Recent Posts

Wednesday, May 6, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಶಾಲೆಯ ಸ್ಥಾಪನೆ, ಬೆಳವಣಿಗೆಯ ಬಗ್ಗೆ ತಿಳಿಸುತ್ತಾ, “42 ವರ್ಷಗಳ ಹಿಂದೆ ಬಿತ್ತಿದ ಶಿಕ್ಷಣದ ಬೀಜ ಇಂದು ಬೃಹದಾಕಾರವಾಗಿ ಬೆಳೆದು ನಿಂತ ಶ್ರೀರಾಮ ವಿದ್ಯಾಕೇಂದ್ರದಲ್ಲಿ 3500ಕ್ಕೂ ಹೆಚ್ಚು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಜೀವನ ಮೌಲ್ಯವರ್ಧಿತ ಶಿಕ್ಷಣ- ವಿಶೇಷ ಉಪನ್ಯಾಸ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : “ಜೀವನ ಮೌಲ್ಯಗಳು ಬದುಕಿನ ಆಧಾರ ಸ್ತಂಭಗಳಿದ್ದಂತೆ.ಹಾಗೇ ಈ ಮೌಲ್ಯಗಳು ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗ. ಯುವಜನರು ಅವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು.ಇಂದಿನ ಯುವಜನಾಂಗದಲ್ಲಿ ಸತ್ಯ, ನ್ಯಾಯ, ಅಹಿಂಸೆ, ಪರಸ್ಪರ ಸಹಕಾರ, ಶೃದ್ಧೆ, ಸಹನೆ, ನಿಷ್ಠೆ, ಪ್ರಾಮಾಣಿಕತೆ, ಅನುಕಂಪ, ಸಹೋದರತ್ವ, ದೇಶಭಕ್ತಿ, ಸರಳ ಜೀವನ, ಗುರು-ಹಿರಿಯರಿಗೆ ಗೌರವ ಮುಂತಾದ ಭಾವನೆಗಳನ್ನು ಬೆಳೆಸುವುದು ಅವಶ್ಯಕವಾಗಿದೆ.ಬದುಕಿಗೆ ಪೂರಕವಾದ ಜೀವನದ ಪರೀಕ್ಷೆಯನ್ನು ಎದುರಿಸಲು ಸದೃಢರನ್ನಾಗಿ ಮಾಡುವುದೇ ಈ ಮೌಲ್ಯಯುತ ಶಿಕ್ಷಣದ ಮೂಲ ಉದ್ದೇಶವಾಗಿರಬೇಕು....
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಹಿಂದೂ ಸಂಘಟನೆಗಳ ಖಚಿತ ಮಾಹಿತಿ ಮೇರೆಗೆ ಪೋಲೀಸ್ ದಾಳಿ | ಬಜ್ಪೆ ಸಮೀಪದ ಬಡಗ ಎಡಪದವಿನಲ್ಲಿ ಅಕ್ರಮ ಗೋ ಸಾಗಾಟಕ್ಕೆ ತಡೆ ; ‘ ಪೆತ್ತ ಕಂಡು ‘ ಅಬ್ದುಲ್‌ ಫಾರೂಕ್‌ ಸಹಿತ ಮೂವರ ಬಂಧನ – ಕಹಳೆ ನ್ಯೂಸ್

ಮಂಗಳೂರು, ಜೂ 24 : ದನಗಳನ್ನು ಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಜಪೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಪುತ್ತಿಗೆ ಹಂಡೇಲು ಜರೀನಾ ಮಂಜಿಲ್‌ನ ಅಬ್ದುಲ್‌ ಫಾರೂಕ್‌ (41), ಬಡಗ ಮಿಜಾರಿನ ಅಬೂಬಕ್ಕರ್‌ (45), ತೋಡಾರು ದರ್ಖಾಸ್‌ ಹೌಸ್‌ ಶಿವ (60) ಎಂದು ಗುರುತಿಸಲಾಗಿದೆ. ಜೂನ್ 22 ರಂದು ಬಜ್ಪೆ ಸಮೀಪದ ಬಡಗ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕೋತ್ಸವ ವಿಬ್‍ಜಯಾರ್-2022 ಸಮಾರಂಭ – ಕಹಳೆ ನ್ಯೂಸ್

ಪುತ್ತೂರು: ಜ್ಞಾನ ಎನ್ನುವುದು ಅತೀ ಶಕ್ತಿಶಾಲಿ ಅಸ್ತ್ರ ಇದರಿಂದ ನಾವು ಯಾರನ್ನೂ ಯಾವುದನ್ನೂ ಮಣಿಸುವುದಕ್ಕೆ ಸಾಧ್ಯವಿದೆ ಎಂದು ಸೋನಾ ಗ್ರೂಪ್ ಬೆಂಗಳೂರು ಇದರ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಜ್ಞ ನಾರಾಯಣ ಕಮ್ಮಾಜೆ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕೋತ್ಸವ ವಿಬ್‍ಜಯಾರ್-2022 ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಪ್ರತಿಯೊಬ್ಬರಲ್ಲಿಯೂ ಜಗತ್ತನ್ನೇ ಬೆರಗಾಗಿಸುವ ಪ್ರತಿಭೆಯಿದೆ. ನಾನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದಲ್ಲ, ನಾನು ಗ್ರಾಮಾಂತರದಲ್ಲಿ ಓದಿದವ...
ದಕ್ಷಿಣ ಕನ್ನಡಸುದ್ದಿ

ಮಂಗಳೂರು – ಬೆಂಕಿಗಾಹುತಿಯಾದ ಓಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ – ಕಹಳೆ ನ್ಯೂಸ್

ಮಂಗಳೂರು : ಓಕಿನಾವ ಎಲೆಕ್ಟ್ರಿಕ್ ಸ್ಕೂಟರ್ ನ ಶೋರೂಂ ಬೆಂಕಿಗಾಹುತಿಯಾದ ಘಟನೆ ಮಂಗಳೂರಿನ ಪಡೀಲ್ ಅಳಪೆ ಸಮೀಪದ ನಾಗುರಿಯಲ್ಲಿ ನಡೆದಿದೆ ಇಲೆಕ್ಟ್ರಿಕ್ ಸ್ಕೂಟರ್ ನ ಒಕಿನಾವ ಶೂರೂಮ್‍ನಲ್ಲಿ ಇಂದು ಬೆಳಗ್ಗೆ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅನಾಹುತ ಸಂಭವಿಸಿದೆ. ಇದರಿಂದ ಹಲವು ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇಲೆಕ್ಟ್ರಿಕ್ ಬೈಕ್ ಗಳು ಬೆಂಕಿಗಾಹುತಿಯಾಗುತ್ತಿರುವುದರ ನಡುವೆ ಇದೀಗ ಇಡೀ ಶೋರೂಂ ಬೆಂಕಿಗಾಹುತಿಯಾಗುತ್ತಿರುವುದು ಆತಂಕ ಮೂಡಿಸಿದೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ‘ಎಂಟಪ್ರ್ರೈನೆರ್ಷಿಪ್- ಅ ಕ್ಯಾರೀರ್ ಚೊಯ್ಸ್ ಕಾರ್ಯಾಗಾರ: ಸ್ಪಷ್ಟ ಗುರಿಯಿದ್ದಾಗ ಸಾಧನೆಯ ಹಾದಿ ತಲುಪಲು ಸಾಧ್ಯ: ಸುಹಾಸ್ ಮರಿಕೆ – ಕಹಳೆ ನ್ಯೂಸ್

ಪುತ್ತೂರು : ಜೀವನದಲ್ಲಿ ಮುಂದಾಲೋಚನೆ ಅತೀ ಅಗತ್ಯ. ಯಾವುದೇ ವೃತ್ತಿಯನ್ನು ಆಯ್ಕೆಮಾಡುವಾಗ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನಡೆಯಬೇಕು, ದೃಢಸಂಕಲ್ಪ ಮತ್ತು ಆತ್ಮವಿಶ್ವಾಸ ಸ್ವ ಉದ್ಯಮದ ಯಶಸ್ಸಿನ ಸೂತ್ರಗಳು. ವೃತ್ತಿಯನ್ನು ಆಸಕ್ತಿಯಿಂದ ನಿರ್ವಹಿಸಿದಾಗ ಮಾಡಿದ ಕೆಲಸದಲ್ಲಿ ತೃಪ್ತಿ ಸಿಗುತ್ತದೆ. ಸಮಯ ಪಾಲನೆ ಮತ್ತು ಪರಿಶ್ರಮದ ಮುಖೇನ ಯಶಸ್ಸು ದೊರಯುತ್ತದೆ. ಉದ್ಯೋಗವನ್ನು ಹಿಂಬಾಲಿಸುವ ಬದಲು ಸ್ವ-ಉದ್ಯಮದ ಹಾದಿ ಹಿಡಿದರೆ ಉತ್ತಮ ಉದ್ಯಮದಾರರಾಗಿ ಉದಯಿಸಬಹುದು ಎಂದು ಮರಿಕೆ ನ್ಯಾಚುರಲ್ ಐಸ್‍ಕ್ರೀಮ್ ಸಂಸ್ಥೆಯ ಮಾಲೀಕ ಸುಹಾಸ್...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ‘ಅನುಪಮ ಟಿವಿ’ ಲೋಕಾರ್ಪಣೆ : ಡಿಜಿಟಲ್ ಮಾಧ್ಯಮ ಸುದ್ದಿ ಪಸರಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ : ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಹಿಂದಿನ ದಿನಗಳಲ್ಲಿ ಪತ್ರಿಕೆಗಳು ಮಾಹಿತಿ ವಿನಿಮಯದ ಮಾಧ್ಯಮವಾಗಿದ್ದರೆ ಇಂದು ಡಿಜಿಟಲ್ ಯುಗಕ್ಕೆ ನಾವು ಅಡಿಯಿಟ್ಟಿದ್ದೇವೆ. ಹಾಗಾಗಿ ನಮ್ಮ ಮೊಬೈಲ್‍ಗಳಲ್ಲೇ ನಮಗೆ ಪತ್ರಿಕಾ ವರದಿ, ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗಿದೆ. ಅಲ್ಲದೆ ಅಸಂಖ್ಯ ಜನರನ್ನು ತಲುಪುವ ಸಾಧ್ಯತೆಯನ್ನು ಇಂದಿನ ಮಾಧ್ಯಮ ಜಗತ್ತು ಸಾಧಿಸಿ ತೋರಿಸಿದೆ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ರೂಪಿಸಿದ ‘ಅನುಪಮ...
ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಬಂಟ್ವಾಳ – ಜ್ವರದಿಂದ ಬಳಲುತ್ತಿದ್ದ 6 ವರ್ಷದ ಬಾಲಕಿ ಮೃತ್ಯು..!– ಕಹಳೆ ನ್ಯೂಸ್

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಹನುಮಾನ್ ನಗರದ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ ಆಚಾರ್ಯ(6)ಮೃತ ಬಾಲಕಿ. ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದ ಆರಾಧ್ಯ ಆಚಾರ್ಯ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದಳು, ಈಕೆಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಜ್ವರ ಏಕಾಏಕಿ ಉಲ್ಬಣಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾಳೆ....
1 592 593 594 595 596 727
Page 594 of 727