ತಮಿಳುನಾಡಿನ ಮಧುರೈನಲ್ಲಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ ಮದುವೆ ಆಮಂತ್ರಣ ಪತ್ರಿಕೆ-ಕಹಳೆ ನ್ಯೂಸ್
ತಮಿಳುನಾಡು : ಜಾಲತಾಣಗಳ ಜಾಲದಲ್ಲಿ ಸಿಕ್ಕಿರೊ ಜನತೆಗೆ ವೈರಲ್ ಮಾಡಲು ವಿಷಯಗಳೇನೂ ಕಮ್ಮಿಯಾ ಅನ್ನುವವರ ಮಧ್ಯೆ ಇಲ್ಲೋಂದು ಮದುವೆ ಆಮಂತ್ರಣ ಪತ್ರಿಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಕೊರೋನಾ ಲಾಕ್‍ಡೌನ್‍ನಿಂದ ಭಾರತ ಕೊಂಚ ಸಡಿಲಿಕೆ ಕಾಣುತ್ತಿರುವ ಈ ಸಂದರ್ಭದಲ್ಲಿ ವಿವಾಹ ಕಾರ್ಯಗಳು ನಡೆಯುತ್ತಿದ್ದು, ಸಾಮಾನ್ಯವಾಗಿ ಮದುವೆಗಳಲ್ಲಿ ಜನರು ವಸ್ತು ಇಲ್ಲವೇ ನಗದು ರೂಪದ ಉಡುಗೊರೆಗಳನ್ನು ಪಡೆಯುತ್ತಾರೆ. ಹೀಗಿರುವಾಗ ಇಲ್ಲೊಂದು ಮದುವೆ ಹೊಸ ರೂಪದಲ್ಲಿ ಉಡುಗೊರೆಯನ್ನು ಪಡೆಯುತ್ತಿರುವುದು...







