Sunday, June 21, 2026
ಸುದ್ದಿ

ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವು – ಕಹಳೆ ನ್ಯೂಸ್

ಮನೆಗೆ ಅಳವಡಿಸಿದ್ದ ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದಿಂದ ವರದಿಯಾಗಿದೆ.

ಜಾಹೀರಾತು


ಬೊಮ್ಮಾರು ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ(55 ಮೃತ ದುರ್ದೈವಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಮಲಗುವ ಸಮಯದಲ್ಲಿ ಇನ್ವರ್ಟರ್‌ಗೆ ವಿದ್ಯುತ್ ಸಂಪರ್ಕಿಸುವ ಪ್ಲಗ್‌ನ್ನು ತೆಗೆದು ಮಲಗುತ್ತಿದ್ದರೆನ್ನಲಾಗಿದೆ.
ನಿನ್ನೆ ರಾತ್ರಿಯೂ ಸುಮಾರು 10 ಗಂಟೆಯ ವೇಳೆಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತದರೂ ಅಷ್ಟಾಗಲೇ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.