Wednesday, June 17, 2026

ಸುದ್ದಿ

ಜಿಲ್ಲೆಸುದ್ದಿ

ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪ್ರಾರಂಭ ಮಾಡ್ತೇನೆ: ಯತ್ನಾಳ್ -ಕಹಳೆ ನ್ಯೂಸ್

ವಿಜಯಪುರ: ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ವಿಚಾರ ಪ್ರಾರಂಭ ಮಾಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ವಿಚಾರ ಪ್ರಾರಂಭ ಮಾಡುತ್ತೇನೆ. ಜಿಲ್ಲಾವಾರು ಹಿಂದುತ್ವದ ಸಭೆ ಮಾಡುತ್ತೇನೆ. ಕೋಲಾರ ಜಿಲ್ಲೆಯ ಐತಿಹಾಸಿಕ ವಿಘ್ನೇಶ್ವರ ದೇವಸ್ಥಾನದಿಂದ ಸಭೆ ಪ್ರಾರಂಭ ಮಾಡುತ್ತೇನೆ ಎಂದರು. ಹಿಂದುತ್ವ, ನಿರುದ್ಯೋಗ, ಅಭಿವೃದ್ಧಿ ಮೂರು ಉದ್ದೇಶಗಳೊಂದಿಗೆ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಜಿ.ಎಲ್‌. ಆಚಾರ್ಯ ಜುವೆಲ್ಲರ್ಸ್‌ನಲ್ಲಿ ಅಕ್ಷಯ ತೃತೀಯ ಆಫರ್‌ಗೆ ಭರ್ಜರಿ ಸ್ಪಂದನೆ -ಕಹಳೆ ನ್ಯೂಸ್

ಪುತ್ತೂರು: ಅಕ್ಷಯ ತೃತೀಯ ಹಬ್ಬದ ಅಂಗವಾಗಿ ಜಿ.ಎಲ್‌. ಆಚಾರ್ಯ ಜುವೆಲ್ಲರ್ಸ್‌ನಲ್ಲಿ ಘೋಷಿಸಿರುವ ವಿಶೇಷ ರಿಯಾಯಿತಿಗಳಿಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಚಿನ್ನಾಭರಣಗಳ VA ಶುಲ್ಕದ ಮೇಲೆ ರೂ.500ರವರೆಗೆ, ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ರೂ.6000 ಹಾಗೂ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ರೂ.7000ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ವಿಶೇಷ ಆಫ‌ರ್ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಮತ್ತು ಹಾಸನದಲ್ಲಿರುವ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ. ಗ್ರಾಹಕರ ಅನುಕೂಲಕ್ಕಾಗಿ ಮಳಿಗೆಗಳು ಬೆಳಿಗ್ಗೆ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಾರ್ಪಣೆ -ಕಹಳೆ ನ್ಯೂಸ್

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ ಅವರನ್ನು ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಯುವಸಿಂಚನ ಪತ್ರಿಕೆ ಬಿಡುಗಡೆ ಇದೇ ಸಂದರ್ಭದಲ್ಲಿ ಯುವವಾಹಿನಿ ಮುಖವಾಣಿ ‘ಯುವಸಿಂಚನ’ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ದಕ್ಷಿಣ ಕನ್ನಡ ಸಂಸದರಾದ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ಕಮಿಷನರ್ ವಿರುದ್ಧ ಡಿಜಿಪಿಗೆ ದೂರು ನೀಡಿದ ಎಸ್ಪಿ ಕಾಶಿ -ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಕಮಿಷನರ್ ವಿರುದ್ಧ ಡಿಜಿಪಿ ಸಲೀಂ ಅವರಿಗೆ ಎಸ್ಪಿ ಕಾಶಿ ಅವರು ದೂರು ನೀಡಿದ್ದಾರೆ. ಮಾನಸಿಕ ಕಿರುಕುಳ, ದರ್ಪ ಮತ್ತು ತಾರತಮ್ಯ ವಿರುದ್ಧ ನಿಂತ ಎಸ್ಪಿ ಕಾಶಿ ಅವರು ಡಿಜಿಪಿಗೆ ಪತ್ರ ಬರೆದಿದ್ದಾರೆ. 30 ನಿಮಿಷ ಟೈಮ್ ಕೊಡಿ, ಮಂಗಳೂರು ಕಮಿಷನರ್ ಕರ್ಮಕಾಂಡ ಬಯಲು ಮಾಡುತ್ತೇನೆ. ಅಧಿಕಾರಿಗೆ ಬ್ಯಾಕ್ ಟು ಬ್ಯಾಕ್ ಮೆಮೊ ಕೊಟ್ಟು, ನಾವು ಹೇಳಿದಂತೆ ಕೆಲಸ ಮಾಡಬೇಕು ಇಲ್ಲವಾದರೆ ಮಾನಸಿಕ ಹಿಂಸೆ ಕೊಡ್ತಾರೆ. ಕನ್ನಡಿಗ ಅಧಿಕಾರಿಗಳನ್ನು...
ಜಿಲ್ಲೆಸುದ್ದಿಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ತಪ್ಪಿತು ದುರಂತ : 4 ಗಂಟೆ ಆಗಸದಲ್ಲೇ ಫ್ಲೈಟ್‌ ಸುತ್ತಾಟ – ಆತಂಕದಲ್ಲಿ ಪ್ರಯಾಣಿಕರ ಕಣ್ಣೀರು:ತಾಂತ್ರಿಕ ದೋಷದಿಂದ ಕಂಟ್ರೋಲ್‌ ಕಳೆದಕೊಂಡಿದ್ದ ವಿಮಾನ -ಕಹಳೆ ನ್ಯೂಸ್

ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು 4 ಗಂಟೆಗಳ ಕಾಲ ವಿಮಾನ ಆಗಸದಲ್ಲೇ ಸುತ್ತಾಟ ನಡೆಸಿದ್ದು, ಹುಬ್ಬಳ್ಳಿಯಲ್ಲಿ ಮಹಾ ದುರಂತವೊಂದು ತಪ್ಪಿದೆ. Fly91 ಏರ್‌ಲೈನ್ಸ್ IC3401ಸಂಖ್ಯೆ ಫ್ಲೈಟ್‌ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿತ್ತು. ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗಿತ್ತು. ಸಂಜೆ 4:30 ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ತಾಂತ್ರಿಕ ದೋಷದಿಂದ ವಿಮಾನ ನಿಯಂತ್ರಣ...
ದೆಹಲಿಸುದ್ದಿ

ಮಹಿಳಾ ಮೀಸಲಾತಿ ಸೋಲು ದ್ರೌಪದಿ ವಸ್ತ್ರಾಪಹರಣಕ್ಕೆ ಸಮ: ಯೋಗಿ ಆದಿತ್ಯನಾಥ್‌ -ಕಹಳೆ ನ್ಯೂಸ್

ಲಕ್ನೋ: ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದು, ದ್ರೌಪದಿ ವಸ್ತ್ರಾಪಹರಣಕ್ಕೆ ಸಮ ಎಂದು ಸಿಎಂ ಯೋಗಿ ಆದಿತ್ಯನಾಥ್‌ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಗುರುವಾರ ಸಂಸತ್ತಿನಲ್ಲಿ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರ ನಡವಳಿಕೆಯನ್ನು ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಹೋಲಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ಕ್ಷೇತ್ರಗಳ ಪುನರ್ವಿಂಗಡಣೆಯ ನಂತರ ಮಹಿಳಾ ಕೋಟಾವನ್ನು ಜಾರಿಗೆ ತರಲು ಪ್ರಯತ್ನಿಸುವ ಮಸೂದೆಗೆ ಇಂಡಿಯಾ ಒಕ್ಕೂಟ ವಿರೋಧ ವ್ಯಕ್ತಪಡಿಸಿತು....
ಜಿಲ್ಲೆಬೆಳಗಾವಿಸಂತಾಪಸುದ್ದಿ

ವರದಕ್ಷಿಣೆ ಕಿರುಕುಳ : ಗೃಹಿಣಿ ಆತ್ಮಹತ್ಯೆ, ಪತಿ ಅರೆಸ್ಟ್ -ಕಹಳೆ ನ್ಯೂಸ್

ಬೆಳಗಾವಿ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಜ್ಯೋತಿ ನಗರದಲ್ಲಿ ನಡೆದಿದೆ. ಶ್ರೀನಿಧಿ ಸಂತೋಷ್ ನಾವಿ (28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶ್ರೀನಿಧಿ ಹಾಗೂ ಸಂತೋಷ್ 2021ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಗಂಡ, ಹೆಂಡತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಕೌಟುಂಬಿಕ ಕಲಹ, ಕಿರುಕುಳಕ್ಕೆ ಬೇಸತ್ತು ಮನೆಯ ಮೊದಲ ಮಹಡಿಯಲ್ಲಿ ಕಿಟಿಕಿ ಗ್ರಿಲ್‌ಗೆ ವೇಲ್ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ. ತವರು ಮನೆಯವರೊಂದಿಗೆ ಮಾತನಾಡಬಾರದೆಂದು...
ಸುದ್ದಿ

ಹಾರ್ಮುಜ್‌ ಜಲಸಂಧಿ ಮತ್ತೆ ಬಂದ್‌ : ಭಾರತಕ್ಕೆ ತೆರಳುತ್ತಿದ್ದ 14 ಹಡಗುಗಳಿಗೆ ಇರಾನ್‌ ತಡೆ -ಕಹಳೆ ನ್ಯೂಸ್

ಟೆಹ್ರಾನ್: ಹಾರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚಲಾಗಿದೆ. ಅದನ್ನು ಸಮೀಪಿಸುವ ಯಾವುದೇ ಹಡಗನ್ನು ಟಾರ್ಗೆಟ್‌ ಮಾಡಿ ಹೊಡೆಯಲಾಗುವುದು ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಭಾರತ ತೆರಳುತ್ತಿದ್ದ 14 ಹಡಗುಗಳನ್ನು ಇರಾನ್‌ ತಡೆದಿದೆ. ಶನಿವಾರ ಇರಾನ್ ಜಲಸಂಧಿ ಅಥವಾ ಅದರ ಸಮೀಪದಲ್ಲಿರುವ ಹಡಗುಗಳು, ಒಂದು ಟ್ಯಾಂಕರ್ ಮೇಲೆ ಗುರಿಯಿಡಲಾಗಿದೆ ಎಂಬ ವರದಿಗಳು ಹೊರಬಿದ್ದವು. ಅದರ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿ ಮುಚ್ಚಲಾಗಿದೆ. ಪ್ರಮುಖ ಜಾಗತಿಕ ಹಡಗು ಮಾರ್ಗವನ್ನು ತಾತ್ಕಾಲಿಕವಾಗಿ ಪುನಃ ತೆರೆಯಲಾಗಿದೆ ಎಂದು ಇರಾನ್‌ನ...
1 65 66 67 68 69 3,395
Page 67 of 3395