ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಪುತ್ತೂರು ಘಟಕದ ಸೇವಾ ಪ್ರಕಲ್ಪವಾದ ವಜ್ರತೇಜಸ್ ತಂಡದಿಂದ ಅನಾರೋಗ್ಯ ಪೀಡಿತ ವಿಘ್ನೇಶ್ ಭಟ್ ಅವರಿಗೆ ಸಹಾಯಧನ ವಿತರಣೆ -ಕಹಳೆ ನ್ಯೂಸ್

ಪುತ್ತೂರು: ವಿಶ್ವ ಹಿಂದೂ ಪರಿಷದ್ ಹಾಗೂ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಸಂಗ್ರಹವಾದ ನಿಧಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಂಪ್ಯದ ನಿವಾಸಿ ವಿಘ್ನೇಶ್ ಭಟ್ ಅವರಿಗೆ ಸಹಾಯಧನ ವಿತರಿಸಲಾಯಿತು.
ವಜ್ರತೇಜಸ್ ತಂಡದ ಸದಸ್ಯರು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿ ನೆರವಿನ ಧನವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಜ್ರತೇಜಸ್ ಹಿಂದೂ ಕವಚ್ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ಜಿಲ್ಲಾ ಪ್ರಚಾರ-ಪ್ರಸಾರ ಪ್ರಮುಖ್ ಕೇಶವಪ್ರಸಾದ್ ಬಜಪ್ಪಳ, ವಿಶ್ವ ಹಿಂದೂ ಪರಿಷದ್ ಗ್ರಾಮಾಂತರ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಪುತ್ತೂರು ನಗರ ಸಾಪ್ತಾಹಿಕ ಮಿಲನ್ ಪ್ರಮುಖ್ ಸಂದೀಪ್ ಸಿಂಗಣಿ ಹಾಗೂ ವಜ್ರತೇಜಸ್ ಸದಸ್ಯ ಡಾ. ಸುರೇಶ್ ಪುತ್ತೂರಾಯರು ಉಪಸ್ಥಿತರಿದ್ದರು.











