Wednesday, September 9, 2026
ಬೆಂಗಳೂರುಸುದ್ದಿ

ಒಂದು ವಾರ ಸಹಕಾರ ಕೊಟ್ಟರೆ ಹೋಟೆಲ್‌ಗಳಿಗೆ ಸಿಲಿಂಡರ್ ಕೊಡ್ತೀವಿ: ಕೆ.ಹೆಚ್. ಮುನಿಯಪ್ಪ – ಕಹಳೆ ನ್ಯೂಸ್

ಬೆಂಗಳೂರು: ಒಂದು ವಾರ ಹೋಟೆಲ್‌ಗಳು ಗ್ಯಾಸ್ ಸಿಲಿಂಡರ್‌ಗಾಗಿ ಸಹಕಾರ ಕೊಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ಹೋಟೆಲ್ ಅಸೋಸಿಯೇಷನ್‌ಗೆ ಮನವಿ ಮಾಡಿದ್ದಾರೆ.

ಜಾಹೀರಾತು

ವಿಧಾನ ಪರಿಷತ್‌ನಲ್ಲಿ ಗ್ಯಾಸ್ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಡೊಮೆಸ್ಟಿಕ್ ಸಿಲಿಂಡರ್ ಸಮಸ್ಯೆ ಇಲ್ಲ. ಎಷ್ಟು ಸಪ್ಲೈ ಆಗಬೇಕೋ ಅಷ್ಟು ಆಗಿದೆ. ಗೃಹ ಬಳಕೆ ನಿಲ್ಲಿಸೋದಿಲ್ಲ. 3 ಲಕ್ಷಕ್ಕೂ ಹೆಚ್ಚು ಸಿಲಿಂಡರ್ ಬಳಕೆ ಆಗುತ್ತಿದೆ. ಅದನ್ನ ಕೊಡುತ್ತಿದ್ದೇವೆ. ಕಮರ್ಷಿಯಲ್ ಗ್ಯಾಸ್ ಸಮಸ್ಯೆ ಆಗಿದೆ. 20% ಮಾತ್ರ ಕೊಡೋಕೆ ಕೇಂದ್ರ ಸರ್ಕಾರ ಹೇಳಿದೆ. 9 ಸಾವಿರ ಕಮರ್ಷಿಯಲ್ ಗ್ಯಾಸ್ ಕೊಡುತ್ತಿದ್ದೇವೆ. ಇದರಲ್ಲಿ ಆಸ್ಪತ್ರೆ, ವಸತಿ ಶಾಲೆ, ಹಾಸ್ಟೆಲ್, ಇಂದಿರಾ ಕ್ಯಾಂಟೀನ್‌ಗೆ ಸಿಲಿಂಡರ್ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರೆಸ್ಟೋರೆಂಟ್, ಹೋಟೆಲ್‌ಗೆ 1 ಸಾವಿರ ಗ್ಯಾಸ್ ಮಾತ್ರ ಕೊಡಲು ಅವಕಾಶ ಇದೆ. ಯಾರಿಗೆ ಕೊಡಬೇಕು ಅಂತ ನಮಗೆ ಗೊತ್ತಾಗುತ್ತಿಲ್ಲ. ಹೀಗಾಗಿ ಒಂದು ವಾರ ಸಹಿಸಿಕೊಳ್ಳಬೇಕು. ಸಹಕಾರ ಕೊಡಬೇಕು. ಕೇಂದ್ರ ಸರ್ಕಾರ ಇರಾನ್ ಜೊತೆ ಮಾತಾಕತೆ ಮಾಡಿ ಪ್ರಯತ್ನ ಮಾಡುತ್ತಿದೆ. 16 ಶಿಪ್ ಕ್ಯೂನಲ್ಲಿ ಇದೆ. ಅದು ಬಂದರೆ ಸಮಸ್ಯೆ ಸರಿ ಆಗುತ್ತದೆ. ಹೋಟೆಲ್ ಅವರು ಒಂದು ವಾರ ಸಹಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ನಾವು ಹೋಟೆಲ್ ಅಸೋಸಿಯೇಷನ್ ಅವರ ಜೊತೆ ಮಾತಾಡಿದ್ದೇವೆ. ಹೋಟೆಲ್ ಅವರು ಒಂದು ವಾರ ಸಹಿಸಿಕೊಂಡರೆ 15 ಸಾವಿರ ಸಿಲಿಂಡರ್ ಸಂಗ್ರಹ ಮಾಡಿ ಅದನ್ನ ಹೇಗೆ ಹಂಚಿಕೆ ಮಾಡಬೇಕು ಅಂತ ಅಸೋಸಿಯೇಷನ್ ಅವರನ್ನ ಕರೆದು ಮಾತಾಡಿ ಹಂಚಿಕೆ ಮಾಡುತ್ತೇವೆ. ಯುದ್ಧ ಆಗ್ತಿದೆ ಹೋಟೆಲ್ ಅವರು ಸ್ವಲ್ಪ ಸಹಕಾರ ಕೊಡಬೇಕು ಎಂದರು.

ಶಾಸಕರ ಭವನದಲ್ಲಿ ಗ್ಯಾಸ್ ಸಮಸ್ಯೆ ವಿಚಾರ ಅಧಿವೇಶನ ಮುಗಿಯೋವರೆಗೂ ಶಾಸಕರ ಭವನಕ್ಕೆ ಕೊಡಬೇಕಾದ ಗ್ಯಾಸ್‌ನಲ್ಲಿ 50% ಗ್ಯಾಸ್ ಪೂರೈಕೆ ಮಾಡುತ್ತೇವೆ ಎಂದು ತಿಳಿಸಿದರು.