ಚೆಲುವಿನ ಚಿತ್ತಾರ ಸಿನಿಮಾದ ಬುಲ್ಲಿ ರಾಕೇಶ್ ಇನ್ನಿಲ್ಲ !
ಚೆಲುವಿನ ಚಿತ್ತಾರ ಚಿತ್ರ ನೋಡಿರಬೇಕಲ್ಲ.ಆ ಚಿತ್ರದಲ್ಲಿ ಅಮೂಲ್ಯ-ಗಣೇಶ್ ಅಭಿನಯದ ಜತೆ ಕುಳ್ಳ ಬುಲ್ಲಿ ಮತ್ತು ಕೋಮಲ್ ಕುಮಾರ್ ಕಾಮಿಡಿ ಭಯಂಕರ ಹಿಟ್ ಆಗಿತ್ತು.ಅದರಲ್ಲಿ ಆ ಹುಡುಗ ಅಂದರೆ ಬುಲ್ಲಿ ಪಪುಸಿ ಅಂದರೆ ರಾಕೇಶ್ ಕೋಮಲ್’ಗೆ ಪೆಪ್ಸಿ ತಂದುಕೊಡೋ ದೃಶ್ಯ ಫೇಮಸ್ ಆಗಿತ್ತು. ಈಗ ಆ ಹುಡುಗ ರಾಕೇಶ್ ಅಸುನೀಗಿದ್ದಾರೆ. ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ ಸೆಂಟ್ಸ್ ಜಾನ್ ಆಸ್ಪತ್ರೆಯಲ್ಲಿ ನೆನ್ನೆ ಸಂಜೆ ಅಸುನೀಗಿದರು. ರಾಕೇಶ್ ಧೂಮಪಾನ ಚಿತ್ರದಲ್ಲಿ...