Wednesday, June 17, 2026

ಸುದ್ದಿ

ಬೆಂಗಳೂರುರಾಜ್ಯಸುದ್ದಿ

ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ : ಬೆಂಗ್ಳೂರಲ್ಲಿ 6 ವಿದೇಶಿ ಮಹಿಳೆಯರು ವಶಕ್ಕೆ-ಕಹಳೆ ನ್ಯೂಸ್

ಬೆಂಗಳೂರು: ನಗರದ ಕೋರಮಂಗಲ  ಚೆಕ್‌ಪೋಸ್ಟ್‌ ಬಳಿ ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ 6 ವಿದೇಶಿ ಮಹಿಳೆಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ನಿಂತು ಆರು ಮಹಿಳೆಯರು ಪುರುಷರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. 6 ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ವಿದೇಶಿ ಮಹಿಳೆಯರ ಬಳಿ ಇರುವ ಪಾಸ್‌ಪೋರ್ಟ್, ವೀಸಾ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಕೋರಮಂಗಲ ಪೊಲೀಸ್...
ಚಿತ್ರದುರ್ಗಜಿಲ್ಲೆಸುದ್ದಿ

ಚಳ್ಳಕೆರೆ ಬಳಿ ಬೆಂಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಪಲ್ಟಿ : 44 ಪ್ರಯಾಣಿಕರು ಪಾರು – ಕಹಳೆ ನ್ಯೂಸ್

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ   ಮಂಗಳವಾರ ಬೆಳಗ್ಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದು  ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ 44 ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿಗೆ  ಪ್ರಯಾಣಿಸುತ್ತಿದ್ದ ಈ ಸರ್ಕಾರಿ ಬಸ್, ಹೆಗ್ಗೆರೆ ಗ್ರಾಮದ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಉರುಳಿ ಬಿದ್ದಿದೆ. ಬಸ್ ಪಲ್ಟಿಯಾದ ಭೀಕರತೆಗೆ ಕ್ಷಣಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು....
ರಾಜ್ಯಸುದ್ದಿ

ಇಂಡೋನೇಷ್ಯಾದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ : 7 ಪ್ರಯಾಣಿಕರು ಸಾವು, 81 ಮಂದಿಗೆ ಗಾಯ-ಕಹಳೆ ನ್ಯೂಸ್

ಜಕಾರ್ತಾ: ಇಂಡೋನೇಷ್ಯಾದ  ಜಕಾರ್ತಾ ಹೊರವಲಯದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿದ್ದಾರೆ. ಜಕಾರ್ತಾ ಹೊರವಲಯದ ಬೆಕಾಸಿಯಲ್ಲಿ  ಸೋಮವಾರ ತಡರಾತ್ರಿ ಪ್ರಯಾಣಿಕ ರೈಲು ಹಾಗೂ ಮತ್ತೊಂದು ರೈಲಿನ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇನ್ನೂ ಹಲವು ಪ್ರಯಾಣಿಕರು ರೈಲಿನೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಹಳಿಯಲ್ಲಿ ನಿಂತಿತ್ತು....
ಬೆಂಗಳೂರುರಾಜ್ಯಸುದ್ದಿ

ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಅಗ್ನಿ ಅವಘಡ : ಗೋಡೆ ಹಾರಿ ಜೀವ ಉಳಿಸಿಕೊಂಡ ಬೆಂಗಳೂರಿನ ಪಿಜಿ ಯುವತಿಯರು -ಕಹಳೆ ನ್ಯೂಸ್

ಬೆಂಗಳೂರು: ರಾಜಧಾನಿಯ ನಂದಿನಿ ಲೇಔಟ್‌ನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ  ಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್‌ವೊಂದು ಸಂಪೂರ್ಣ ಭಸ್ಮವಾಗಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಲೇಡಿಸ್ ಪಿಜಿಗೂ ಹಬ್ಬಿದ ಪರಿಣಾಮ ಯುವತಿಯರು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನಂದಿನಿ ಲೇಔಟ್ ವ್ಯಾಪ್ತಿಯ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಮನೆಯ ಮುಂಭಾಗದ ಮರಗಳು ಹಾಗೂ ಕಬ್ಬಿಣದ ಗೇಟ್‌ಗಳು ಕೂಡ...
ಜಿಲ್ಲೆಸುದ್ದಿಹಾಸನ

ಹಾಸನದ ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‍ನಲ್ಲಿ ರ‍್ಯಾಗಿಂಗ್‌ ಮಾರಾಮಾರಿ : ಹಲವರಿಗೆ ಗಾಯ -ಕಹಳೆ ನ್ಯೂಸ್

ಹಾಸನ: ಇಲ್ಲಿನ  ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ರ‍್ಯಾಗಿಂಗ್‌ ವಿಚಾರಕ್ಕೆ ಸಿನಿಯರ್‌ ಹಾಗೂ ಜ್ಯೂನಿಯರ್‌ ವಿದ್ಯಾರ್ಥಿಗಳ  ನಡುವೆ ಮಾರಾಮಾರಿ ನಡೆದಿದೆ. ಹಾಸ್ಟೆಲ್‍ನಲ್ಲಿರುವ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಜ್ಯೂನಿಯರ್ ವಿದ್ಯಾರ್ಥಿಗಳ ಮೇಲೆ ಸೀನಿಯರ್ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಗಲಾಟೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳು ಕಾಲೀಜಿನ ಡೀನ್‌ ನಟರಾಜ್‌ ಅವರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳ ದೂರು ಆಧರಿಸಿ ತನಿಖೆಗೆ...
ಜಿಲ್ಲೆಸುದ್ದಿ

ಇದು ನನ್ನ ಕೊನೆಯ ರ‍್ಯಾಲಿ, ಫಲಿತಾಂಶದ ನಂತರ ಪ್ರಮಾಣವಚನ ಸಮಾರಂಭಕ್ಕೆ ಬರುತ್ತೇನೆ: ಪ್ರಧಾನಿ ಮೋದಿ

ಕೋಲ್ಕತ್ತಾ: ಇದು ನನ್ನ ಕೊನೆಯ ರ‍್ಯಾಲಿ, ಫಲಿತಾಂಶದ ನಂತರ ಪ್ರಮಾಣವಚನ ಸಮಾರಂಭಕ್ಕೆ ಬರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ  ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಂದು (ಏ.27) ಬರ್ರಾಕ್‌ಪುರ್‌ದಲ್ಲಿ ಆಯೋಜಿಸಲಾದ ರ‍್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದರು. ಹೆಲಿಪ್ಯಾಡ್‌ನಿಂದ ಇಲ್ಲಿಗೆ ಬರುವಾಗ ಸುಮಾರು ಎರಡು ಕಿ.ಮೀ ದೂರದಲ್ಲಿ ಎರಡೂ ಕಡೆ ಭಾರೀ ಜನಸಮೂಹವಿತ್ತು. ಬೆಳಗ್ಗೆ ಅಷ್ಟು ಮಂದಿ ನನ್ನನ್ನು ಆಶೀರ್ವದಿಸಲು...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬರಿಮಾರು ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ ದುರಸ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜುರಾದ ಅನುದಾನದ ಮಂಜುರಾತಿ ಪತ್ರ ಹಸ್ತಾಂತರ -ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಬಂಟ್ವಾಳ ತಾಲೂಕು ಬರಿಮಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿಗೆ ರೂಪಾಯಿ. 30 ಸಾವಿರ ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಇದರ ಮಾಣಿ ವಲಯದ ಮೇಲ್ವಿಚಾರಕಿ ಆಶಾ ಪಾರ್ವತಿ, ಬರಿಮಾರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರೋಹಿಣಿ, ಸದಸ್ಯರಾದ ಶಶಿಪ್ರಭಾ, ನಳಿನಿ,ಶಾಲಾ...
ಜಿಲ್ಲೆದಕ್ಷಿಣ ಕನ್ನಡಸುದ್ದಿ

ಮಾಲಾಡಿ–ಪುರಿಯ ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ: ಶಾಸಕ ಹರೀಶ್ ಪೂಂಜ -ಕಹಳೆ ನ್ಯೂಸ್

ಪುರಿಯ-ಮಾಲಾಡಿ, ಪುಂಜಾಲ ಕಟ್ಟೆ-  ಮಡಂತ್ಯಾರು, ಕುಕ್ಕೇಡಿ ಭಾಗದ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯಾಗಿದ್ದ ಮಾಲಾಡಿ–ಪುರಿಯ ರಸ್ತೆ ಡಾಮರೀಕರಣ ಕಾಮಗಾರಿಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಮಹತ್ವದ ಕಾಮಗಾರಿಗಾಗಿ ರೂ.50.00 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಮಂಗಳೂರು ಕಾವೂರು ಮೂಲದ ಮುಗೆರೋಡಿ ಕನ್ಸ್ಟ್ರಕ್ಷನ್ ಸಂಸ್ಥೆಯವರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ವಿಧಾನಸಭಾ...
1 56 57 58 59 60 3,395
Page 58 of 3395