Recent Posts

Saturday, May 9, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಯುವಕನನ್ನು ಕತ್ತಿಯಿಂದ ಕಡಿದು ಕೊಲೆ; ಸ್ನೇಹಿತರಿಂದಲೇ ಕೃತ್ಯ- ಕಹಳೆ ನ್ಯೂಸ್

ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿ ಕತ್ತಿಯಿಂದ ಕಡಿದು ಕೊಲೆ ನಡೆಸಿದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ಮಧ್ಯರಾತ್ರಿ ವೇಳೆ ನಡೆದಿದೆ. ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29 ವ) ಕೊಲೆಯಾದ ಯುವಕ. ಅತನ ಸ್ನೇಹಿತರಾದ ನೌಫಾಲ್ ಮತ್ತು ಇನ್ನೋರ್ವ ಈ ಕೃತ್ಯ ನಡೆಸಿದ್ದಾರೆ. ಇವರು ಗಾಂಜ ಗಿರಾಕಿಗಳಾಗಿದ್ದು, ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೊಟೇಲ್ ಒಂದರ ಸಮೀಪದಲ್ಲಿ ರಾತ್ರಿ ಒಂದು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಮುಂಜಾನೆಯಿಂದ ಸುರಿದ ಭಾರಿ ಮಳೆ; ಹಾರಾಡಿ ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆಯ ಪಕ್ಕದ ರಸ್ತೆ ಕುಸಿತ- ಕಹಳೆ ನ್ಯೂಸ್

ಇಂದು ಮುಂಜಾನೆಯಿಂದ ಸುರಿದ ಭಾರಿ ಮಳೆಯಿಂದಾಗಿ ಪುತ್ತೂರಿನ ಹಾರಾಡಿ ಮಾರ್ಗವಾಗಿ ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಯ ಕೆಳಗಿನ ರಸ್ತೆ (ಮಾಹಾಲಿಂಗೇಶ್ವರ ದೇವರ ಈ ಹಿಂದೆ ಗದ್ದೆಯ ಮೂಲಕ ಸವಾರಿ ಹೋಗುವ ರಸ್ತೆ)ಯು ಕುಸಿತಗೊಂಡಿದೆ. ವಾಹನ ಸವಾರರು ಎಚ್ಚರಿಕೆಯಿಂದ ತಮ್ಮ ವಾಹನವನ್ನು ಚಲಾಯಿಸುವಂತೆ ಸ್ಥಳೀಯರು ತಿಳಿಸಿದ್ದಾರೆ....
ದಕ್ಷಿಣ ಕನ್ನಡಸುದ್ದಿ

ಭಾರಿ ಮಳೆ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳಿಗೆ ಜು.5ರ ಇಂದು ರಜೆ – ಕಹಳೆ ನ್ಯೂಸ್

ಮಂಗಳೂರು, ಜು 05: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಮಂಗಳವಾರ (ಜುಲೈ5 )ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ನಿರಂತರ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳು, ಪಿಯು ಮತ್ತು ಪದವಿ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. "ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ...
ದಕ್ಷಿಣ ಕನ್ನಡಸುದ್ದಿ

ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರ ನಿರ್ಮಾಣದ ಮನವಿ ಪತ್ರ ಡಾ| ಶ್ರೀ ವಿರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ – ಕಹಳೆ ನ್ಯೂಸ್

ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರ ನಿರ್ಮಾಣದ ಮನವಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ| ಶ್ರೀ ವಿರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಕೃಷಕುಮಾರ್ ಅತ್ರಿಜಾಲು, ಕಾರ್ಯದರ್ಶಿಯಾದ ಪ್ರವೀಣ ಆಳ್ವ, ಖಜಾಂಜಿಯಾದ ಲೋಕೇಶ್ ಗೌಡ, ಸಮಿತಿ ಸದಸ್ಯರಾದ ಬಾಬು ನಾಯ್ಕ, ಅಶೋಕ ಗಾಣಾಜಾಲು, ಶ್ರೀಮತಿ ಸುಗುಣ ಹಾಗೂ ಚೆನ್ನಕೇಶವ ರೈ ಗುತುಪಾಲು, ಉಮೇಶ್ ಶೆಟ್ಟಿ ಬಾಲಾಜೆ, ಸೋಮಪ್ಪ ಗೌಡ ಎರ್ಮಾಲ, ಶ್ರೀನಾಥ್ ಕೇವಳ,...
ದಕ್ಷಿಣ ಕನ್ನಡಸುದ್ದಿ

ನಿಯಂತ್ರಣ ತಪ್ಪಿ ಮರವಂತೆ ಬೀಚ್ ಗೆ ಬಿದ್ದ ಕಾರು: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ – ಕಹಳೆ ನ್ಯೂಸ್

ಕುಂದಾಪುರ: ಜು. 03ರ ಬೆಳಿಗ್ಗಿನ ಜಾವ 2 ಗಂಟೆ ಸುಮಾರಿಗೆ ಮರವಂತೆಯಲ್ಲಿ ಕಾರು ಸಮುದ್ರಕ್ಕೆ ಬಿದ್ದ ಪರಿಣಾಮ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ರೋಷನ್ ಅವರ ಮೃತದೇಹ ಹೊಸಕೋಟೆ ಬಳಿ ಪತ್ತೆಯಾಗಿದೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ರೋಷನ್ ಗಾಗಿ ಆದಿತ್ಯವಾರದಿಂದ ವ್ಯಾಪಕ ಶೋಧ ಆರಂಭಗೊಂಡಿತ್ತು. ಸೋಮವಾರ ಕಾರ್ಯಾಚರಣೆ ವೇಳೆ ಶವ ಪತ್ತೆಯಾಗಿದೆ. ಶನಿವಾರ ತಡರಾತ್ರಿ ಸ್ವಿಪ್ಟ್ ಕಾರಿನಲ್ಲಿ ಬೀಜಾಡಿಯ ವಿರಾಜ್ ಆಚಾರ್ ಹಾಗೂ ಅವರ ಸಂಬಂಧಿಕರಾದ ಕಾರ್ತಿಕ, ರೋಷನ್, ಹಾಗೂ ಸಂದೇಶನೊಂದಿಗೆ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಅವರಿಂದ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಶೇಷಪ್ಪರವರ ಮನೆಗೆ ತಡೆಗೋಡೆ ನಿರ್ಮಾಣಕ್ಕೆ ಸಹಾಯಹಸ್ತದ ಭರವಸೆ – ಕಹಳೆ ನ್ಯೂಸ್

ಬಂಟ್ವಾಳ : ವಿಟ್ಲಮುಡ್ನೂರು ಗ್ರಾಮದ ಪಿಲಿಂಜ ಹರಿಜನ ಕಾಲೋನಿ ನಿವಾಸಿ ಶೇಷಪ್ಪ ನಲಿಕೆ ಎಂಬವರ ಮನೆಯು ವೀಪರೀತ ಮಳೆಗೆ ಮನೆಯ ಎಡ ಭಾಗವು ಕುಸಿದಿದ್ದು ಮನೆಯು ಕೂಡ ಕುಸಿಯುವ ಹಂತದಲ್ಲಿದೆ. ತೀರ ಬಡವರಾದ ಇವರು ಮನೆಯು ಕುಸಿದಲ್ಲಿ ವಾಸಿಸಲು ಮನೆಯಿಲ್ಲದೆ ಸಂಕಷ್ಟ ಪಡುವ ಪರಿಸ್ಥಿತಿಯಲ್ಲಿದ್ದಾರೆ. ಈ ವಿಚಾರವನ್ನು ಸ್ಥಳಿಯರಾದ ಎಲ್ಯಣ್ಣ ಪೂಜಾರಿಯವರು ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ತಿಳಿಸಿದಾಗ ಕೂಡಲೆ ಅವರ ಮನೆಗೆ ಖುದ್ದು ಭೇಟಿ...
ದಕ್ಷಿಣ ಕನ್ನಡಮೈಸೂರುಸುದ್ದಿ

ಲವ್ ಜಿಹಾದ್ ನ ಬಲೆಗೆ ಬಿದ್ದ ಮೈಸೂರು ಮೂಲದ ಯುವತಿ; ವಿಟ್ಲದ ಮುಸ್ಲಿಂ ಯುವಕ ಜುಬೈದ್ ಜೊತೆ ವಿವಾಹವಾದ ಪತ್ರ ವೈರಲ್- ಕಹಳೆ ನ್ಯೂಸ್

ವಿಟ್ಲ: ಅನ್ಯಕೋಮಿನ ಯುವಕನೋರ್ವ ಮೈಸೂರು ಮೂಲದ ಹಿಂದೂ ಯುವತಿಯನ್ನು ವಿವಾಹವಾದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್(27) ಎಂಬ ಅನ್ಯಕೋಮಿನ ಯುವಕ ಮೈಸೂರು ಲೋಕನಾಯಕನ ನಗರದ ಸೌಂದರ್ಯ(24) ಎಂಬ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಉಬೈದ್ ಮತ್ತು ಸೌಂದರ್ಯ ಮೈಸೂರಿನಲ್ಲಿ ರಿಜಿಸ್ಟರ್ ವಿವಾಹವಾಗಿದ್ದು, ಅವರ ಮದುವೆಯ ರಿಜಿಸ್ಟರ್ ಪತ್ರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಜೋಡಿ ಕೆಲ ದಿನ ಹಿಂದೆ ವಿಟ್ಲದಲ್ಲಿ ತಿರುಗಾಡುತ್ತಿದ್ದರು ಎಂಬ ಮಾಹಿತಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಐವರಲ್ಲಿ ಓರ್ವ ನೀರುಪಾಲು – ಕಹಳೆ ನ್ಯೂಸ್

ಬಂಟ್ವಾಳ: ಈಜಲು ಹೋಗಿರುವ ಐವರಲ್ಲಿ ಓರ್ವ ನೀರುಪಾಲಾಗಿರುವ ದುರ್ಘಟನೆ ಬಂಟ್ವಾಳ ತಾಲೂಕಿನ ಸಜಿಪ ನಡು ಗ್ರಾಮದ ತಲೆಮೊಗರುವಿನ ನೇತ್ರಾವತಿ ನದಿಯಲ್ಲಿ ನಡೆದಿದೆ. ತಲೆಮೊಗರು ಗ್ರಾಮದ ನಿವಾಸಿ ರುಕ್ಮಯ್ಯ ಎಂಬವರ ಪುತ್ರ ಅಶ್ವಿತ್ ಗಾಣಿಗ(19) ಮೃತಪಟ್ಟ ಯುವಕ. ತಲೆಮೊಗರು ನಿವಾಸಿ ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವಿಗೆ ನಾಮಕರಣ ಶಾಸ್ತ್ರವಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಅಶ್ವಿತ್ ಗಾಣಿಗ ಬಂದಿದ್ದ. ಸಂಜೆಯ ವೇಳೆಗೆ ಸಂಬಂಧಿಕರಾದ ವಿಶಾಲ್ ಗಾಣಿಗ, ವಿಕಾಸ್ ಗಾಣಿಗ, ಲಿಖಿತ್ ಗಾಣಿಗ,...
1 588 589 590 591 592 728
Page 590 of 728