ವೇಗವಾಗಿ ಚಲಿಸುತ್ತಿದ್ದ ಆಯಂಬುಲೆನ್ಸ್: ಎರಡು ಬೈಕ್‌ಗೆ ಡಿಕ್ಕಿ; ಇಬ್ಬರ ಸಾವು – ಕಹಳೆ ನ್ಯೂಸ್
ಬೆಂಗಳೂರು: ವೇಗವಾಗಿ ಚಲಿಸುತ್ತಿದ ಆಯಂಬುಲೆನ್ಸ್ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಕೆ.ಎಚ್. ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಬಳಿಕ ಪರಾರಿಯಾಗಿದ್ದ ಆಯಂಬುಲೆನ್ಸ್ ಚಾಲಕನನ್ನು ಪೊಲೀಸರು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರತ್ಯಕ್ಷದರ್ಶಿ ದಾಖಲಿಸಿರುವ ದೂರಿನಲ್ಲಿ, ಆಯಂಬುಲೆನ್ಸ್ ಶಾಂತಿನಗರದಿಂದ ಲಾಲ್‌ಬಾಗ್ ಕಡೆಗೆ ಅತ್ಯಂತ ವೇಗವಾಗಿ ಚಲಿಸುತ್ತಿತ್ತು. ಇಸ್ಮಾಯಿಲ್ ನಥನ್ ದಬಾಪು(40) ಮತ್ತು...







