ಇಂದು INDIA ಕೂಟದ ಹೈವೋಲ್ಟೇಜ್ ಸಭೆ – 23 ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗಿ – ಕಹಳೆ ನ್ಯೂಸ್
ನವದೆಹಲಿ: ಬಿಜೆಪಿ ನೇತೃತ್ವದ ಸರ್ಕಾರ ಎದುರಿಸಲು ಹಾಗೂ ವಿಪಕ್ಷಗಳ ಏಕತೆ ಬಲಪಡಿಸಿ ಜಂಟಿ ಕಾರ್ಯತಂತ್ರ ರೂಪಿಸಲು ಇಂದು (ಜೂನ್ 08) ಇಂಡಿಯಾ ಮೈತ್ರಿ ಕೂಟ ಮಹತ್ವದ ಸಭೆ ನಡೆಸಲಿದೆ. ಸಭೆಯಲ್ಲಿ ಒಟ್ಟು 23 ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗಿಯಾಗಲಿದ್ದು, ತಮಿಳುನಾಡಿನ ಚುನಾವಣೆಯ ಬಳಿಕ ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಂಡಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಆಪ್ ಸಭೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಸಭೆಯಲ್ಲಿ ಒಟ್ಟು 23 ಪಕ್ಷಗಳು ಭಾಗವಹಿಸುವುದು ಖಚಿತವಾತವಾಗಿದೆ ಎಂದು...







