ಆಭರಣ ಪ್ರಿಯರಿಗೆ ಬಿಗ್ ಶಾಕ್ : ಒಂದೇ ದಿನದಲ್ಲಿ 6,250 ರೂ. ಏರಿಕೆಯಾದ ಚಿನ್ನದ ಬೆಲೆ – ಕಹಳೆ ನ್ಯೂಸ್
ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್. ಚಿನ್ನದ ಬೆಲೆಯಲ್ಲಿ ಬರೋಬ್ಬರಿ 6250 ರೂ. ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 96,450 ರೂ. ತಲುಪಿದೆ. ಹೌದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಒಂದೇ ದಿನ ರು.ಏರಿಕೆಯಾಗಿ, 96,450 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ ಬರೆದಿದೆ. ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾದ ಕಾರಣ ದರದಲ್ಲಿ ಏರಿಕೆಯಾಗಿದೆ. ಇದರ...







