ಎಸ್ಕೇಪ್ ಆಗುತ್ತಿದ್ದ ರೌಡಿಶೀಟರ್‌ನ ಚೇಸ್ ಮಾಡಿ ಹಿಡಿದ ಪೊಲೀಸರು – ಕಹಳೆ ನ್ಯೂಸ್
ಮಂಗಳೂರು: ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್‌ನನ್ನು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಕಲ್ಲಡ್ಕ ನಿವಾಸಿ ತೌಸೀಪ್ ಯಾನೆ ಪಪ್ಪಿ ಬಂಧಿತ ಆರೋಪಿ. ನಟೋರಿಯಸ್ ರೌಡಿ ತೌಸೀಪ್ ಮೂಡಬಿದ್ರೆ ಪರಿಸರದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಮೂಡಬಿದ್ರೆ ಹೊರವಲಯದ ಕೊಡಂಗಲ್ಲು ಸಮೀಪ ತೌಸೀಪ್ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆರೋಪಿಯ ಕಾರನ್ನು ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಹಿಂಬಾಲಿಸಿದ್ದರು. ಪೊಲೀಸರು ಹಿಂಬಾಲಿಸುತ್ತಿರುವ...







