100 ಗಂಟೆ ಪೂರ್ಣ – ಗಿನ್ನೆಸ್ ದಾಖಲೆಯತ್ತ ಮುನ್ನುಗ್ಗುತ್ತಿರುವ ವಿಶ್ವ ಕೊಂಕಣಿ ಸಂಗೀತ ಮಹಾಸಂಗಮ! – ಕಹಳೆ ನ್ಯೂಸ್
ಮಂಗಳೂರು : ನಗರದ ಪುರಭವನದಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯು ದಿ. ಎರಿಕ್ ಒಝೇರಿಯೊ ಅವರ ಸ್ಮರಣಾರ್ಥ ಹಮ್ಮಿಕೊಂಡ 12 ದಿನ 12 ಗಂಟೆ 12 ನಿಮಿಷಗಳ ವಿಶ್ವ ಕೊಂಕಣಿ ಸಂಗೀತ ಮಹಾಮೇಳದಲ್ಲಿ ನಡೆಯುತ್ತಿರುವ ಕೊಂಕಣಿ ಮಾತೃಭಾಷಿಕರ ಕೊಂಕ್ಣಿ ನಿರಂತರಿ ಸಂಸಾರ್ ಸರಾಸರಿ ಗಿನ್ನಿಸ್ ದಾಖಲೆಯ ಪ್ರಯತ್ನದ ಕಾರ್ಯಕ್ರಮವು 100 ಗಂಟೆ ಪೂರ್ಣಗೊಂಡು ಗಿನ್ನೆಸ್ ದಾಖಲೆಯತ್ತ ಮುನ್ನುಗ್ಗುತ್ತಿದೆ.
100 ಗಂಟೆ ಪೂರ್ಣಗೊಂಡ ಸಂದರ್ಭದಲ್ಲಿ ಶನಿವಾರ ಬೆಳಗ್ಗೆ 10.00 ಗಂಟೆಗೆ ಕೊಂಕಣಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಮಾಂಡ್ ಸೊಭಾಣ್ ಅಧ್ಯಕ್ಷ ಲೂವಿ ಪಿಂಟೋ, ಸಂಘಟಕರಾದ ಸ್ಟ್ಯಾನಿ ಅಲ್ವಾರಿಸ್, ಅರುಣ್ ರಾಜ್, ಜಾಯಿಸ್ ಒಝೆರಿಯೊ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಮಂಗಳೂರಿನ ಟೌನ್ ಹಾಲ್ ಸಾಂಪ್ರದಾಯಿಕ ಹಾಗೂ ಆಧುನಿಕ ಕೊಂಕಣಿ ಹಾಡುಗಳಿಂದ ಗಂಗೋತ್ರಿಯಾಗಿದ್ದು, ಅಪಾರ ಜನಸ್ತೋಮವನ್ನು ಆಕರ್ಷಿಸುತ್ತಿದೆ. ವಿಶ್ವ ಸಂಗೀತ ರಂಗದಲ್ಲೇ ಅಪರೂಪದ ಈ ಸಾಧನೆಯನ್ನು ಪ್ರಪಂಚದಾದ್ಯಂತದ ಸಂಗೀತ ಪ್ರೇಮಿಗಳು ಹಾಗೂ ಸಾಂಸ್ಕೃತಿಕ ಆಸಕ್ತರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಈ ಗಾಯನ ಯಜ್ಞದಲ್ಲಿ ಪ್ರದರ್ಶಕರು ಮತ್ತು ವೀಕ್ಷಕರು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದು, ಹಗಲು-ರಾತ್ರಿ ತಾಂತ್ರಿಕ, ವೇದಿಕೆ ಮತ್ತು ಕಾರ್ಯಾಚರಣೆಯ ವ್ಯವಸ್ಥೆಗಳು ಸುಗಮವಾಗಿ ಸಾಗುತ್ತಿವೆ.











