Thursday, November 5, 2026
ಸುದ್ದಿ

ರಾಜ್ಯದ ಜನರಿಗೆ ಮತ್ತೊಂದು ಶಾಕ್‌ : ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ಹೆಚ್ಚಳ – ಕಹಳೆ ನ್ಯೂಸ್

ಬೆಂಗಳೂರು : ದೀಪಾವಳಿ ಹಬ್ಬದ ಹೊತ್ತಲ್ಲೇ ರಾಜ್ಯದ ಜನರಿಗೆ ಬೆಲೆ ಏರಿಕೆಯ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯಿಂದ ಗ್ರಾಹಕರು ಬೇಸರಗೊಂಡಿರುವ ಬೆನ್ನಲ್ಲೇ, ಇದೀಗ ನಂದಿನಿ ಬ್ರ್ಯಾಂಡ್‌ನ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಉತ್ಪನ್ನಗಳ ಬೆಲೆಯನ್ನೂ ಕೆಎಂಎಫ್ ಹೆಚ್ಚಿಸಿದೆ. ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.

ಜಾಹೀರಾತು

ಕೆಎಂಎಫ್ ಪ್ರಕಟಿಸಿರುವ ಪರಿಷ್ಕೃತ ದರಪಟ್ಟಿಯಂತೆ ಹಲವು ಉತ್ಪನ್ನಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಮುಖವಾಗಿ ನಂದಿನಿ ತುಪ್ಪದ ಬೆಲೆ ಲೀಟರ್‌ಗೆ 100 ರೂ. ಹೆಚ್ಚಳವಾಗಿದೆ. ಬೆಣ್ಣೆ ಹಾಗೂ ಪನ್ನೀರ್ ದರಗಳಲ್ಲೂ ಏರಿಕೆ ಕಂಡುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಂದಿನಿ ತುಪ್ಪದ ಲೀಟರ್‌ಗೆ ಹಳೆಯ ದರ 750 ರೂ ಇದ್ದರೆ, ಇದೀಗ 850ಕ್ಕೆ ಏರಿಕೆಯಾಗಿದೆ. ಅಂದರೆ ಲೀಟರ್‌ಗೆ 100 ರೂ ಹೆಚ್ಚಳವಾಗಿದೆ. ನಂದಿನಿ ಬೆಣ್ಣೆಯ ಪ್ರತಿ ಕೆಜಿ ದರ 700ರಿಂದ 780ಕ್ಕೆ ಏರಿಕೆಯಾಗಿದ್ದು, 80 ಹೆಚ್ಚಳವಾಗಿದೆ. ಪನ್ನೀರ್ ಪ್ರತಿ ಕೆಜಿ ದರ 408ರಿಂದ 485ಕ್ಕೆ ಏರಿಕೆಯಾಗಿದ್ದು, 77 ಹೆಚ್ಚಳವಾಗಿದೆ. ಇದರ ಜೊತೆಗೆ ವಿವಿಧ ಪ್ಯಾಕಿಂಗ್‌ನ ತುಪ್ಪ ಮತ್ತು ಬೆಣ್ಣೆ ಉತ್ಪನ್ನಗಳ ದರಗಳಲ್ಲೂ ಹೆಚ್ಚಳ ಮಾಡಲಾಗಿದೆ.