ದೀನದಯಾಳ್ ಉಪಾಧ್ಯಾಯರ ನೆನಪಿನಲ್ಲಿ ದೀಪಾವಳಿಯಂದು ಸಾವಿರಾರು ಜನರಿಗೆ ದಾನಧರ್ಮ | ಬಡವರ ಆಶಾಕಿರಣ ಪುತ್ತೂರಿನ ಮುಂದಿನ ಶಾಸಕ ಆಶೋಕ್ ರೈ ..?
ಪುತ್ತೂರು : ಎಳವೆಯಲ್ಲೇ, ಇಪತ್ತು ರೂಪಾಯಿ ಜೇಬಿನಲ್ಲಿ ಇಟ್ಟುಕೊಂಡು ಮೈಸೂರಿಗೆ ಉನ್ನತ ಶಿಕ್ಷಕ್ಕೆಂದು ತೆರಳಿದ ಅಶೋಕ್ ರೈ ನಾಲ್ಕು ರೂಪಾಯಿಯಲ್ಲಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು. ಸೈಕಲ್ಗಳಲ್ಲಿ ತೆರಳಿ ಜ್ಯೂಸ್ ಮಾರಾಟ ಮಾಡಿ ಹೊಟ್ಟೆ ಬಟ್ಟೆಕಟ್ಟಿ ಬಡತನದಲ್ಲಿ ಬದುಕನ್ನು ಸಾಗಿಸುತ್ತಾ, ರೆನೋಡ್ಸ್ ಕಂಪೆನಿಯ ಪೆನ್ನಿನ ಡೀಲರ್ ಶಿಪ್ ಪಡೆದು ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ಆಟೋ ಓಡಿಸಿ, ಗಾಡಿ ಓಡಿಸಿ ಮಾರಟ ಮಾಡಿ ಡಿಗ್ರಿ ಮುಗಿಸುದರೊಳಗಾಗಿ ಸತತ ಪರಿಶ್ರಮ ಮತ್ತು ಶ್ರದ್ಧೆಯ ಫಲಶ್ರುತಿಯಾಗಿ...







