕನ್ನಡ

ವಿನಾಕಾರಣ ವಿಶ್ವ ಹಿಂದು ಪರಿಷತ್ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯ – ಪೊಲೀಸ್ ಸಿಬ್ಬಂದಿಗಳ ಅಮಾನತಿಗೆ ವಿಶ್ವ ಹಿಂದು ಪರಿಷತ್ ಆಗ್ರಹ-ಕಹಳೆ ನ್ಯೂಸ್

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಿಂದ 10 ಅಕ್ಟೋಬರ್ ಭಾನುವಾರ ರಾತ್ರಿ ಜಗದೀಶ್ ಎಂಬ ವಿಶ್ವ ಹಿಂದು ಪರಿಷತ್ ಕಾರ್ಯಕರ್ತನನ್ನು ಠಾಣೆಗೆ ವಿನಾಕಾರಣ ಕರೆದುಕೊಂಡು ಹೋಗಿ, ದೈಹಿಕ ದೌರ್ಜನ್ಯ ನಡೆಸಿದ್ದಾರೆ. ಯಾವುದೊ ಒಂದು ಘಟನೆಯನ್ನು ಕಾರಣವಾಗಿ ಮುಂದಿಟ್ಟುಕೊಂಡು ರಾತ್ರಿ ಪೂರ್ತಿ ಠಾಣೆಯಲ್ಲಿ ಕೂಡುಹಾಕಿ ಬಟ್ಟೆಕಳಚಿ ಠಾಣೆಯ ಸಿಬ್ಬಂದಿಗಳಾದ ಪ್ರತಾಪ್, ಸಂಗಯ್ಯ ಮತ್ತು ಶೇಖರ್ ಎಂಬವರು ದೊಣ್ಣೆಯಿಂದ ಹೊಡೆದು, ಬೂಟ್ ಕಾಲಿನಿಂದ ಹೊಡೆದದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಮತ್ತು ದೈಹಿಕ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ ಮಾಡುವಂತೆ ವಿಶ್ವ ಹಿಂದೂ ಪರಿಷದ್ ವತಿಯಿಂದ ಮನವಿ – ಕಹಳೆ ನ್ಯೂಸ್

ಅನೇಕ ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಅಂತೆಯೇ ಇದೀಗ ಬಂಟ್ವಾಳ ತಾಲೂಕಿನ ಪಾಣೆಮಗಳೂರು ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿಗೆ ಹಾಗೂ ದೇವಸ್ಥಾನದ ಮ್ಯಾನೇಜರ್ ಆನಂದ್ ಕೆಯವರಿಗೆ ವಿಶೇಷ ಮನವಿ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಿಂದೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ದೇವಸ್ಥಾನ ಪ್ರವೇಶ ಮಾಡಬೇಕೆಂದು ವಿಶ್ವ ಹಿಂದೂ ಪರಿಷದ್ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ...
ದಕ್ಷಿಣ ಕನ್ನಡಪುತ್ತೂರುಸಿನಿಮಾ

ಅಜ್ಜನ ಮಾಯೆ’ ತುಳು ಕಿರುಚಿತ್ರಕ್ಕೆ ಲಕ್ಷಕ್ಕೂ ಅಧಿಕ ವೀಕ್ಷಣೆ, ಪ್ರಜ್ಞಾ ಆಶ್ರಮದಲ್ಲಿ ಕಿರುಚಿತ್ರ ತಂಡದ ಸಂಭ್ರಮ- ಕಹಳೆ ನ್ಯೂಸ್

ಪುತ್ತೂರು :  ಕರಾವಳಿಯಾದ್ಯಂತ ಭಾರಿ ಸದ್ದು ಮಾಡಿದ ಅಜ್ಜನ ಮಾಯೆ ತುಳು ಕಿರುಚಿತ್ರ 1 ಲಕ್ಷ ವೀಕ್ಷಣೆಯನ್ನು ಪಡೆದಿದ್ದು, ಈ ಸಂಭ್ರಮವನ್ನು ಪ್ರಜ್ಞಾ ಆಶ್ರಮದಲ್ಲಿ ಕಿರುಚಿತ್ರದ ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಯು ಟ್ಯೂಬಿನಲ್ಲಿ ಭರ್ಜರಿ ಯಶಸ್ವಿ ಪಡೆದ ಅಜ್ಜನ ಮಾಯೆ ಕಿರುಚಿತ್ರ, ನಾಡಿನಾದ್ಯಂತ ಸಂಚಲನ ಮೂಡಿಸಿ ಜನಮನ್ನಣೆಯನ್ನು ಗಳಿಸಿದೆ. ಈ ಗೆಲುವನ್ನು ಕಿರುಚಿತ್ರ ತಂಡ ಪ್ರಜ್ಞಾ ಆಶ್ರಮದ ದೇವರ ಮಕ್ಕಳ ಜೊತೆ ಸೇರಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದೆ. ಈ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಆದಿಶಕ್ತಿ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ಹರಕೆ ಅಗೇಲು ಸೇವೆಯ ದಿನ ಬದಲು- ಕಹಳೆ ನ್ಯೂಸ್

ಕಾವಳಮೂಡುರು :   ಶ್ರೀ ಆದಿಶಕ್ತಿ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ಪ್ರತೀ ಆದಿತ್ಯವಾರ ನಡೆಯುತ್ತಿದ್ದ ಅಗೆಲು ಸೇವೆ ಅಕ್ಟೋಬರ್ 16ರಿಂದ ಶನಿವಾರ ಮಧ್ಯಾಹ್ನ ನಡೆಯಲಿದೆ. ಸಂಕ್ರಮಣದಂದು ಮಾತ್ರ ರಾತ್ರಿ ಅಗೇಲು ಸೇವೆ ನಡೆಯಲಿದ್ದು, ಭಕ್ತರ ಹಿತಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಕ್ತಾಧಿಗಳು ಸಹಕರಿಸಬೇಕಾಗಿ ಕ್ಷೇತ್ರದ ಧರ್ಮದರ್ಶಿ ವಿಜಯ್ ಸಾಲ್ಯಾನ್‍ರವರು ವಿನಂತಿಸಿಕೊಂಡಿದ್ದಾರೆ. ಕಾರ್ಣಿಕಕ್ಕೆ ಹೆಸರುವಾಸಿಯಾಗಿರುವ ಶ್ರೀ ಆದಿಶಕ್ತಿ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ದಿನ ಕಳೆದಂತೆ ಭಕ್ತಾಧಿಗಳು ಹೆಚ್ಚಾಗುತ್ತಿದ್ದು,...
ದಕ್ಷಿಣ ಕನ್ನಡರಾಜ್ಯಸುದ್ದಿ

ಮಂಗಳೂರಿಗೆ ಬಂತು ನಾರ್ತ್, ಸೌತ್ ಇಂಡಿಯನ್ ಮಾದರಿಯಲ್ಲಿ ಐಸ್ ಕ್ರೀಂ ಥಾಲಿ…! – ಏನಿದು ಅಂತೀರಾ….!? ಈ ಸ್ಟೋರಿ ನೋಡಿ…! – ಕಹಳೆ ನ್ಯೂಸ್

ಮಂಗಳೂರು : ರೆಸ್ಟೋರೆಂಟ್‌ಗಳಲ್ಲಿ ನಾರ್ತ್ ಇಂಡಿಯನ್ ಹಾಗೂ ಸೌತ್ ಇಂಡಿಯನ್ ಥಾಲಿ ಮಾಮೂಲು. ಇದೇ ಮಾದರಿ ಈಗ ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಹೊಸ ಟ್ರೆಂಡ್ ಆಗಿ ಆರಂಭವಾಗಿದೆ. ಮಂಗಳೂರಿನ ಐಡಿಯಲ್ ಐಸ್‌ಕ್ರೀಂ ಮಾಲೀಕತ್ವದ ಪಬ್ಬಾಸ್ ಐಡಿಯಲ್ ಕೆಫೆಯಲ್ಲಿ `ಐಸ್‌ಕ್ರೀಂ ಥಾಲಿ' ಶನಿವಾರದಿಂದ ಗ್ರಾಹಕರ ಬಾಯಿಚಪ್ಪರಿಸುತ್ತಿದೆ. ಐಸ್‌ಕ್ರೀಂ ಥಾಲಿಯಲ್ಲಿ ಸೌತ್ ಅಥವಾ ನಾರ್ತ್ ಮೆನು ಇಲ್ಲ. ಇದು ಕೇವಲ ಐಸ್‌ಕ್ರೀಂಗಳ ಸಮುಚ್ಛಯ. ಸೌತ್, ನಾರ್ಥ್ ಇಂಡಿಯನ್ ಥಾಲಿ ಮಾದರಿಯಲ್ಲಿ ಇಲ್ಲಿ ಕೂಡ ಐಸ್‌ಕ್ರೀಂ...
ದಕ್ಷಿಣ ಕನ್ನಡರಾಜಕೀಯಸುದ್ದಿ

ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ – ನಾಮಪತ್ರ ಸಲ್ಲಿಸಿದ ಯುವ ನಾಯಕ ವಿವೇಕ್ ರಾಜ್ ಪೂಜಾರಿ – ಕಹಳೆ ನ್ಯೂಸ್

ಮಂಗಳೂರು : ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿಧಾನ ಪರಿಷತ್ತಿನ ಎರಡು ಸ್ಥಾನ ಸ್ಥಳೀಯ ಸಂಸ್ಥೆಯ ಆಡಳಿತಾವಧಿ ಈ ವರ್ಷದ ಡಿಸೆಂಬರ್ ನಲ್ಲಿ ಮುಗಿಯಲಿದೆ. ಹೀಗಾಗಿ ಎರಡು ಸ್ಥಾನಗಳು ಖಾಲಿಯಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಾನು ಇನ್ನಷ್ಟು ಸೇವೆ ಮಾಡಲು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿದ್ದು, ಇಂದು ಕಾಂಗ್ರೆಸ್ ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿದ್ದೇನೆ....
ದಕ್ಷಿಣ ಕನ್ನಡಪುತ್ತೂರು

ಪುತ್ತೂರಿನ ಮಾರ್ಕೆಟ್ ರಸ್ತೆಯ ಯೂನಿಯನ್ ಕ್ಲಬ್ ಕಟ್ಟಡದಲ್ಲಿ ನಾಳೆ ಸೆಪ್ಟೆಂಬರ್ 22ರಂದು ನೂತನ ‘ಭಗವತಿ ಟ್ರೇಡರ್ಸ್’ ಶುಭಾರಂಭ- ಕಹಳೆ ನ್ಯೂಸ್

ಪುತ್ತೂರು: ನೂತನವಾಗಿ ‘ಭಗವತಿ ಟ್ರೇಡರ್ಸ್‘ ಸೆ.22 ರಂದು ಪುತ್ತೂರಿನ ಮಾರ್ಕೆಟ್ ರಸ್ತೆಯ ಯೂನಿಯನ್ ಕ್ಲಬ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಡನೀರು ಶ್ರೀ ಸಚ್ಚಿದಾನಂದ ಸ್ವಾಮೀಜಿ ಯವರು ನೆರವೇರಿಸಲಿದ್ದಾರೆ. ದಿನಸಿ, ಗಿಡಮೂಲಿಕೆ, ಸಾವಯವ ಆಹಾರ ಪದಾರ್ಥ, ಸಿರಿಧಾನ್ಯ, ಪೂಜಾ ಸಾಮಾಗ್ರಿ, ಜೋಳದ ರೊಟ್ಟಿ ಹಾಗೂ ಉತ್ತರ ಕರ್ನಾಟಕ ಶೈಲಿಯ ದಿನಸಿ ಪದಾರ್ಥಗಳು ಲಭ್ಯವಿದೆ. ಹಾಗೆಯೇ ಹೋಂ ಡೆಲಿವರಿ ಸೌಲಭ್ಯ ಕೂಡ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
1 676 677 678 679 680 725
Page 678 of 725