Wednesday, March 18, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬಿಜೆಪಿ ಸರ್ಕಾರ ಅಧಿಕಾರ ಬಹಿಸಿಕೊಂಡಾಗಿನಿಂದ ಕಲ್ಯಾಣ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ ; ಕುಮಾರಸ್ವಾಮಿ-ಕಹಳೆ ನ್ಯೂಸ್

ಕಲಬುರ್ಗಿ : ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ಸರ್ಕಾರ ಅಧಿಕಾರ ಬಹಿಸಿಕೊಂಡಾಗಿನಿಂದ ಕಲ್ಯಾಣ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು, ರಾಯಚೂರಿನಲ್ಲಿ ಆರಂಭವಾಗಬೇಕಿದ್ದ ಐಐಟಿ ಧಾರವಾಡಕ್ಕೆ ಹೋದರೆ, ಕಲಬುರ್ಗಿಯ ಇಎಸ್ಐಸಿ ಆಸ್ಪತ್ರೆಯಲ್ಲಿ ಆರಂಭವಾಗಬೇಕಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಇದೀಗ ಹುಬ್ಬಳ್ಳಿಗೆ ಮಂಜೂರು ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹೈದರಾಬಾದ್ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ...
ಹೆಚ್ಚಿನ ಸುದ್ದಿ

ಕೇರಳದಲ್ಲಿ ಮತ್ತೆ ರಕ್ತಪಾತ; ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಕಾರ್ಯಕರ್ತರು ಅರೆಸ್ಟ್ –ಕಹಳೆ ನ್ಯೂಸ್

ಆಲಪ್ಪುಳ : ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಡಿಪಿಐನ ಎಂಟು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ಆಲಪ್ಪುಳ ಜಿಲ್ಲೆಯ ಚೆರ್ತಲಾ ಬಳಿಯ ನಾಗಮಕುಲಂಗರದಲ್ಲಿ ಎಸ್‍ಡಿಪಿಐ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಆರ್‍ಎಸ್‍ಎಸ್ ಕಾರ್ಯಕರ್ತ 23 ವರ್ಷದ ನಂದು ಯಾನೆ ರಾಹುಲ್ ಕೃಷ್ಣ ಎಂಬವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಎಸ್‍ಡಿಪಿಐ ಮತ್ತು ಆರ್‍ಎಸ್‍ಎಸ್‍ನ ಆರು ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ಎರ್ನಾಕುಲಂನ...
ಹೆಚ್ಚಿನ ಸುದ್ದಿ

ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರಗಳನ್ನು ನೀಡುವ ಮೇಲಿನ ನಿಬರ್ಂಧವನ್ನು ಕೇಂದ್ರ ತೆಗೆದುಹಾಕಿದೆ; ನಿರ್ಮಲಾ ಸೀತಾರಾಮನ್-ಕಹಳೆ ನ್ಯೂಸ್

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರಗಳನ್ನು ನೀಡುವ ಮೇಲಿನ ನಿಬರ್ಂಧವನ್ನು ಕೇಂದ್ರ ತೆಗೆದುಹಾಕಿದೆ ಎಂದು ಹೇಳಿದ್ದಾರೆ. ಈ ಕುರಿತು ಅವರು, ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವ್ಯವಹಾರವನ್ನು ನೀಡುವುದರ ಮೇಲಿದ್ದ ನಿಬರ್ಂಧವನ್ನು ತೆಗೆದುಹಾಕಲಾಗಿದ್ದು, ಎಲ್ಲಾ ಬ್ಯಾಂಕುಗಳು ಈಗ ಭಾಗವಹಿಸಬಹುದು ಎನ್ನುವುದು ಖಚಿತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಈ ನಿರ್ಧಾರವು ಖಾಸಗಿ ಬ್ಯಾಂಕುಗಳನ್ನು ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರನ್ನಾಗಿ...
ಹೆಚ್ಚಿನ ಸುದ್ದಿ

ಕೇರಳದಲ್ಲಿ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜುತ್ತಾ ಮೋಜು ಮಾಡಿ ಗಮನ ಸೆಳೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ-ಕಹಳೆ ನ್ಯೂಸ್

ನವದೆಹಲಿ : ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಕೊಲ್ಲಮ್ ಜಿಲ್ಲೆಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಸಮುದ್ರಕ್ಕೆ ಹಾರಿ ಮೀನುಗಾರರೊಂದಿಗೆ ಈಜುತ್ತಾ ಮೋಜು ಮಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಹುಲ್, ಬುಧವಾರದಂದು ಕೊಲ್ಲಂ ಜಿಲ್ಲೆಗೆ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿದ್ದು, ಅಲ್ಲಿ ತಂಗಸ್ಸೆರಿ ಸಮುದ್ರದಲ್ಲಿ ತಮ್ಮ ಸ್ನೇಹಿತರು ಹಾಗೂ ಮೀನುಗಾರರೊಂದಿಗೆ ಈಜಾಡಿದ್ದಾರೆ ಎನ್ನಲಾಗಿದೆ. ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಬೀಸಿ ಸಮುದ್ರಕ್ಕೆ...
ಹೆಚ್ಚಿನ ಸುದ್ದಿ

ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಂಧನ-ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟದ ಪ್ರಮುಖ ಆರೋಪಿ ಸೇರಿ ಇಬ್ಬರನ್ನು ಪೊಲೀಸರು ತಮಿಳುನಾಡಿನ ಬಳಿ ಬಂಧಿಸಿದ್ದಾರೆ. ಗುಡಿಬಂಡೆ ಮೂಲದ ಬಿಜೆಪಿ ನಾಯಕ ಮತ್ತು ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಮೊದಲ ಆರೋಪಿ ಗುಡಿಬಂಡೆ ನಾಗರಾಜ್ ಮತ್ತು ಬಾಂಬ್ ಸ್ಫೋಟಿಸುವ ತಮಿಳುನಾಡು ಮೂಲದ ಗಣೇಶ್ ಎಂಬುವರನ್ನು ಹೊಸೂರು ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ....
ಹೆಚ್ಚಿನ ಸುದ್ದಿ

ಕೌಟುಂಬಿಕ ಕಲಹದಿಂದಾಗಿ ಐದು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಬಲಿ-ಕಹಳೆ ನ್ಯೂಸ್‍

ಜಾರ್ಖಂಡ್ ನ ಗುಮ್ಲಾದಲ್ಲಿ ಬುಡಕಟ್ಟು ಜನಾಂಗದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹತ್ಯೆ ಕೌಟುಂಬಿಕ ಕಲಹದಿಂದ ನಡೆದಿದ್ದು, ಮೃತರನ್ನು ನಿಕೋಡಿನ್ ಟೊಪ್ನೊ, ಭೀಮ್ಸೆನ್ ಟೊಪ್ನೊ, ಶಿಲ್ವಂತಿ ಟೊಪ್ನೊ ಮತ್ತು ಐದು ವರ್ಷದ ಮಗು ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿನ ವೈಯಕ್ತಿಕ ಕಲಹವೇ ಇದಕ್ಕೆ ಕಾರಣ ಎಂದು ಪ್ರಾಥಮಿಕ ವರದಿ ತಿಳಿಸಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ....
ಹೆಚ್ಚಿನ ಸುದ್ದಿ

ಗುಜರಾತ್‍ನಲ್ಲಿ ದಲಿತ ವರನ ಮದುವೆ ಮೆರವಣಿಗೆ ಮೇಲೆ ಸವರ್ಣಿಯರಿಂದ ಕಲ್ಲು ತೂರಾಟ-ಕಹಳೆ ನ್ಯೂಸ್

ಗುಜರಾತ್ : ಗುಜರಾತ್‍ನ ಅರಾವಲಿ ಜಿಲ್ಲೆಯಲ್ಲಿ ವಿವಾಹದಲ್ಲಿ ದಲಿತ ವರ ಸಾಂಪ್ರದಾಯಿಕ ಟೋಪಿ ಧರಿಸಿದಕ್ಕೆ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಈ ಮೆರವಣಿಗೆಯ ಮೇಲೆ ಸವರ್ಣೀಯರು ಕಲ್ಲು ತೂರಾಟ ನಡೆಸಿದ್ದು, ಮೆರವಣಿಗೆಯಲ್ಲಿ ವರನ ಕೆಲವು ಸಂಬಂಧಿಕರು ಸಾಂಪ್ರದಾಯಿಕ ಟೋಪಿಗಳನ್ನು ಧರಿಸಿದ್ದರು, ಈ ಕಾರಣದಿಂದಾಗಿ ಸವರ್ಣಿಯರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಕಾರ, ಈವರೆಗೆ 9 ಜನರನ್ನು ಬಂಧಿಸಲಾಗಿದೆ. ಮದುವೆ ಮೆರವಣಿಗೆ ಆರಂಭದ...
ಹೆಚ್ಚಿನ ಸುದ್ದಿ

ಪದವಿನಂಗಡಿಯಲ್ಲಿ ದೈವಗಳ ಸಾನಿಧ್ಯ ಪುನರ್ ಪ್ರತಿಷ್ಠೆ ಹಾಗೂ ದೈವಗಳ ಗಗ್ಗರ ಸೇವೆ -ಕಹಳೆ ನ್ಯೂಸ್

ಪದವಿನಂಗಡಿ ಗಂಧಕಾಡುನಲ್ಲಿ ಶ್ರೀ ಮಂತ್ರದೇವತೆ ಮತ್ತು ಶ್ರೀ ಕೊರಗಜ್ಜ ಸಾನಿಧ್ಯ ಪುನರ್ ಪ್ರತಿಷ್ಠೆ ಹಾಗೂ ದೈವಗಳ ಗಗ್ಗರ ಸೇವೆಯು ನಡೆಯಲಿದೆ. ಫೆಬ್ರವರಿ 20 ಕ್ಕೆ ಆರಂಭಗೊಂಡ ಈ ಕಾರ್ಯಕ್ರಮವು ಇದೇ ಶುಕ್ರವಾರ ಅಂದರೆ ನಾಳೆ ದೈವದ ನೇಮೊತ್ಸವದೊಂದಿಗೆ ಸಮಾಪ್ತಿಗೊಳ್ಳಲಿದೆ....
1 90 91 92 93 94 174
Page 92 of 174