Saturday, May 9, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಸಿನಿಮಾಸುದ್ದಿ

ಮಂಗಳೂರಿಗೆ ಬಂದಿಳಿದ ‘ಮಿಸ್ ಇಂಡಿಯಾ ವರ್ಲ್ಡ್’ ಸಿನಿ ಶೆಟ್ಟಿ ; ತುಳುವಿನಲ್ಲಿ ಧನ್ಯವಾದ ಹೇಳಿದ ಸುಂದರಿ -ಕಹಳೆ ನ್ಯೂಸ್

ಮಂಗಳೂರು ಮೂಲದ ಮಿಸ್ ಇಂಡಿಯಾ ವರ್ಲ್ಡ್‍ 2022 ಕಿರೀಟ ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದರು. ತವರು ನೆಲಕ್ಕೆ ಸಿನಿ ಶೆಟ್ಟಿ ಕಾಲಿಡುತ್ತಿದ್ದಂತೆಯೇ ಅದ್ಧೂರಿ ಸ್ವಾಗತ ದೊರೆಯಿತು. ಮಂಗಳೂರು ಜನತೆ ಪ್ರೀತಿಯಿಂದಲೇ ಸಿನಿ ಶೆಟ್ಟಿ ಅವರನ್ನು ಬರಮಾಡಿಕೊಂಡು ತನ್ನೂರಿನ ಹುಡುಗಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸಿನಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆ ಅವರು. ಮಿಸ್ ಇಂಡಿಯಾ ಆದ ಬಳಿಕ ಇದೇ ಮೊದಲ ಬಾರಿಗೆ ಅವರು ಮಂಗಳೂರಿಗೆ ಆಗಮಿಸಿದ್ದರು....
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಬಿಸಿಲೆಯಲ್ಲಿ ಹೊಂಡಕ್ಕಿಳಿದು ವಾಹನ ಚಾಲಕರ ಬೆವರಿಳಿಸಿದ ಕಲ್ಲಿದ್ದಲು ಸಾಗಾಟ ಲಾರಿ! – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಜಿಲ್ಲೆಯ ಸುಬ್ರಮಣ್ಯದ ಕುಲ್ಕುಂದ - ಬಿಸಿಲೆ ಘಾಟ್ ರಸ್ತೆಯ ಮಧ್ಯೆ ಬದಿಯ ಚರಂಡಿಗೆ ಕಲ್ಲಿದ್ದಲು ಹೇರಿಕೊಂಡು ಹೋಗುತಿದ್ದ ಲಾರಿ ಇಳಿದು ಬಾಕಿಯಾಗಿ ಬಿಸಿಲೆ ಘಾಟ್ ರಸ್ತೆಯಲ್ಲಿ ಸಂಚಾರಿಸುವ ವಾಹನಗಳಿಗೆ ಸಮಸ್ಯೆ ಉಂಟಾಗಿರುವ ಘಟನೆ ಸಂಭವಿಸಿದೆ. ಶಿರಾಡಿ ಘಾಟ್ ರಾಷ್ಟೀಯ ಹೆದ್ದಾರಿ ಬಂದ್ ಆಗಿರುವುದರಿಂದ ಕರಾವಳಿ ಭಾಗಕ್ಕೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ವಾಹನಗಳು ಬಿಸಿಲೆ ಘಾಟ್ ರಸ್ತೆ ಮೂಲಕ ಬರುತ್ತಿದ್ದು. ಬಿಸಿಲೆ ಘಾಟ್ ರಸ್ತೆಯಲ್ಲಿ ವಾಹನಗಳ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನ ಬಳಿ ರಸ್ತೆ ಬಿರುಕು ; ವಾಹನ ಸಂಚಾರ ನಿರ್ಬಂಧ – ಕಹಳೆ ನ್ಯೂಸ್

ಬೆಳ್ತಂಗಡಿ, ಜು 18 : ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ಎರಡನೇ ತಿರುವಿನ ರಸ್ತೆಯ ಮೋರಿಯೊಂದು ಬಿರುಕು ಬಿಟ್ಟಿರುವ ಘಟನೆ ಸೋಮವಾರ ನಡೆದಿದೆ. ಬಿರುಕು ಬಿಟ್ಟ ಪ್ರದೇಶದಲ್ಲಿ ಬ್ಯಾರಿಕೆಡ್ ಅಳವಡಿಸಲಾಗಿದ್ದು, ಮರಳು ಮಿಶ್ರಿತ ಕಲ್ಲುಗಳನ್ನು ಹಾಕಿ ಹಾಕಿ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಕುಸಿತ ಗೊಂಡಿರುವ ಇನ್ನೊಂದು ಭಾಗದಲ್ಲಿ ಕಂದಕ ಇರುವ ಕಾರಣ ಬಸ್, ಲಾರಿ ಮೊದಲಾದ ಘನ ವಾಹನಗಳು ಸಂಚರಿಸುವಾಗ ಎಚ್ಚರಿಕೆ...
ಆರೋಗ್ಯಕಾಸರಗೋಡುದಕ್ಷಿಣ ಕನ್ನಡಮಂಜೇಶ್ವರಸುದ್ದಿ

ಕೇರಳದಲ್ಲಿ ಮಂಕಿಫಾಕ್ಸ್ ಎರಡನೇ ಪಾಸಿಟಿವ್ ; ಶನಿವಾರ ಮಂಗಳೂರು ಏರ್ ಪೋರ್ಟ್ ಮೂಲಕ ಆಗಮಿಸಿದ ಯುವಕನಿಗೆ ಮಂಕಿಫಾಕ್ಸ್ ಪಾಸಿಟಿವ್ – ಕಹಳೆ ನ್ಯೂಸ್

ಕಣ್ಣೂರು, ಜು 18 : ಕೇರಳದಲ್ಲಿ ಮಂಕಿಫಾಕ್ಸ್ ಎರಡನೇ ಪಾಸಿಟಿವ್ ಪ್ರಕರಣ ಕಣ್ಣೂರು ಜಿಲ್ಲೆಯಲ್ಲಿ ದೃಢಪಟ್ಟಿದೆ ರಾಜ್ಯ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನೋರ್ವನಿಗೆ ಮಂಕಿಫಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನನ್ನು ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು, ಇಂದು ಬಂದ ಫಲಿತಾಂಶದಲ್ಲಿ ಮಂಕಿಫಾಕ್ಸ್...
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ವಿವಾಹಿತ ಮಹಿಳೆಯೊಂದಿಗೆ ಅಸಭ್ಯ ವರ್ತನೆ ; ಖಾಸಗಿ ಕಂಪನಿಯೊಂದರ ಭದ್ರತಾ ಸಿಬ್ಬಂದಿ ಅರೆಸ್ಟ್ – ಕಹಳೆ ನ್ಯೂಸ್

ಪುತ್ತೂರು, ಜು 18 : ವಿವಾಹಿತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಮಾಜಿ ಸೈನಿಕನನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಅದೇ ಕಂಪನಿಯಲ್ಲಿ ಉದ್ಯೋಗಿಯಾಗಿರುವ ತಿಂಗಳಾಡಿ ನಿವಾಸಿಯಾಗಿರುವ ವಿವಾಹಿತ ಮಹಿಳೆ ನೀಡಿದ ದೂರಿನ ಮೇರೆಗೆ ಕುಂಬ್ರ ಕುರಿಕ್ಕಾರ ನಿವಾಸಿ, ಖಾಸಗಿ ಕಂಪನಿಯೊಂದರ ಭದ್ರತಾ ಸಿಬ್ಬಂದಿ ಹಾಗೂ ಮಾಜಿ ಯೋಧ ವಿದೀಪ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ....
ಕಾಸರಗೋಡುದಕ್ಷಿಣ ಕನ್ನಡಮಂಜೇಶ್ವರಸುದ್ದಿ

ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನಲ್ಲಿ ಮಂಕಿಫಾಕ್ಸ್ ಲಕ್ಷಣ..? – ಕಹಳೆ ನ್ಯೂಸ್

ಮಂಗಳೂರು, ಜು 18 : ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನೋರ್ವನಿಗೆ ಮಂಕಿಫಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನನ್ನು ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮಾತ್ರವಲ್ಲದೆ ಯುವಕನನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದ್ದು ನಿಗಾ ಇರಿಸಲಾಗಿದೆ. ಕೇರಳದಲ್ಲಿ ಮೊದಲ ಮಂಕಿಫಾಕ್ಸ್ ಪ್ರಕರಣ ಜು.12 ರಂದು ದಾಖಲಾಗಿತ್ತು. ವಿದೇಶದಿಂದ ಶನಿವಾರ ಮಂಗಳೂರು...
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಮನೆಗೆ ನುಗ್ಗಿ ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನ ; ಆರೋಪಿ ಪಂಜಿಮೊಗರಿನ ಮುಸ್ತಫಾ ಬಂಧನ – ಕಹಳೆ ನ್ಯೂಸ್

ಮಂಗಳೂರು, ಜು 18 : ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಗೆ ಪೋನ್ ಮಾಡುವಂತೆ ಪೀಡಿಸುತ್ತಿದ್ದಲ್ಲದೇ, ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಂಜಿಮೊಗರಿನ ಮುಸ್ತಫಾ (35) ಎಂದು ಗುರುತಿಸಲಾಗಿದೆ. ಆರೋಪಿಯು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದ ತರಕಾರಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ. ಅಪ್ರಾಪ್ತ ವಿದ್ಯಾರ್ಥಿನಿ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ತರಕಾರಿ ತರಲು ಅಂಗಡಿಗೆ...
ದಕ್ಷಿಣ ಕನ್ನಡಬೆಂಗಳೂರುರಾಷ್ಟ್ರೀಯಸುದ್ದಿ

ರಾಷ್ಟ್ರಪತಿ ಚುನಾವಣೆ ಆರಂಭ ; ದೇಶಾದ್ಯಂತ ಸಂಸದರು, ಶಾಸಕರಿಂದ ಮತದಾನ – ಕಹಳೆ ನ್ಯೂಸ್

ನವದೆಹಲಿ, ಜು 18 : ದೇಶದ ಪ್ರಥಮ ಪ್ರಜೆಯ ಆಯ್ಕೆಯ ಚುನಾವಣೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ್ಯಂತ ಸಂಸದರು, ಶಾಸಕರು ಮತ ಚಲಾಯಿಸುತ್ತಿದ್ದಾರೆ. ದೇಶದ ಸುಮಾರು 4,800 ಚುನಾಯಿತ ಜನ ಪ್ರತಿನಿಧಿಗಳು 15ನೇ ರಾಷ್ಟ್ರಪತಿ ಆಯ್ಕೆ ಮಾಡಲು ಮತದಾನ ಮಾಡಲಿದ್ದು, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿ ಇದ್ದಾರೆ. ಇನ್ನು ಸಂಸತ್ ಭವನ ಹಾಗೂ ರಾಜ್ಯಗಳ ವಿಧಾನಸಭೆಯಲ್ಲಿ ಬೆಳಗ್ಗೆ 10 ಗಂಟೆಯಿಂದ...
1 579 580 581 582 583 728
Page 581 of 728