Sunday, June 14, 2026

ದಕ್ಷಿಣ ಕನ್ನಡ

ದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ ; ತಪ್ಪಿದ ಅನಾಹುತ – ಕಹಳೆ ನ್ಯೂಸ್

ಪುತ್ತೂರು, ಫೆ.25 : ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಪುತ್ತೂರಿನ ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದಿದೆ. ದುರ್ಬಲಗೊಂಡ ಪಾಕ್ಕಾಸು ಮತ್ತು ರೀಪ್ ಗಳ ಹೊರತಾಗಿಯೂ, ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಆದರೆ, ಅದೃಷ್ಟವಶಾತ್ ಭಾನುವಾರವಾದ್ದರಿಂದ ಯಾವುದೇ ವಿದ್ಯಾರ್ಥಿಗಳು ಹಾಜರಾಗದಿದ್ದ ಕಾರಣ ಸಂಭವನೀಯ ಭಾರಿ ಅನಾಹುತ ತಪ್ಪಿದೆ. ಸಮೀಪದಲ್ಲೇ ಪದವಿ ಪೂರ್ವ ವಿಭಾಗದ ಕಟ್ಟಡ ಫೆಬ್ರವರಿ 25 ರಂದು ಉದ್ಘಾಟನೆಗೊಳ್ಳಲು ಸಿದ್ದವಾಗಿರುವ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಾಜ ಶಾಲಾ ಗೋಡೆಗಳ ಮೇಲೆ ಮೂಡಿದ ಆಕರ್ಷಕ ವರ್ಣ ಚಿತ್ರಗಳು –ಕಹಳೆ ನ್ಯೂಸ್

  ಜ.24. .ದ.ಕ ಜಿ. ಹಿರಿಯ ಪ್ರಾಥಮಿಕ ಶಾಲೆ ಸಾಜ ಇಲ್ಲಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ . ಇದರ ಎನ್.ಎಸ್.ಎಸ್ / ರಾಷ್ಟ್ರೀಯ ಸೇವಾಯೋಜನೆ ಘಟಕ ದ ಸುಮಾರು 60 ಶಿಬಿರಾರ್ಥಿಗಳು 2024-25 ನೇ ಸಾಲಿನ 7 ದಿನಗಳ ವಾರ್ಷಿಕ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ಈ ಕ್ಯಾಂಪ್ ನಲ್ಲಿ ಅಕ್ಷಯ್ ಆಚಾರ್ಯ , ಇವರ ನೇತೃತ್ವದಲ್ಲಿ ಶಾಲೆಯ ಗೋಡೆಗಳ ಮೇಲೆ ಆಕರ್ಷಕ ವರ್ಲಿ ವರ್ಣಚಿತ್ರಗಳು, ಪ್ರಾಸಾದ್ ನೇತ್ರ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣ

ಎನ್‌ಎಸ್‌ಎಸ್ ನ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ –ಕಹಳೆ ನ್ಯೂಸ್

ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸಾಜದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ದ ಎನ್‌ಎಸ್‌ಎಸ್ ನ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುರಳಿಕೃಷ್ಣ ಹಸಂತಡ್ಕ, ಸಾಜ ರಾಧಾಕೃಷ್ಣ ಆಳ್ವ, ಸುಧಾಕರ್ ನಾಯಕ್, ಚಂದಪ್ಪ ಪೂಜಾರಿ ಕಾಡ್ಲ, ಪ್ರೊ ಪದ್ಮನಾಭ, ರಮಾನಾಥ ವಿಟ್ಲ, ಶಂಕರ ಪಾಟಾಲಿ, ಶಶಿಕಾಂತ್ ಸಿ, ಶ್ರೀಮತಿ ಶಾಲಿನಿ ಬಿ, ಶ್ರೀಮತಿ ವಸಂತಿ ಹಸಂತಡ್ಕ, ಶ್ರೀಮತಿ ಶೋಭಾ ಮುರುಂಗಿ ಭಾಗವಹಿಸಿದರು. ಪ್ರಾಧ್ಯಪಕರಾದ...
ದಕ್ಷಿಣ ಕನ್ನಡಮಾರುಕಟ್ಟೆವಾಣಿಜ್ಯಸುದ್ದಿ

ಕರಿಮೆಣಸು ಬೆಳೆಗಾರರಿಗೆ ಬಂಪರ್ ಸುದ್ದಿ; ಬೆಲೆ ಗಗನಕ್ಕೇರುವ ಸಾಧ್ಯತೆ -ಕಹಳೆ ನ್ಯೂಸ್

ಕರಿಮೆಣಸು(ಕಾಳುಮೆಣಸು) ಬೆಳೆಗಾರರಿಗೆ ಬಂಪರ್ ಸುದ್ದಿ. ಕರಿಮೆಣಸು ಬೆಲೆ ಕೆಲವೇ ದಿನಗಳಲ್ಲಿ ಗಗನಕ್ಕೇರುವ ಸಾಧ್ಯತೆ ಇದ್ದು, ಕರಾವಳಿಯ ಅದ್ರಲ್ಲೂ ದ.ಕ ಜಿಲ್ಲೆಯ ಕೃಷಿಕರಿಗೆ ಈ ಬಾರಿ ಬಂಪರ್ ಹೊಡೆಯುವ ಸಾಧ್ಯತೆ ಇದೆ. ಹೌದು. ವಿಯೇಟ್ನಂನಲ್ಲಿ ವಾತಾವರಣ ವೈಪರೀತ್ಯದಿಂದಾಗಿ ಕರಿಮೆಣಸು ಬೆಳೆ ನಾಶಗೊಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕರಿಮೆಣಸು ಅಭಾವ ಉಂಟಾಗಿದೆ. ಹಾಗಾಗಿ ಕರಾವಳಿ ಭಾಗದಲ್ಲಿ ಕರಿಮೆಣಸು ಬೆಳೆಯುವ ಕೃಷಿಕರಿಗೆ ಇದರಿಂದಾಗಿ ಲಕ್ ಹೊಡೆಯುವ ಸಾಧ್ಯತೆ ಇದೆ. ಇನ್ನು ಕಾಳುಮೆಣಸು ಉತ್ಪಾದನೆಯಲ್ಲಿ ಭಾರತ ಐದನೇ...
ದಕ್ಷಿಣ ಕನ್ನಡಶಿಕ್ಷಣ

ನಾಳೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಅಣ್ಣಾಮಲೈ ಭೇಟಿ -ಕಹಳೆ ನ್ಯೂಸ್

ಕಲ್ಲಡ್ಕದ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಯದಲ್ಲಿ ನಾಳೆ ಪ್ರಚಲಿತ ಭಾರತ; ಸತ್ಯ – ಮಿಥ್ಯೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಶ್ರೀ ರಾಮ ಪದವಿ ಕಾಲೇಜಿನ ಆಜಾದ್ ಭವನದಲ್ಲಿ ನಡೆಯಲಿದೆ. ತಮಿಳುನಾಡಿನ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಾಯಾಜಿ...
ಉಡುಪಿಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಉಡುಪಿ – ಮಂಗಳೂರು ರಸ್ತೆಯಲ್ಲಿ ಪಿಕಪ್, ಕಾರು ನಡುವೆ ಅಪಘಾತ ; ಸಿಂಧನೂರು ಶಾಸಕರ ಸೋದರಳಿಯ ಸಾವು – ಕಹಳೆ ನ್ಯೂಸ್

ಮಂಗಳೂರು, ಫೆ.23 : ಪಿಕಪ್ ವಾಹನವೊಂದು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಓಡಾಡುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆಯಲ್ಲಿ ಸಿಂಧನೂರು ಶಾಸಕರ ಸೋದರಳಿಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ಹೊರವಲಯದಲ್ಲಿರುವ ಕುಲೈನಲ್ಲಿ ಶನಿವಾರ ಈ ಘಟನೆ ನಡೆದಿದೆ. ಮೃತರನ್ನು ದೀಪು ಗೌಡ ಅಲಿಯಾಸ್ ಪೊಂಪ ಗೌಡ (48) ಎಂದು ಗುರುತಿಸಲಾಗಿದ್ದು, ರಾಯಚೂರು ಜಿಲ್ಲೆಯ ಸಿಂಧನೂರು ಮೂಲದವರು. ಅವರು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಜಿ, ವೀರಕಂಭ ಶಾಲೆ ಯಲ್ಲಿ 2024- 25 ನೇ ಸಾಲಿನ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕಲಿಕಾ ಹಬ್ಬ -ಕಹಳೆ ನ್ಯೂಸ್

ಬಂಟ್ವಾಳ : ವಿಫಲತೆಗಳ ಬಗ್ಗೆ ಚಿಂತಿಸದಿರು ಎಂಬಂತೆ ಸೋಲು ಗೆಲುವುಗಳ ಸಮಾನ ಸ್ವೀಕಾರದ ಮನೋಭಾವನೆಯನ್ನು ಎಳೆಯ ಮಕ್ಕಳಲ್ಲಿ ಬೆಳೆಸಲು ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸಲು ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ದಾಖಲಾತಿಯನ್ನು ಸುಧಾರಿಸುವ ಸಮುದಾಯದ ಜೊತೆಗೆ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಸರ್ಕಾರದಿಂದ ನಿರ್ವಹಿಸುವ ಕಲಿಕಾ ಹಬ್ಬ ಕಾರ್ಯಕ್ರಮವು ಉತ್ತಮ ಕೆಲಸವಾಗಿದೆ ಎಂಬುದಾಗಿ ಮಾlಜಿ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ದಾನಿಗಳಾದ ಸಂಜೀವ ಪೂಜಾರಿ ಹೇಳಿದರು. ಅವರು 2024- 25...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಫೆ. 23 ರಂದು ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ,ಸಜಿಪ ಮಾಗಣೆ ವತಿಯಿಂದ ಕಟೀಲು ಮೇಳದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ- ಕಹಳೆ ನ್ಯೂಸ್

ಬಂಟ್ವಾಳ : ಸಜೀಪ ಮೂಡ,ಸಜೀಪ ಮುನ್ನೂರು,ಸಜೀಪನಡು,ಸಜೀಪಪಡು ಗ್ರಾಮಗಳನ್ನು ಒಳಗೊಂಡ ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ,ಸಜಿಪ ಮಾಗಣೆ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ವತಿಯಿಂದ ಸಜೀಪಮೂಡ ಗ್ರಾಮದ ಕೈಮುಗಿಯುವಗೋಳಿ ಎಂಬಲ್ಲಿ ಫೆ. 23 ರಂದು ರವಿವಾರ ಸಂಜೆ 6 ಗಂಟೆಯಿಂದ ಭಕ್ತಿ ಪೂರ್ವಕ 9ನೇ ವರ್ಷದ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ  ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು...
1 201 202 203 204 205 740
Page 203 of 740