Thursday, April 23, 2026
ಸುದ್ದಿ

ಹಾರ್ಮುಜ್‌ ಜಲಸಂಧಿ ಮತ್ತೆ ಬಂದ್‌ : ಭಾರತಕ್ಕೆ ತೆರಳುತ್ತಿದ್ದ 14 ಹಡಗುಗಳಿಗೆ ಇರಾನ್‌ ತಡೆ -ಕಹಳೆ ನ್ಯೂಸ್

ಟೆಹ್ರಾನ್: ಹಾರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚಲಾಗಿದೆ. ಅದನ್ನು ಸಮೀಪಿಸುವ ಯಾವುದೇ ಹಡಗನ್ನು ಟಾರ್ಗೆಟ್‌ ಮಾಡಿ ಹೊಡೆಯಲಾಗುವುದು ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಭಾರತ ತೆರಳುತ್ತಿದ್ದ 14 ಹಡಗುಗಳನ್ನು ಇರಾನ್‌ ತಡೆದಿದೆ.
ಶನಿವಾರ ಇರಾನ್ ಜಲಸಂಧಿ ಅಥವಾ ಅದರ ಸಮೀಪದಲ್ಲಿರುವ ಹಡಗುಗಳು, ಒಂದು ಟ್ಯಾಂಕರ್ ಮೇಲೆ ಗುರಿಯಿಡಲಾಗಿದೆ ಎಂಬ ವರದಿಗಳು ಹೊರಬಿದ್ದವು. ಅದರ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿ ಮುಚ್ಚಲಾಗಿದೆ.

ಪ್ರಮುಖ ಜಾಗತಿಕ ಹಡಗು ಮಾರ್ಗವನ್ನು ತಾತ್ಕಾಲಿಕವಾಗಿ ಪುನಃ ತೆರೆಯಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವರು ಘೋಷಿಸಿದ್ದರು. ಜಲಸಂಧಿ ತೆರೆದು ಒಂದು ದಿನ ಕಳೆಯುವಷ್ಟರಲ್ಲಿ ಮತ್ತೆ ಬಂದ್‌ ಮಾಡಲಾಗಿದೆ. ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್  ತನ್ನ ನಿರ್ಧಾರಕ್ಕೆ ಅಮೆರಿಕದ ನಿರಂತರ ದಿಗ್ಬಂಧನವೇ ಕಾರಣ ಎಂದು ಆರೋಪಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು